ಇಂದು ಮರುಮತದಾನ
ಕನ್ನಡಪ್ರಭ ವಾರ್ತೆ ತುಮಕೂರು ಮಾ.8
ತುಮಕೂರು ನಗರಸಭೆ ವಾರ್ಡ್ ಸಂಖ್ಯೆ 20ರ ಮತಗಟ್ಟೆ ಸಂಖ್ಯೆ 119ಕ್ಕೆ ಮರು ಮತದಾನ ನಾಳೆ (ಮಾರ್ಚ್ 9) ನಡೆಯಲಿದೆ.
ಮರುಮತದಾನವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಮರು ಮತದಾನದ ವೇಳೆ ಮತದಾರರ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಲಾಗುವುದು.
ಮಾರ್ಚ್ 7ರಂದು ನಡೆದ ಸಾರ್ವತ್ರಿಕ ಚುನಾವಣೆ ಮತದಾನದ ಸಂದರ್ಭ ಕೈಬಿಡತಕ್ಕ ಮತದಾರರ ಪಟ್ಟಿಯಲ್ಲಿದ್ದ ಮತದಾರರಿಗೆ ಮತಗಟ್ಟೆ ಪ್ರಿಲೈಡಿಂಗ್ ಅಧಿಕಾರಿಯವರು ಮತದಾನ ಮಾಡಲು ಅವಕಾಶ ನೀಡಿದ್ದು, ಅರ್ಹ ಮತದಾರರಿಗಿಂತ ಹೆಚ್ಚಿನ ಮತದಾನವಾಗಿತ್ತು.
ಈ ಹಿನ್ನೆಲೆಯಲ್ಲಿ ತುಮಕೂರು ತಹಶೀಲ್ದಾರ್ ಮತ್ತು ಚುನಾವಣಾ ವೀಕ್ಷಕರು ಹಾಗೂ ಸದರಿ ವಾರ್ಡ್‌ನ ಚುನಾವಣಾಧಿಕಾರಿ ವರದಿಯ ಹಿನ್ನಲೆಯಲ್ಲಿ ಪರಿಶೀಲಿಸಲಾಗಿ ಅರ್ಹ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯ ಮತದಾರರು ಮತದಾನ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಮಾರ್ಚ್ 7ರಂದು ವಾರ್ಡ್ 20 ಮತಗಟ್ಟೆ 119ಕ್ಕೆ ನಡೆದ ಮತದಾನವನ್ನು ಕಾನೂನು ಮಾನ್ಯವಲ್ಲವೆಂದು ಹಾಗೂ ಶೂನ್ಯವೆಂದು ಘೋಷಿಸಿ, ಮತಗಟ್ಟೆಯಲ್ಲಿ ಮರು ಮತದಾನ ನಡೆಸಲು ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

