ಸದಸ್ಯರ ನೋಂದಣಿಗೆ ಚಾಲನೆ ನೀಡದಿದ್ದರೆ ಉಗ್ರ ಪ್ರತಿಭಟನೆ: ವೆಂಕಟೇಶಗೌಡ ಎಚ್ಚರಿಕೆ
ಕುಣಿಗಲ್ ತಾಲೂಕು ಒಕ್ಕಲಿಗರ ಸಂಘ
ಕ.ಪ್ರ.ವಾರ್ತೆ ಕುಣಿಗಲ್ ಜೂ.28
ತಾಲೂಕು ಒಕ್ಕಲಿಗರ ಸಂಘಕ್ಕೆ ಕಳೆದ 60 ವರ್ಷಗಳಿಂದಲೂ ಸ್ಥಳೀಯವಾಗಿರುವ ತಾಲೂಕು ವ್ಯಾಪ್ತಿಯ ಒಕ್ಕಲಿಗ ಜನಾಂಗದವರ ಸದಸ್ಯರನ್ನು ಮಾಡಿಕೊಳ್ಳದೆ, ಸಂಘವು ಕೆಲವೇ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ನಲುಗುತ್ತಿದೆ. ಕೂಡಲೆ ತಾಲೂಕು ಸಂಘಕ್ಕೆ ಸದಸ್ಯರ ನೂಂದಣಿಗೆ ಚಾಲನೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಒಕ್ಕಲಿಗ ಹಿರಿಯ ಮುಖಂಡ, ನಿವೃತ್ತ ತಹಸೀಲ್ದಾರ್ ಬಿ.ಟಿ. ವೆಂಕಟೇಗೌಡ ಎಚ್ಚರಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1950 ರಲ್ಲಿ ತಾಲೂಕು ಒಕ್ಕಲಿಗ ಸಂಘ ಅಸ್ತಿತ್ವಕ್ಕೆ ಬಂದಿದೆ. ನಂತರದ ದಿನಗಳಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಜನಾಂಗದವರನ್ನು ಸದಸ್ಯರನ್ನಾಗಿ ಮಾಡಿಕೊಂಡ ಉದಾಹರಣೆಗಳಿಲ್ಲ. ಇದುವರೆಗೂ ಹಲವು ಬಾರಿ ಸದಸ್ಯರ ನೋಂದಣಿ ಕಾರ್ಯ ಪ್ರಾರಂಭಿಸುವಂತೆ ಹಾಲಿ ಆಡಳಿತ ಮಂಡಳಿಯವರಿಗೆ ಒತ್ತಾಯಿಸಿದರೂ ಯಾವುದೇ ಸ್ಪಂದನೆ ಇಲ್ಲ ಎಂದರು.
ಕೇವಲ ಪಟ್ಟಣದಲ್ಲಿ ವಿದ್ಯಾಸಂಸ್ಥೆಗೆ ಮಾತ್ರ ಸಮೀಪವಾಗಿರುವ ಸಂಘ, ತಾಲೂಕಿನಾದ್ಯಂತ ಜನಾಂಗದ ಅಭಿವೃದ್ಧಿ ವಿಫುಲ ಅವಕಾಶಗಳಿದ್ದರೂ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಇಲ್ಲದಂತಾಗಿದೆ. ಈ ಮಧ್ಯೆ ತಾಲೂಕಿನಾದ್ಯಂತ ಸಾವಿರಾರು ಮಂದಿ ಉತ್ಸಾಹಿ ಯುವಕರು ಸೇರಿದಂತೆ ಜನಾಂಗದವರಿದ್ದಾರೆ. ನೂತನ ಸದಸ್ಯತ್ವಕ್ಕೆ ಚಾಲನೆ ನೀಡಿದಲ್ಲಿ ಸಂಘವು ಮತ್ತಷ್ಟು ಪರಿಣಾಮಕಾರಿಯಾಗಿ ರೂಪುಗೊಂಡು, ಜನಾಂಗದ ಸೇರಿದಂತೆ ತಾಲೂಕಿನ ಹೋಬಳಿ ಮಟ್ಟದಲ್ಲೂ ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ. ಈ ದಿಸೆಯಲ್ಲಿ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ತಾಲೂಕು ಸಂಘದ ಸದಸ್ಯತ್ವಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ನಂಜುಂಡಯ್ಯ, ಒಕ್ಕಲಿಗ ಧರ್ಮ ಜಾಗೃತಿ ಸಭೆಯ ತಾಲೂಕು ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಗಿರೀಶ್, ಪ್ರಮುಖರಾದ ಅಪ್ಪು ಸುರೇಶ್, ರಮೇಶ್, ಮಂಜುನಾಥಗೌಡ, ರೇಣುಕಯ್ಯ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

