ಹಸಿರು ತುಮಕೂರು ಭ್ರಷ್ಟಾಚಾರ: ತನಿಖೆಗೆ ಜಿ.ಎಸ್.ಬಸವರಾಜು ಆಗ್ರಹ
ತುಮಕೂರು: ಹಸಿರು ತುಮಕೂರು ಭ್ರಷ್ಟಾಚಾರ ತನಿಖೆಗೆ ಸಂಸದ ಜಿ.ಎಸ್. ಬಸವರಾಜು ಆಗ್ರಹಿಸಿದ್ದಾರೆ.
ಅವರು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲಾಖಾ ವತಿಯಿಂದ ಕಾಮಗಾರಿ ಮಾಡಲಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ 4 ಲಕ್ಷ ರು. ಗಳನ್ನು ಕಾನೂನುಬಾಹಿರವಾಗಿ ಡ್ರಾ ಮಾಡಿರುವುದು ಖಂಡನೀಯ. ಹಣದ ಬಗ್ಗೆ ತನಿಖೆ ನಡೆಸಲು ಹಿಂದಿನ ಜಿಲ್ಲಾಧಿಕಾರಿ ಆರ್. ಕೆ. ರಾಜು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರೂ, ಸಭಾ ನಡವಳಿಕೆಯನ್ನೇ ಮಾಡದೇ ಇರುವುದು ದುರದೃಷ್ಟಕರ ಎಂದು ಜಿಎಸ್ಬಿ ತಿಳಿಸಿದರು.
ಈಗಾಗಲೇ ಮಂಜೂರಾಗಿರುವ 35 ಲಕ್ಷ ರು. ಹಣದಲ್ಲಿ 25 ಲಕ್ಷ ರು. ಹಣ ಬಿಡುಗಡೆಯಾಗಿದೆ. ಉಳಿದ 10 ಲಕ್ಷ ರು. ಗಳಿಗೆ ಹೊಸದಾಗಿ ಯೋಜನೆ ರೂಪಿಸಿ, ನಗರಾದ್ಯಾಂತ ಗಿಡ ನೆಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತುಮಕೂರು ನಗರದಲ್ಲಿ 36,500 ಗಿಡಗಳನ್ನು ಹಾಕುವ ಹಸಿರು ತುಮಕೂರು ಯೋಜನೆಗೆ ಎಂಪಿಎಲ್ಎಡಿ ಅನುದಾನದಿಂದ ರು. 35 ಲಕ್ಷ ಹಣ ಮಂಜೂರಾಗಿದೆ.
ಈಗಾಗಲೇ ಟೆಂಡರ್ ಕರೆದು ಗುತ್ತಿಗೆದಾರರಿಂದ 16,696 ಗಿಡಗಳನ್ನು ಹಾಕಲಾಗಿದೆ. ತುಮಕೂರು ನಗರಾಧ್ಯಾಂತ ಹಾಕಿರುವ ಗಿಡಗಳಲ್ಲಿ ಹೊಂಗೆ ಗಿಡಗಳು ಮಾತ್ರ ಉತ್ತಮವಾಗಿ ಬೆಳೆದಿವೆ. ಉಳಿದ ಜಾತಿಯ ಗಿಡಗಳನ್ನು ಮೇಕೆ ಮತ್ತಿತರೆ ಪ್ರಾಣಿಗಳ ಹಾವಳಿಯಿಂದ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಸಂಸದರು ತಿಳಿಸಿದರು.
ತರಹೇವಾರಿ ರಾಜಕೀಯಕ್ಕೆ ಅವಕಾಶವಿದೆ
ತುಮಕೂರು: ಇನ್ನೂ 10 ತಿಂಗಳ ಕಾಲಾವಕಾಶವಿದೆ. ಕೆಲಸ ಮಾಡೋಣ. ಅವಧಿ ಮುಗಿದ ನಂತರ, ಅಥವಾ ರಾಜಿನಾಮೆ ಕೊಟ್ಟ ನಂತರ ಮುಂದಿನ ಹಾದಿ ಕುರಿತು ಚಿಂತಿಸುವೆ ಎಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತರಹೇವಾರಿ ರಾಜಕೀಯಕ್ಕೆ ಅವಕಾಶವಿದೆ. ತೃತೀಯ ರಂಗ ಕಟ್ಟುವ ಕುರಿತು ಚಿಂತನೆ ನಡೆದಿದೆ. ಕಾಲ ಹೇಗೆ ಕೂಡಿ ಬರುತ್ತದೋ ನೋಡೋಣ. ತಾವಂತೂ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಯಡಿಯೂರಪ್ಪ ಬಿಜೆಪಿಗೆ ಬರುತ್ತಾರೋ, ಇಲ್ಲವೋ ತಮಗೆ ಗೊತ್ತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

