ತುಮಕೂರು

ಪುರಸಭೆ ಚುನಾವಣೆ: ಹರಿಯುತ್ತಿರುವ ಹಣದ ಹೊಳೆ

Published On :


ಕನ್ನಡಪ್ರಭ ವಾರ್ತೆ  ಮಧುಗಿರಿ  ಮಾ.6
ಇಲ್ಲಿನ ಪುರಸಭೆ ಚುನಾವಣೆಗೆ ಹಣ, ಆಸೆ ಆಮಿಷಗಳ ಹೊಳೆಯೇ ಹರಿದಿದೆ. ನಾಮ ಪತ್ರ ಸಲ್ಲಿಸಿದ ದಿನದಿಂದ ಇಲ್ಲಿವರೆಗೆ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರು  ಮನೆ,ಮನೆಗೆ ತೆರಳಿ ಮತ ಕೋರುವ ಮೂಲಕ ಅಬ್ಬರದ ಪ್ರಚಾರದಲ್ಲಿ ತೊಡಗಿ  ಮತ ಕೋರಿದ್ದಾರೆ. ಮತದಾರ ಯಾವುದೇ ಅಭ್ಯರ್ಥಿಗೂ ನಿಖರ ಭರವಸೆ ನೀಡಿಲ್ಲದಿರುವುದು ಅಭ್ಯರ್ಥಿಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಟಿ  ವಾರ್ಡ್ ನಂ.14 : ಕಾಂಗ್ರೆಸ್‌ನ ಭದ್ರಕೋಟೆ, ಕಳೆದ ಸಲ ಪಕ್ಷೇತರರ ಪಾಲಾಗಿತ್ತು. ಕಾಂಗ್ರೆಸ್ ಮಾಜಿ ಸದಸ್ಯ ಎಂ.ಪಿ.ಗಣೇಶ್ ಸ್ಪರ್ಧಿಸಿದ್ದು  ಜೆಡಿಎಸ್‌ನ ಎಂ.ಆರ್. ವಿಶ್ವನಾಥ್ ನಡುವೇ ನೇರ ಹಣಾ ಹಣಿ ಏರ್ಪಟ್ಟಿದೆ. 396 ಪುರುಷರು, 541 ಮಹಿಳೆಯರು ಒಟ್ಟು 1026 ಮತದಾರರಿದ್ದಾರೆ.
ಟಿ  ವಾರ್ಡ್ ನಂ.15: ಕಳೆದ ಸಲ ಜೆಡಿಎಸ್‌ನಿಂದ ಟಿಕೆಟ್ ಪಡೆದು ಗೆದ್ದಿದ್ದ ಎನ್.ಗಂಗಣ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಎಸ್.ನಾಗರಾಜು  ಬಿರುಸಿನ ಪ್ರಚಾರ ಕೈಗೊಂಡು ಮತದಾರರ ಮನವೊಲಿಕೆಗೆ ಮುಂದಾಗಿದ್ದರೆ   ಇತ್ತ ಪಕ್ಷೇತರ ಅಭ್ಯರ್ಥಿ  ಕೆ.ಎಸ್.ಆದಿಶೇಷಗುಪ್ತ  ಪ್ರಬಲ ಪೈಪೋಟಿ ನೀಡುವ ಮೂಲಕ  ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 416 ಪುರುಷರು, 403 ಮಹಿಳೆಯರು ಒಟ್ಟು 819 ಮತದಾರರಿದ್ದಾರೆ.
ಟಿ  ವಾರ್ಡ್ ನಂ.16: ಕಳೆದ ಸಲ ಜೆಡಿಎಸ್‌ನಿಂದ ಬೆರಳೆಣಿ ಓಟಿನಲ್ಲಿ ಸೋತಿದ್ದ ಮಂಜುಳಾ ಖಾದ್ರಿ ಕಣದಲ್ಲಿದ್ದು, ಅನುಂಕಪದ ಅಲೆ ಬೀಸಿದರೆ ಆಶ್ಚರ್ಯವಿಲ್ಲ, ಕಾಂಗ್ರೆಸ್‌ನ ನಳಿನಾ ಕೂಡ ಬಿರುಸಿನ ಪ್ರಚಾರದಲ್ಲಿ ತೊಡಗಿ ಗೆಲ್ಲಲು ಹರ ಸಾಹಸ ಪಡುತ್ತಿದ್ದಾರೆ. ಬಿಜೆಪಿ ಸಿದ್ಧಗಂಗಮ್ಮ ಕೂಡ ಮತ ಪಡೆಯಲು ಯತ್ನಿಸುತ್ತಿದ್ದಾರೆ. 315 ಪುರುಷರು, 337 ಮಹಿಳೆಯರು ಒಟ್ಟು 652 ಮತದಾರರಿದ್ದಾರೆ.         
ಟಿ  ವಾರ್ಡ್ ನಂ.17 : ಈ ಕ್ಷೇತ್ರ ಕಳೆದ ಎರಡು ಸಲ ನಡೆದ ಚುನಾವಣೆಯಲ್ಲಿ ಪಕ್ಷೇತರರೇ ಗೆದ್ದಿದ್ದಾರೆ.ಈ ಬಾರಿ  ಕಾಂಗ್ರೆಸ್‌ನಿಂದ ಪಾರ್ವತಮ್ಮ ಕಣದಲ್ಲಿದ್ದು, ಜೆಡಿಎಸ್‌ನಿಂದ ಗೌರಮ್ಮ ಸ್ಪರ್ಧಿಸಿದ್ದಾರೆ.    ಮೇಲ್ನೋಟಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧಿಯಿದ್ದರೂ ಕೂಡ ಪಕ್ಷೇತರ ಅಭ್ಯರ್ಥಿ ಗಿರಿಜಮ್ಮ  ಮತ್ತು ಪುಟ್ಟಮ್ಮ  ಅಡ್ಡಲಾಗಿದ್ದಾರೆ. ಗೆಲವು ಯಾರ ಮಡಿಲು ಎಂಬುದನ್ನು ಕಾದು ನೋಡಬೇಕಿದೆ.543 ಪುರುಷರು,558 ಮಹಿಳೆಯರು ಒಟ್ಟು 1101 ಮತದಾರರಿದ್ದಾರೆ.  
ಟಿ  ವಾರ್ಡ್ ನಂ.18: ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂ. ಶ್ರೀಧರ  ಕೊನೆ ಗಳಿಗೆಯಲ್ಲಿ ನಾಮ ಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ  ಅಭ್ಯರ್ಥಿ ನಾಗರಾಜಪ್ಪ ಕಣದಲ್ಲಿದ್ದು ಜೆಡಿಎಸ್ ಮಂಜುನಾಥ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. 472 ಪುರುಷರು,491 ಮಹಿಳೆಯರು ಒಟ್ಟು 963 ಮತದಾರರಿದ್ದಾರೆ.         
ಟಿ  ವಾರ್ಡ್ ನಂ.19 : ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾ ಹಣಿ ಏರ್ಪಟ್ಟಿದೆ.  ಕಾಂಗ್ರೆಸ್‌ನಿಂದ  ಎಂ.ಆರ್.ಜನಗನ್ನಾಥ್ ಸ್ಪರ್ಧಿಸಿದ್ದು ಬಿರುಸಿನ ಪ್ರಚಾರ ನಡೆಸಿದ್ದಾರೆ. ಜೆಡಿಎಸ್‌ನಿಂದ ಮಾಜಿ ಸದಸ್ಯ  ಎಂ.ಎಸ್.ಚಂದ್ರಶೇಖರ್ ಕಣದಲ್ಲಿದ್ದು  ತೀವ್ರ ಪೈಪೋಟಿ ನೀಡಿದ್ದಾರೆ. 516 ಪುರುಷರು,544 ಮಹಿಳೆಯರು ಒಟ್ಟು 1060 ಮತದಾರರಿದ್ದಾರೆ.   
ಟಿ  ವಾರ್ಡ್ ನಂ.20: ಸರಳ, ಸಜ್ಜನ ರಾಜಕಾರಣಿ  ಪುರಸಭೆ ಮಾಜಿ ಅಧ್ಯಕ್ಷ  ಎಂ.ಕೆ.ನಂಜುಂಡಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು ಸೋಲಿಲ್ಲದ ಸರದಾರ ಏನಿಸಿದ್ದಾರೆ. ಆದರೆ ಜೆಡಿಎಸ್‌ನಿಂದ ಉತ್ಸಾಹಿ ಯುವಕ ಆರ್. ಸುರೇಶ್ ತೀವ್ರ ಪೈಪೋಟಿ ನೀಡಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. 516 ಪುರುಷರು, 544 ಮಹಿಳೆಯರು ಒಟ್ಟು 1060 ಮತದಾರರಿದ್ದಾರೆ.   
ಟಿ  ವಾರ್ಡ್ ನಂ.21: ಜಡಿಎಸ್‌ನ ಭದ್ರಕೋಟೆ, ಈ ಬಾರಿ ಕಾಂಗ್ರೆಸ್‌ನಿಂದ ಭಾಗ್ಯ ಕಣದಲ್ಲಿದ್ದಾರೆ. ಸಿಹಿ ನೀರು ಬಾವಿ ಪ್ರದೇಶ ಜನರ ಒತ್ತಾಯದ ಮೇರೆಗೆ ಎಲೆಕ್ಷನ್‌ಗೆ ನಿಂತಿರುವುದು ವಿಶೇಷವಾಗಿದ್ದು ಜೆಡಿಎಸ್ ಭದ್ರ ಕೋಟೆ ಛಿದ್ರ ಮಾಡಲು  ಕಾಂಗ್ರೆಸ್ ಎಲ್ಲ ರೀತಿಯ ಕಸರತ್ತು ನಡೆಸಿದೆ. ಜೆಡಿಎಸ್  ಶೋಭಾ ಕೂಡ ಗೆಲ್ಲಲು ಮತದಾರರ ಬಳಿ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ. 313 ಪುರುಷರು, 355 ಮಹಿಳೆಯರು ಒಟ್ಟು 668 ಮತದಾರರಿದ್ದಾರೆ.
ಟಿ  ವಾರ್ಡ್ ನಂ.22: ಕಳೆದ ಸಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೆರಳೆಣಿಕೆ ಮತಗಳಿಂದ ಸೋತಿದ್ದ ಶ್ರೀನಿವಾಸಮೂರ್ತಿ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಅಲ್ಲದೆ ಅನುಕಂಪದ ಅಲೆಯಿದೆ. ಜೆಡಿಎಸ್‌ನಿಂದ ಮಾಜಿ ಪುರಸಭೆ ಅಧ್ಯಕ್ಷ ಕೆ.ಪ್ರಕಾಶ್ ಸ್ಪರ್ಧಿಸಿದ್ದು ಬಿರುಸಿನ ಪ್ರಚಾರ ನಡೆಸಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದರು ಕೂಡ   ಬಿಎಸ್‌ಆರ್‌ನಿಂದ  ಕಣದಲ್ಲಿರುವ ಪ್ರಕಾಶ್   ಅವರನ್ನು ನಿರ್ಲಕ್ಷಿಸುವಂತಿಲ್ಲ, 755 ಪುರುಷರು,703 ಮಹಿಳೆಯರು ಒಟ್ಟು 1458 ಮತದಾರರಿದ್ದಾರೆ.
ಟಿ  ವಾರ್ಡ್ ನಂ.23 : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾ ಹಣಾ ಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಶಕುಂತಲ ಹಾಲಪ್ಪ ಸ್ಪರ್ಧಿಸಿದ್ದು, ಗೆಲವು ಸಾಧಿಸಲು ತಮ್ಮ ಅಪಾರ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಜೆಡಿಎಸ್‌ನ ಶ್ರೀದೇವಿ ಕೂಡ ಗೆಲ್ಲಲು ಮತದಾರರ ಬಳಿ ಸುಳಿದಿದ್ದು ಅದ್ಧೂರಿ ಪ್ರಚಾರ ಮಾಡಿದ್ದಾರೆ. ಬಿಎಸ್ ಆರ್ ಪಕ್ಷದಿಂದ ಆರ್.ಕೆ.ಗೌಡ ಪುತ್ರಿ  ಕೃಪಗೌಡ  ಕಣದಲ್ಲಿದ್ದಾರೆ. 628 ಪುರುಷರು, 611 ಮಹಿಳೆಯರು ಒಟ್ಟು 1239 ಮತದಾರರಿದ್ದಾರೆ.      

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.