ತುಮಕೂರು

ಬೇಟೆಗಾರರು ಹಾರಿಸಿದ ಗುಂಡಿಗೆ ಗರ್ಭಿಣಿ ಕರಡಿ ಸಾವು ಬದುಕಿನ ಹೋರಾಟ

Published On :

ಗುಬ್ಬಿ: ಕಾಡುಹಂದಿಯ ಬೇಟೆಗಾರರು ಹಾರಿಸಿದ ಗುಂಡಿಗೆ ಗರ್ಭಧರಿಸಿದ  ಕರಡಿಯೊಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತಾಲೂಕಿನ ಹಾಗಲವಾಡಿ ಹೋಬಳಿಯ ಗಂಗಯ್ಯನಪಾಳ್ಯ ಮಠ ಗ್ರಾಮದಲ್ಲಿ ನಡೆದಿದೆ.
 ಗಂಗಯ್ಯನಪಾಳ್ಯ ಮಠದ ಕರಿಯಪ್ಪನ ಜವೀನಿನಲ್ಲಿ ಕಾಡುಹಂದಿಯ ಬೇಟೆಗಾರರು ಕರಡಿಗೆ ಬಂದೂಕಿನಿಂದ ಗುಂಡು ಹಾರಿಸಿದರು. ಆ ವೇಳೆಗೆ ಜನರು ಬರುತ್ತಿರುವುದನ್ನು ಕಂಡ ಕಾಡುಹಂದಿಯ ಬೇಟೆಗಾರರು ಪರಾರಿಯಾಗಿದ್ದರೆ. ಗುಂಡಿಗೆ ಗರ್ಭೀಣಿ ಕರಡಿ ತೀವ್ರ ಗಾಯಗೊಂಡಿತು. ಕರಡಿಯನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ದೂರವಾಣಿ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಆಧಿಕಾರಿಗಳು ಮತ್ತು ಸಿಬ್ಬಂದಿ ಗುಂಡೇಟಿನಿಂದ ಗಾಯಗೊಂಡಿದ್ದ ಕರಡಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕೆತ್ಸೆಗಾಗಿ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಗುಬ್ಬಿ ಅರಣ್ಯ ಅಧಿಕಾರಿ ಹರೀಶ್, ಅರಣ್ಯ ರಕ್ಷಣಾಧಿಕಾರಿಗಳಾದ ಬಸವರಾಜು, ವೆಂಕೋಜಿರಾವ್, ಚೇಳೂರಿನ ಎಎಸ್‌ಐ ಶಿವಣ್ಣ ಭೇಟಿ ನೀಡಿ ಪರಿಶೀಲಿಸಿ, ಕಾಡುಹಂದಿಯ ಬೇಟೆಗಾರರನ್ನು ಹಾಗೂ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.