ತುಮಕೂರು

ದೇಣಿಗೆ ಹಣ ಸಿಪಿಐ ಪಕ್ಷಕ್ಕೆ ವಿನಿಯೋಗ

Published On :

ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮಾ.11
ತುಮಕೂರು ನಗರಸಭೆ ವಾರ್ಡ್ ನಂಬರ್ 1 ರ ಸಿಪಿಐ ಪಕ್ಷದ ಅಭ್ಯರ್ಥಿ ಓಟು ಕೊಡಿ ನೋಟು ಕೊಡಿ  ಎಂಬ ಆಂದೋಲನದೊಂದಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಹಣವನ್ನು ಪಕ್ಷದ ನಿಧಿಗೆ ದೇಣಿಗೆ ನೀಡಿದ್ದಾರೆ.
ವಾರ್ಡ್ ನಂಬರ್ 1 ರ ಸಿಪಿಐ ಪಕ್ಷದ ಅಭ್ಯರ್ಥಿ ಕಾಂ. ಗಿರೀಶ್ ಅವರು ಪಕ್ಷದ ಸಿದ್ಧಾಂತ ಮತ್ತು ತತ್ವವನ್ನು ಆಧರಿಸಿ ವಾರ್ಡ್ ನಂಬರ್ 1 ರ ಮತದಾರರನ್ನು ಪ್ರಜ್ಞಾವಂತ ಮತದಾರರನ್ನಾಗಿಸಿ ಓಟು ಕೊಡಿ ನೋಟು ಕೊಡಿ  ಎಂಬ ಆಧಾರದಲ್ಲಿ ಪ್ರಚಾರ ಆರಂಭಿಸಿ ಮತದಾರರಿಂದ ಸಂಗ್ರಹವಾದ 4011 ರು.ಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಪಕ್ಷದ ಮುಖಂಡರಾದ ಅಶ್ವತ್ಥ ನಾರಾಯಣ್ ಮೂಲಕ ಪಕ್ಷಕ್ಕೆ ನೀಡಿದರು. ಪಕ್ಷದ ಮುಖಂಡರಾದ ಗೌಡ ರಂಗಪ್ಪ, ಎಂ.ಸಿ. ಮಂಜುನಾಥ್, ಉಮೇಶ್, ಅಖಿಲ ಭಾನು, ಯಶೋದ ಗಿರೀಶ್, ಶಂಕರ್, ರಂಗನಾಥ್, ಬಸಮ್ಮ, ಮಂಜುನಾಥ್, ಹನುಮಂತಪ್ಪ, ಮುರುಳಿ, ವೆಂಕಟಚಲಪ್ಪ, ಚಂದ್ರಶೇಖರ, ಪೂಜಣ್ಣ, ಗಿರೀಶ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.