ತುಮಕೂರು

ಮಹಾಮೃತ್ಯುಂಜಯ ಹೋಮ

Published On :

ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.13
ಇಲ್ಲಿನ ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್ ಆಶ್ರಯದಲ್ಲಿ ಮಹಾಮೃತ್ಯುಂಜಯ ಹೋಮ, ಮಹಾಗಣ ಹೋಮಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ನಟರಾಜ ಪ್ರತಿಮೆಗೆ ಸಾರ್ವಜನಿಕರಿಂದ ಕ್ಷೀರಾಭಿಷೇಕ, ಬಸವಣ್ಣನ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಕಸಾಪ ಅಧ್ಯಕ್ಷೆ ಎಂ.ಸಿ. ಲಲಿತಾ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ನಿಟ್ಟೂರು ರಾಂಪುರ ಸದಾನಂದ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಗುರುರಾಜರಾವ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಮೋಹನ್ ಜಾದೂಗರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು.
ಭಜನೆ ಸ್ಪರ್ಧೆ: ಪ್ರಥಮ ಬಹುಮಾನ ಎಸ್.ಕೆ.ಎಸ್ ಶರಣ ಯುವತಂಡ, ದ್ವಿತೀಯ ಭಾರ್ಗವಿ ಭಜನಾ ಮಂಡಳಿ ಹಾಗೂ ತೃತೀಯ ಬಹುಮಾನವನ್ನು ತಿರುಮಲೇಶ್ ಭಜನಾ ವೃಂದ ಪಡೆಯಿತು.
ಹಿರಿಯರ ವಚನ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅರುಣಕುಮಾರ್, ದ್ವಿತೀಯ ಬಹುಮಾನ ಚೇತನ್ ಹಾಗೂ ಶೇಷಾದ್ರಿ ಕೆ. ತೃತೀಯ ಬಹುಮಾನ ಪಡೆದರು.
ಕಿರಿಯರ ವಿಭಾಗದಲ್ಲಿ ಋತ್ವಿಕ್ ಟಿ.ಎಸ್. ಪ್ರಥಮ ಬಹುಮಾನ ಪಡೆದರೆ, ಎಂ. ರವಿಕುಮಾರ ದ್ವಿತೀಯ ಹಾಗೂ ಶ್ರೀರಕ್ಷ ತೃತೀಯ ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಆರ್. ಶ್ರೇಯಾ ಪ್ರಥಮ, ಎಂ.ಕೆ. ಮಣಿಕಂಠ ದ್ವಿತೀಯ ಹಾಗೂ ಸುಮುಖ ಡಿ. ಪ್ರಸಾದ್ ತೃತೀಯ ಬಹುಮಾನ ಪಡೆದಿದ್ದಾರೆ.
ಕಿರಿಯರ ವಿಭಾಗದಲ್ಲಿ ಮನು ಟಿ.ವಿ. ಪ್ರಥಮ, ಆರ್. ಸುಶ್ಮಾ ದ್ವಿತೀಯ ಹಾಗೂ ವಿಶಾಲ್ ನಾಯಕ್
ತೃತೀಯ ಸ್ಥಾನ ಪಡೆದಿದ್ದಾರೆ. ಹಿರಿಯರ ವಿಭಾಗದಲ್ಲಿ ಬಸವರಾಜ ಕೆ.ಜೆ. ಪ್ರಥಮ ಬಹುಮಾನ, ಟಿ.ಎಂ. ಚಂದ್ರಿಕಾ ದ್ವಿತೀಯ ಹಾಗೂ ಎ. ನಾಗಾರ್ಜುನ ತೃತೀಯ ಬಹುಮಾನ ಪಡೆದಿದ್ದಾರೆ.
ಶಿವನ ಕುರಿತ ಭಕ್ತಿಗೀತೆ ಗಾಯನ ಸ್ಪರ್ಧೆಯ ಅತಿ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಎಂ.ಕೆ. ಮಣಿಕಂಠ, ಎಸ್. ಭೂಮಿಕ ದ್ವಿತೀಯ ಹಾಗೂ ಎಸ್. ವರ್ಷಿಣಿ ತೃತೀಯ ಸ್ಥಾನ ಪಡೆದಿದ್ದಾರೆ.
ಕಿರಿಯರ ವಿಭಾಗದಲ್ಲಿ ಟಿ.ಎಸ್. ಹೃತಿಕ್ ಪ್ರಥಮ, ರವಿಕುಮಾರ್ ದ್ವಿತೀಯ, ಅಮಿತಾ ಕಾಮತ್ ತೃತೀಯ ಬಹುಮಾನ ಪಡೆದಿದ್ದಾರೆ. ಹಿರಿಯರ ವಿಭಾಗಬದಲ್ಲಿ ಅರುಣಕುಮಾರ್ ಪ್ರಥಮ ಸ್ಥಾನ ಪಡೆದರೆ, ಗೀತಾ ದ್ವಿತೀಯ ಹಾಗೂ ವಿನುತ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ರಂಗಸ್ವಾಮಿ, ತು.ಮ. ಬಸವರಾಜು, ಸುಧಾರತ್ನ, ಎಂ.ಸಿ. ಲಲಿತಾ ಕಾರ್ಯನಿರ್ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.