ಸದೃಢ ದೇಹದಿಂದ ಸದೃಢ ಮನಸ್ಸು
ತುಮಕೂರು: ತುಮಕೂರು ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ ಎಂದು ಖ್ಯಾತ ಭಾರತೀಯ ಪುಟ್ಬಾಲ್ ಆಟಗಾರ ಜಿ.ಎಸ್. ಗುರುಪ್ರಸಾದ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ನುಡಿದರು.
ಇಂದಿನ ಸಮಾಜದಲ್ಲಿ ಎಲ್ಲರೂ ಆಟದ ಮೈದಾನಗಳನ್ನು ಬಿಟ್ಟು ಆಸ್ಪತ್ರೆಗಳ ಬಳಿಗೆ ಹೋಗುತ್ತಿದ್ದಾರೆ. ಆಟದ ಮೈದಾನಗಳಿಗೆ ಬದಲಾಗಿ ಹಲವಾರು ಆಸ್ಪತ್ರೆಗಳು ನಿರ್ಮಾಣಗೊಳ್ಳುತ್ತಿವೆ. ಎಲ್ಲರೂ ಆಟವಾಡುವುದರ ಮೂಲಕ ಅವರ ಆರೋಗ್ಯವು ಸುಧಾರಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು.
ತುಮಕೂರು ವಿವಿಯ ಪರಿಕ್ಷಾಂಗ ಕುಲಸಚಿವ ಎನ್. ಲಕ್ಷ್ಮೀಕಾಂತ್ ಕಾರ್ಯಕ್ರಮ ಉದ್ಘಾಟಿಸಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಸಂಪತ್ತು ನಮಗಿದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ರಜನಿಯವರು ಮಾತನಾಡಿ ವಿದ್ಯಾರ್ಥಿಗಳು ಎಲ್ಲರೂ ರಕ್ತದಾನ ಮಾಡಬೇಕು ಎಂದರು. ರಕ್ತದಾನದ ಮಹತ್ವವನ್ನು ತಿಳಿಸುತ್ತಾ, 18 ವರ್ಷ ತುಂಬಿದ ಎಲ್ಲರೂ ರಕ್ತದಾನವನ್ನು ಮಾಡಬಹುದು. ದೇಶದಲ್ಲಿ ಪ್ರತಿದಿನ 4.5 ಕೋಟಿ ಬ್ಲಡ್ ಯೂನಿಟ್ಸ್ನ ಅವಶ್ಯಕತೆ ಇದೆ. ಪ್ರತಿ 2 ನಿಮಿಷಕ್ಕೊಮ್ಮೆ ರಕ್ತದ ಕೊರತೆಯಿಂದ ಒಂದು ಸಾವು ಸಂಭವಿಸುತ್ತದೆ. ರಕ್ತ ಮಾನವನ ಶರೀರವಲ್ಲದೆ ಜನರ ಶರೀರದಲ್ಲಿ ಸಂಚಾರ ಮಾಡಬೇಕು. ಯುವಕರು ಎಲ್ಲವನ್ನು ಹಂಚಿಕೊಳ್ಳುವಂತೆ ಒಂದು ಬಾಟಲಿಯ ರಕ್ತವನ್ನು ಹಂಚಬೇಕು ಎಂದರು.
ರಕ್ತದ ಕೊರತೆಯಿಂದ ಮರಣ: ರಕ್ತದ ಜಾತಿಯಿಂದ ಮನುಷ್ಯನ ಮನಸ್ಥಿತಿ ಬದಲಾಗುತ್ತದೆ. ರಕ್ತದ ಕೊರತೆಯಿಂದ ಗರ್ಭಿಣಿಯರು ಮರಣ ಹೊಂದುತ್ತಿದ್ದಾರೆ. ಸ್ವಇಚ್ಛೆಯಿಂದ ರಕ್ತದಾನ ಮಾಡಬೇಕು. ರಕ್ತವನ್ನು ಮನುಷ್ಯರು ಮಾತ್ರ ಕೊಡಲು ಸಾಧ್ಯ. ತುಮಕೂರಿನಲ್ಲಿ ರಕ್ತ ಶೇಖರಿಸುವ 19 ಕೇಂದ್ರಗಳು ಇವೆ. ಎಲ್ಲ ಆರೋಗ್ಯವಂತರು, ಹದಿಹರೆಯದವರು ರಕ್ತದಾನ ಮಾಡಬೇಕು. ಕಣ್ಣನ್ನು ಸತ್ತ ನಂತರವೂ ದಾನ ಮಾಡಬಹುದು. ಆದರೆ ರಕ್ತವನ್ನು ಬದುಕಿದ್ದಾಗ ಮಾತ್ರ ಕೊಡಲು ಸಾಧ್ಯ. ಸತ್ತ ನಂತರ ನೀಡಲಾಗುವುದಿಲ್ಲ ಎಂದರು.
ರಕ್ತ ಕಲೆತಾಗ ಜೀವ ಉಳಿಯುತ್ತೆ: ರಕ್ತವನ್ನು ಪಡೆದುಕೊಳ್ಳುವವರು ಅಜ್ಞಾನದಿಂದ ಇರುತ್ತಾರೆ. ಆದ್ದರಿಂದ ರಕ್ತದಾನ ಮಾಡಬೇಕು. ರಕ್ತದಾನ ಮಾಡುವ ಮೂಲಕ ಎಲ್ಲರೂ ರಕ್ತ ಸಂಬಂದಿಗಳಾಗುತ್ತೇವೆ. ಕಣ್ಣು ಕಣ್ಣು ಕಲೆತಾಗ ಹೇಗೆ ಪ್ರೀತಿಯಿಂದ ಜೀವಗಳು ಇರುತ್ತದೋ ಹಾಗೇ ರಕ್ತ ರಕ್ತ ಕಲೆತಾಗ ಜೀವಗಳು ಉಳಿಯುತ್ತವೆ ಎಂದು ಹೇಳಿದರು. ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಲಕ್ಷ್ಮೀಕಾಂತ ಅವರು ಉದ್ಘಾಟಿಸಿದರು. ಪ್ರಾಂಶುಪಾಲ ಈಶ್ವರ ಎಚ್.ವೈ. ಅವರು ಹಾಜರಿದ್ದರು. ಡಾ. ಎ.ಎಂ. ಮಂಜುನಾಥ್ ಸ್ವಾಗತಿಸಿ ಡಾ. ನಾಗಭೂಷಣ ಬಗ್ಗನಡು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

