ಪ್ರಾಮಾಣಿಕ ಅಧ್ಯಯನ, ಸೃಜನಶೀಲತೆ ಉಳಿಸಿಕೊಳ್ಳಿ
ಕ.ಪ್ರ.ವಾರ್ತೆ ತುಮಕೂರು ಜೂ.11
ಜಾಗತೀಕರಣ, ಖಾಸಗೀಕರಣ, ಔದ್ಯೋಗೀಕರಣದ ಸವಾಲನ್ನು ಎದುರಿಸಲು ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಾಮಾಣಿಕ ಅಧ್ಯಯನ ಮತ್ತು ಸೃಜನಶೀಲತೆ ಉಳಿಸಿಕೊಳ್ಳಬೇಕೆಂದು ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಮತ್ತು ಸೋಶಿಯಲ್ ವರ್ಕ್ಸ್ನ ಪ್ರಾಂಶುಪಾಲ ಪ್ರೊ. ಟಿ. ಗಂಗಾಧರಯ್ಯ ಅಭಿಪ್ರಾಯಪಟ್ಟರು.
ಅವರು ಕಾಲೇಜು ವತಿಯಿಂದ ಎಂಎಸ್ಡಬ್ಲ್ಯೂ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಕಾರ್ಯದಂತಹ ವೃತ್ತಿಪರ ವಿಭಾಗಕ್ಕೆ ಹಿರಿಯ ವಿದ್ಯಾರ್ಥಿಗಳ ಜಾಲ ಸೃಷ್ಟಿಸಿಕೊಂಡು ಹಿಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ನೆರವು ನೀಡಿ ಸಮಾಜ ಕಾರ್ಯದಂತಹ ಬಹುಮುಖಿ ಶಿಸ್ತಿನ ಅಧ್ಯಯನ ಬೆಳೆಸಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ. ಅಶೋಕ ಆಂಟೋನಿ ಡಿಸೋಜ ಮಾತನಾಡಿ ವೃತ್ತಿಪರ ಅಧ್ಯಯನಕ್ಕೆ ಹೆಚ್ಚಿನ ಉತ್ಸಾಹ ಮತ್ತು ಕನಸುಗಳನ್ನು ಕಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದು ತಿಳಿಸಿದರು.
ಗುರುಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜು ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಮತ್ತು ಹೆಚ್ಚು ಆಸಕ್ತಿಯಿಂದ ಅಧ್ಯಯನ ಮಾಡಿ ಜ್ಞಾನಸಂಪಾದನೆ ಮಾಡಬೇಕೆಂದರು.
ಡಾ. ಕೆ.ಜಿ. ಪರಮೇಶ್ವರ್, ಎಂಎಸ್ಡಬ್ಲ್ಯೂ ವಿದ್ಯಾರ್ಥಿಗಳಾದ ಹರೀಶ್, ರಂಗರಾಜು, ಪ್ರವೀಣ್, ಮಂಜುಳಾ, ಲೋಕೇಶ್, ಕಾಮರಾಜ, ಪಂಪನಗೌಡ, ಪೃಥ್ವಿ ಅನಿಸಿಕೆ ಹಂಚಿಕೊಂಡರು. ಸಂಯೋಜಕ ಬಿ.ಪಿ. ಶಿವಲಿಂಗಪ್ಪ, ಮಂಜುನಾಥಯ್ಯ, ಶಶಿಕಾಂತರಾವ್, ಸುಜಾತ, ರೇಖಾ ಹಾಜರಿದ್ದರು. ಶೃತಿ ಡಿ.ಎಸ್. ಸ್ವಾಗತಿಸಿ ದಿವ್ಯಾ ನಿರೂಪಿಸಿ ಶಿವರಾಜು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

