ತುಮಕೂರು

ನೀರು, ಪಡಿತರ ಚೀಟಿ ಸಮಸ್ಯೆ ಪರಿಹಾರಕ್ಕೆ ತುರ್ತು ಸಭೆ

Published On :

ಚಿಕ್ಕನಾಯಕನಹಳ್ಳಿ:  ತಾಲೂಕಿನಲ್ಲಿ ತಲೆದೋರಿರುವ ಕುಡಿಯುವ ನೀರು ಮತ್ತು ಪಡಿತರ ಚೀಟಿ ಸಮಸ್ಯೆಯನ್ನು ಪರಿಹರಿಸಲು ತಾಪಂ ಅಧ್ಯಕ್ಷರು ತುರ್ತು ಸಭೆ ಕರೆದಿದ್ದಾರೆ. ಕಳೆದ ಆರು ತಿಂಗಳಿಂದಲೂ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಕೆಲವೆಡೆ ನಾಲ್ಕಾರು ಕೊಳವೆ ಬಾವಿಗಳನ್ನು ಕೊರೆದರೂ ಸಹ ನೀರು ಸಿಗದೆ ತಾಲೂಕಿನ ಜನತೆ ಕಂಗಾಲಾಗಿದ್ದರೆ. ಇಂತಹ  ಪರಿಸ್ಥಿಯಲ್ಲಿ  ಪ್ರಕೃತಿಯು  ಸಹ ಮುನಿದಿದೆ. ತಾಲೂಕಿನಲ್ಲಿ ಸುಮಾರು 25ರಿಂದ 30 ಹಳ್ಳಿಗಳು ಮಿತಿಮೀರಿದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಗ್ರಾಮಪಂಚಾಯ್ತಿಗಳಿಗೆ ಮತ್ತು ತಾಪಂಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬಳಸಿಕೊಳ್ಳಲು, ಸರ್ಕಾರದಲ್ಲಿ ಬಿಳಿಯಾನೆಯಂತಿರುವ, ಹವಾನಿಯಂತ್ರಿತ ಕಚೇರಿಗಳಲ್ಲಿ ಕೂತು ಆಡಳಿತ ನಡೆಸುತ್ತಿರುವ ಐಎಎಸ್ ಅಧಿಕಾರಿಗಳು ಅನಿರ್ಬಂಧಿತ ಮತ್ತು 13 ನೇ ಹಣಕಾಸು ನಿಧಿಯಿಂದ ಬಿಡುಗಡೆಯಾಗಿರುವ ಅನುದಾನವನ್ನು ಕಟ್ಟಡ  ನಿರ್ಮಾಣಕ್ಕೆ ಮಾತ್ರ ವಿನಿಯೋಗಿಸತಕ್ಕದ್ದೆಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇದರಿಂದ ಗ್ರಾಮಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಮೂಲಭೂತ ಸಮಸ್ಯೆಯಾದ ಮತ್ತು ಅತಿ ಅವಶ್ಯಕವಾದ ಕುಡಿಯುವ ನೀರಿನ ನಮಸ್ಯೆಯನ್ನು ಪರಿಹರಿಸಲಾಗದೆ, ಜನರಿಂದ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಪಂಚಾಯ್ತಿಯ ನೂತನ ಅಧ್ಯಕ್ಷರು ಜೂ.18ರಂದು ಮಂಗಳವಾರ 11 ಗಂಟೆಗೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರೆದಿರುವ ಸಭೆಯಲ್ಲಿ ಸಮಸ್ಯೆಗೆ ಯಾವ ರೀತಿ ಪರಿಹಾರ ಕಂಡು ಹಿಡಿಯುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಸಭೆಗೆ ತಾಲೂಕಿನ ಎಲ್ಲಾ ಗ್ರಾಮಪಂಚಾಯ್ತಿಯ ಅಧ್ಯಕ್ಷರು, ಪಿಡಿಓಗಳು ಮತ್ತು ಕಾರ್ಯದರ್ಶಿಗಳನ್ನು ಆಹ್ವಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.