ಹಿಂದೂಗಳ ಸಂಖ್ಯೆ ವಿರಳವಾದರೆ ಆಶ್ಚರ್ಯವಿಲ್ಲ: ಸೂರ್ಯನಾರಾಯಣ್
ತುರುವೇಕೆರೆ: ಮುಂದಿನ ಎರಡು ಪೀಳಿಗೆಯ ವೇಳೆಗೆ ಹಿಂದೂಗಳ ಸಂಖ್ಯೆ ವಿರಳವಾದರೆ ಆಶ್ಚರ್ಯವಿಲ್ಲ. ಇತರೆ ಧರ್ಮೀಯರ ಓಲೈಕೆಯಲ್ಲೇ ತೊಡಗುವ ರಾಜಕಾರಣಿಗಳ ಕಪಿಮುಷ್ಟಿಯಿಂದ ಹಿಂದೂಗಳು ಸ್ವಂತ ಶಕ್ತಿಯಿಂದ ಮೇಲೇರುವುದು ಅಸಾಧ್ಯದ ಮಾತಾಗಿದೆ ಎಂದು ಭಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಸಿದ ಶ್ರೀರಾಮ ಜಪಯಜ್ಞ ಸಮರ್ಪಣೆ ಮತ್ತು ಶ್ರೀರಾಮ ತಾರಕ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಭಾರತ ದೇಶವನ್ನು ವೈವಿಧ್ಯತೆಗಳ ತವರೂರು ಎನ್ನುತ್ತಾ ಹಿಂದೂ ಬಾಂಧವರನ್ನು ಸಮಾಧಾನ ಮಾಡುತ್ತಲೇ ಬಂದಿದ್ದಾರೆ. ಆದರೆ ಬೇರೆ ದೇಶಗಳಲ್ಲಿ ತಮ್ಮದೇ ಆದ ಧರ್ಮದ ರಕ್ಷಣೆ ಮಾಡಲು ಸರ್ವರೂ ಸಮಪಾಲು ಆಗುತ್ತಾರೆ. ಮತ ಬ್ಯಾಂಕ್ ಮಾಡಿಕೊಂಡಿರುವ ಕೆಲವು ರಾಜಕೀಯ ಪಕ್ಷಗಳು ಇತರರ ಓಲೈಕೆಗಾಗಿ ವಿವಿಧ ಸವಲತ್ತುಗಳನ್ನು ನೀಡುತ್ತಿವೆ ಎಂದು ಸೂರ್ಯನಾರಾಯಣ್ ಕಿಡಿಕಾರಿದರು.
ಹಿಂದೂಗಳ ಆರಾಧ್ಯ ದೈವವಾಗಿರುವ ಶ್ರೀ ರಾಮನ ದೇಗುಲವನ್ನು ಅಯೋಧ್ಯೆಯಲ್ಲಿ ಕಟ್ಟಲು ಇನ್ನೂ ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಸ್ವಾಭಿಮಾನಿಗಳಾಗಲಿ: ಹಿಂದೂಗಳು ಸ್ವಾಭಿಮಾನಿಗಳಾಗಬೇಕು. ದೇಶಾಭಿಮಾನಿಗಳಾಗಬೇಕು ಎಂದು ತಮ್ಮಡಿಹಳ್ಳಿಯ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

