ವಿಜೃಂಭಣೆಯ ತಮ್ಮಣ್ಣಸ್ವಾಮಿ ಜಾತ್ರೆ
ಕ.ಪ್ರ. ವಾರ್ತೆ ಹುಳಿಯಾರು ಮಾ.13
ಹೋಬಳಿಯ ದಬ್ಬಗುಂಟೆ ಸಮೀಪದ ಇತಿಹಾಸ ಪ್ರಸಿದ್ಧ ತಮ್ಮಣ್ಣಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಶಿವರಾತ್ರಿ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ವಟ್ಟು-ಹಣ್ಣು ಹರಕೆ ತೀರಿಸುವ ಮೂಲಕ ಜರುಗಿತು.
ದಬ್ಬಗುಂಟೆ ಗ್ರಾಮದಿಂದ ಕೈಅಳತೆ ದೂರದಲ್ಲಿರುವ ತಮ್ಮಣ್ಣಸ್ವಾಮಿ ಕ್ಷೇತ್ರದಲ್ಲಿ ಶಿವರಾತ್ರಿ ಹಬ್ಬದ ನಂತರ ಈ ಜಾತ್ರೆಯನ್ನು ನಡೆಸಲಾಗುತ್ತದೆ. ಒಂದು ದಿನ ಮಾತ್ರ ನಡೆಯುವ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ, ಸ್ವಾಮಿ ಆಶೀರ್ವಾದ ಪಡೆಯುವುದು ವಿಶೇಷ. ಈ ಭಾಗದಲ್ಲಿ ದನಕರುಗಳಿಗೆ, ಜನರಿಗೆ ರೋಗರುಜಿನೆಗಳು ಬಂದರೆ ತಮ್ಮಣ್ಣಸ್ವಾಮಿಗೆ ಹರಕೆ ಕಟ್ಟಿ ನಂತರ ಜಾತ್ರೆಯಲ್ಲಿ ವಟ್ಟು-ಹಣ್ಣು ಹರಕೆ ತೀರಿಸುವ ಪ್ರತೀತಿ ನಡೆದುಕೊಂಡು ಬಂದಿದೆ.
ಸುಮಾರು 500 ವರ್ಷಗಳಿಂದ ಜಾತ್ರೆ ನಡೆಯುತ್ತಿದ್ದು, ತಮ್ಮಣ್ಣಸ್ವಾಮಿಯ ಪೂಜಾರಿಯಾಗಿದ್ದ ಕ್ಯಾತೇಲಿಂಗೇಶ್ವರಸ್ವಾಮಿಯವರನ್ನು ಇಲ್ಲಿಯೇ ಸ್ಥಳದಲ್ಲಿ ಸಮಾಧಿ ಮಾಡಲಾಗಿದೆ.
ಮಂಗಳವಾರವೂ ಸಹ ಜಾತ್ರೆಯ ವಿಶೇಷ ಕೈಂಕರ್ಯಗಳು ನಡೆದು ಮೊದಲು ದಬ್ಬಗುಂಟೆ ಗ್ರಾಮದ ಗೌಡರ ಮನೆಯವರು ವಟ್ಟು-ಹಣ್ಣು ಹರಕೆ ತೀರಿಸಿ, ನಂತರ ಆಗಮಿಸಿದ್ದ ಸಾವಿರಾರು ಭಕ್ತರು ತಮ್ಮ ಹರಕೆ ತೀರಿಸಿದರು.
ಕೆಲವರು ತಮ್ಮ ದನಕರುಗಳು, ಕುರಿ ಮೇಕೆಗಳನ್ನು ಪ್ರದಕ್ಷಿಣೆ ಹಾಕಿಸಿದರು. ಸೋಮನಹಳ್ಳಿ ಕ್ಯಾತೇದೇವರಹಟ್ಟಿಯ ಕ್ಯಾತೇಲಿಂಗೇಶ್ವರಸ್ವಾಮಿ ಹಾಗೂ ಕೋಲುದೇವರಹಟ್ಟಿಯ ಕೋಲುಲಿಂಗೇಶ್ವರಸ್ವಾಮಿ ದೇವರನ್ನು ಕರತಂದಿದ್ದು ಜಾತ್ರೆಯಲ್ಲಿ ಹೊಸ ರಂಗು ಕಂಡು ಬಂತು.
ದೇವಾಲಯ ಸಮಿತಿಯ ಡಿ.ಬಿ.ಸತ್ಯನಾರಾಯಣ, ಡಿ.ಬಿ. ರವಿಕುಮಾರ್, ಪೂಜಾರ್ ಚಿಕ್ಕಣ್ಣ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

