ತುಮಕೂರು

ಬಾಲ ಕಾರ್ಮಿಕ ಪದ್ಧತಿ ಪ್ರಜ್ಞಾವಂತ ಸಮಾಜಕ್ಕೆ ಕಳಂಕ

Published On :

ಕ.ಪ್ರ.ವಾರ್ತೆ    ಕುಣಿಗಲ್    ಜೂ. 12
ಬಾಲ ಕಾರ್ಮಿಕ ಪದ್ಧತಿ ಪ್ರಜ್ಞಾವಂತ ಸಮಾಜಕ್ಕೆ ಕಳಂಕ ತರುವಂತ ವ್ಯವಸ್ಥೆಯಾಗಿದ್ದು, ಎಳೆಯ ವಯಸಿನ ಮಕ್ಕಳು ಅವರ ಬಾಲ್ಯವನ್ನು ಪರಿಪೂರ್ಣವಾಗಿ, ಸ್ವಚ್ಛಂದವಾಗಿ ಅನುಭವಿಸುವ  ವಾತಾವರಣ ನಿರ್ಮಿಸುವ ಮೂಲಕ ಈ ಅನಿಷ್ಠ ಪದ್ಧತಿಯನ್ನು ತೊಡದು ಹಾಕಲು, ಸಮಾಜದ ಎಲ್ಲಾ ನಾಗರಿಕರು ಶ್ರಮಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಲ್.ಶಾರದ ತಿಳಿಸಿದರು.
ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪ.ಪೂ.ಕಾಲೇಜಿನ ಪ್ರೌಡಶಾಲೆಯಲ್ಲಿ ಜಿಲ್ಲಾ, ತಾಲೂಕು ಕಾನೂನು ಸೇವೆಗಳೆ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ, ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯ ನಿಯಂತ್ರಣಕ್ಕೆ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಆದರೆ, ಬಾಲಕಾರ್ಮಿಕ ಪದ್ಧತಿ ಪ್ರಜ್ಞಾವಂತ ಸಮಾಜಕ್ಕೆ ಕಳಂಕ ತರುವಂತ ವ್ಯವಸ್ಥೆಯಾಗಿರುವ ಕಾರಣ, ಸಮುದಾಯದಲ್ಲಿನ ಎಲ್ಲರೂ ಬಾಲಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸುವ ಮೂಲಕ, ಅನಿಷ್ಠ ಪದ್ಧತಿಯ ನಿರ್ಮೂಲನಕ್ಕೆ ಮುಂದಾಗಬೇಕಿದೆ ಎಂದರು.
ನ್ಯಾಯ ಒದಗಿಸಬೇಕು: ಪ್ರೌಢಾವಸ್ಥೆಯಲ್ಲಿನ ವಿದ್ಯಾರ್ಥಿಗಳು, ಬಾಲಕಾರ್ಮಿಕ ವಿರೋಧಿ ಕಾನೂನಿನ ಬಗ್ಗೆ ಸಾಕಷ್ಟು ಅರಿವನ್ನು ಹೊಂದುವ ಮೂಲಕ ಮಕ್ಕಳಿಗಿರುವ ಹಕ್ಕುಗಳ ಬಗ್ಗೆ ಅರಿವನ್ನು ಹೊಂದಿ, ಪರಿಣಾಮಕಾರಿಯಾಗಿ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನಕ್ಕೆ ಸಹಕಾರ ನೀಡುವುದರ ಜೊತೆಯಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬಾಲಕಾರ್ಮಿಕ ಪದ್ಧತಿಗಳು ಕಂಡುಬಂದಲ್ಲಿ ಶೋಷಣೆಗೆ ಒಳಗಾದ ಮಕ್ಕಳಿಗೆ ಸಮರ್ಪಕ ನ್ಯಾಯದೊರಕಿಸಿಕೊಡುವ ದಿಸೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಹಿರಿಯ ವಕೀಲ ಎ.ಆರ್.ರಂಗಸ್ವಾಮಿ ಮಕ್ಕಳ ಹಕ್ಕುಗಳು ಹಾಗೂ ಬಾಲಕಾರ್ಮಿಕರ ನಿಯಂತ್ರಣಕ್ಕಾಗಿ ಇರುವ ವಿವಿಧ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು. ನ್ಯಾಯಾಧೀಶರಾದ ಎನ್. ಮುನಿರಾಜು, ಬಿ.ಕೆ.ದಾಕ್ಷಾಯಿಣಿ, ಎಪಿಪಿ ಸುರೇಖ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ದಯಾನಂದ್, ತಹಸೀಲ್ದಾರ್ ಜಗದೀಶ್, ಬಿಇಒ ಲೋಕೇಶ್, ವಕೀಲರಾದ ಸುರೇಶ್, ಚಂದ್ರಶೇಖರ್, ಪ್ರಾಚಾರ್ಯ ಕುಮಾರಯ್ಯ, ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ಬಾಲಕಾರ್ಮಿಕ ವಿರೋಧಿ ಜಾಥಾ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.