ಶಿಲ್ಪಾಚಾರ್ಯರ ಇತಿಹಾಸ ಕನ್ನಡ ಸಾಹಿತ್ಯಕ್ಕೂ ಪ್ರಾಚೀನವಾದುದು
ಕ.ಪ್ರ. ವಾರ್ತ್ಣೆ ತುಮಕೂರ್ಣು ಜೂ.16
ಕನ್ನಡ ಸಾಹಿತ್ಯಕ್ಕೂ ಪ್ರಾಚೀನವಾದ ಇತಿಹಾಸವನ್ನು ಕರ್ನಾಟಕದ ಶಿಲ್ಪಾಚಾರ್ಯರು ಹೊಂದಿರುವುದು ಶಾಸನಗಳಿಂದ ಬೆಳಕಿಗೆ ಬಂದಿದೆ ಎಂದು ಭದ್ರಾವತಿಯ ನಿವೃತ್ತ ಪ್ರಾಧ್ಯಾಪಕ ಡಾ.ಕುಮಾರಸ್ವಾಮಿ ತಿಳಿಸಿದರು.
ಅಮರಶಿಲ್ಪಿ ಜಕಣಾಚಾರ್ಯ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಆಶ್ರಯದಲ್ಲಿ ನಗರದ ಚಿಕ್ಕಪೇಟೆಯ ವಿಶ್ವಕರ್ಮ, ಕಾಳಿಕಾಂಬ, ಗಾಯತ್ರಿ ದೇವಸ್ಥಾನದ ಸಮುದಾಯಭವನದಲ್ಲಿ ನಡೆದ ವಿಶ್ವಕರ್ಮರ ಸ್ಥಿತಿಗತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕರ್ನಾಟಕದ ಶಿಲ್ಪಾಚಾರ್ಯರು ಕುರಿತು ವಿಷಯ ಮಂಡಿಸಿದರು.
ಸಾಧ್ಯವಿಲ್ಲ: ಕ್ರಿಸ್ತ ಶಕ 3-4ನೇ ಶತಮಾನದಿಂದ ಕನ್ನಡ ಸಾಹಿತ್ಯದ ಯುಗ ಆರಂಭವಾದರೆ ಇದಕ್ಕೂ ಹಿಂದಿನ ಶತಮಾನಗಳಲ್ಲೇ ಕನ್ನಡಿಗ ಶಿಲ್ಪಿಗಳು ರಾಜ್ಯ, ಹೊರ ರಾಜ್ಯದಲ್ಲಿ ತಮ್ಮ ಕಲಾ ಚತುರತೆ ತೋರಿರುವುದು ಅನೇಕ ಶಾಸನಗಳಿಂದ ಬೆಳಕಿಗೆ ಬರುತ್ತದೆ.
ಭೋಜ, ನಾಡೋಜ, ಆಚಾರಿ, ಕಲ್ಲುಕುಟಿಕ, ಸುತ್ರಧಾರಿ, ರೂವಾರಿ, ವಾಸ್ತುಶಿಲ್ಪಿ ಹೆಸರುಗಳು ಅನೇಕ ದೇವಾಲಯಗಳಲ್ಲಿ ಸಿಕ್ಕಿರುವ ಶಾಸನಗಳಲ್ಲಿ ಕೆತ್ತಲ್ಪಟ್ಟಿದೆ. ರಾಜಾಶ್ರಯದಲ್ಲಿದ್ದ ಶಿಲ್ಪಕಲೆಗೆ ಹಿಂದೆ ಹೆಚ್ಚಿನ ಮನ್ನಣೆ ಇದ್ದುದು ಚರಿತ್ರೆಯಿಂದ ತಿಳಿದುಬರುತ್ತದೆ.
ಕರ್ನಾಟಕದ ಶಿಲ್ಪಕಲಾಚಾರ್ಯರ ಅಧ್ಯಯನಕ್ಕೂ ವಿಶ್ವಕರ್ಮ ಜನಾಂಗದ ಕಲೆ-ಸಂಸ್ಕೃತಿಗೂ ಸಂಬಂಧವಿದ್ದು, ಶಿಲ್ಪಕಲೆಯ ಅಧ್ಯಯನವನ್ನು ಜನಾಂಗವನ್ನು ಹೊರತುಪಡಿಸಿ ಮಾಡಲು ಸಾಧ್ಯವಿಲ್ಲವೆಂದರು.
ವಿಶ್ವಕರ್ಮರ ಸಮಸ್ಯೆಗಳನ್ನು ಕುರಿತು ಮಾತನಾಡಿದ ಕೋಲಾರ ಡಿಸಿ ಕಚೇರಿ ಲೆಕ್ಕಾಧಿಕಾರಿ ಲೋಕೇಶ್ ವಿಶ್ವಕರ್ಮ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದವರ ವಿಶ್ವಕರ್ಮ ಸಮುದಾಯದವರು ಕಲೆ ಸಂಸ್ಕೃತಿಯಲ್ಲಿ ಶ್ರೀಮಂತರಾದರೂ ಸಂಘಟನೆ ಕೊರತೆಯಿಂದ ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ವಿಫಲರಾಗಿದ್ದಾರೆ. ಕಮ್ಮಾರಿಕೆ, ಬಡಿಗೆ, ಕರುಕುಶಲ, ಆಭರಣ, ಶಿಲ್ಪದ ಕೆತ್ತನೆ ಕಾರ್ಯದ ಪಂಚಕಸುಬುಗಳನ್ನು ಮಾಡುತ್ತಿರುವ ವಿಶ್ವಕರ್ಮ ಜನಾಂಗದ ಯುವಪೀಳಿಗೆ ಶೈಕ್ಷಣಿಕವಾಗಿ ತಾಂತ್ರಿಕವಾಗಿ ಮುಂದೆ ಬರುವ ಅಗತ್ಯವಿದೆ. ಜನಾಂಗದ ಪ್ರತಿಭಾನ್ವಿತರಿಗೆ ಅಗತ್ಯವಾದ ಪ್ರೋತ್ಸಾಹವನ್ನು ಸಮಾಜದ ಮುಖಂಡರು ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ವಿಶ್ವಕರ್ಮ ಮಹಿಳೆಯರು ಕುರಿತು ಲೇಖಕಿ ಪ್ರೊ.ಅಂಬಾಮಣಿ ಮೂರ್ತಿ ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಪ್ರೊ.ಕೆ.ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಡಾ.ಪೂರ್ವಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ: ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕೆಂದು ಸಮಾರಂಭದಲ್ಲಿ ಒಕ್ಕೊರಲ ಆಗ್ರಹ ವ್ಯಕ್ತವಾಯಿತು. ಈ ಸಂಬಂಧ ಅಮರಶಿಲ್ಪಿ ಜಕಣಾಚಾರ್ಯ ಕಲೆ, ವಿಜ್ಞಾನ, ತಂತ್ರಜ್ಞಾನ ಸಂಸ್ಥೆ ಮುಖೇನ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಇದೇ ವೇಳೆ ಎಸ್ಸೆಸೆಲ್ಸಿ , ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಒಟ್ಟು 35 ಮಂದಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ದೇವಾಲಯ ಅಧ್ಯಕ್ಷ ನಾಗರಾಜಚಾರ್. ಕಾರ್ಯದರ್ಶಿ ಎಚ್.ಎಸ್. ವೆಂಕಟರಮಣಚಾರ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಗೋವರ್ಧನಚಾರ್, ನಿವೃತ್ತ ಡಿಡಿಪಿಐ ಬಿ.ಎನ್. ಕೃಷ್ಣಮೂರ್ತಿ, ಈಶ್ವರಿ, ಜಗದಾಂಬ ನಂಜಪ್ಪ, ಸ್ವಾತಿ ರಾಮಕೃಷ್ಣಚಾರ್, ನಂಜುಂಡಚಾರ್ ಸೇರಿದಂತೆ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

