ತುಮಕೂರು

ಎಫ್‌ಡಿಐನಿಂದ ಹೆಚ್ಚು ಹಣ: ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ

Published On :

ಶಿರಾ: ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವ ಈ ಸಂದರ್ಭದಲ್ಲಿ ಎಫ್.ಡಿ.ಐ. ನಿಂದ (ವಿದೇಶಿ ನೇರ ಬಂಡವಾಳ ಹೂಡಿಕೆ) ಹೆಚ್ಚು  ಹಣ ಬರಲಿದ್ದು, ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಶಿರಾ ತಾಲೂಕು ಕೃಷಿಕ ಸಮಾಜದ ಕಟ್ಟಡ ಶಂಕುಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
 ಇಂದು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆ ಆಗುತ್ತಿದ್ದು, ಇಂತಹ ಬದಲಾವಣೆಯ ಸನ್ನಿವೇಶದಲ್ಲಿ ನಾವಿದ್ದು, ರೈತರು ಬದಲಾವಣೆಗೆ ಹೊಂದಿಕೊಳ್ಳಬೇಕಾಗಿದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಶೋಷಣೆಯಾಗುತ್ತಿದೆ. ರೈತರು ಶ್ರಮಪಡುವುದಕ್ಕೆ ಕೂಲಿ ಸಿಕ್ಕರೆ ಸಾಕು, ಅವರು ಖುಷಿಯಾಗಿರುತ್ತಾರೆ. ಇದಕ್ಕೆ ರೈತರಲ್ಲಿ ಶೇಖರಣೆ ಮಾಡುವ ಶಕ್ತಿ ಬರಬೇಕು ಎಂದರು.
ಕಳೆದ 50-100 ವರ್ಷಗಳಲ್ಲಿ ತಾಲೂಕಿನಲ್ಲಿ ಮಳೆ ನೀರಿನ ಪ್ರಮಾಣ 3 ಟಿ.ಎಂ.ಸಿ.ಯಷ್ಟಿದೆ. ಆದರೆ
ಕೊಳವೆಬಾವಿಗಳಿಂದ 3.85 ಟಿ.ಎಂ.ಸಿ. ನೀರು ಹೊರ ತೆಗೆಯುತ್ತಿದ್ದು ಇದಕ್ಕೆ ಹೇಮಾವತಿಯ ಹರಿವಿನಿಂದ ಅಂತರ್ಜಲ ಮಟ್ಟ ಹೆಚ್ಚಾಗಿರುವುದೇ ಕಾರಣ. ವರ್ಷಕ್ಕೆ 1 ಟಿ.ಎಂ.ಸಿ.ಯಷ್ಟು ನೀರು ಹೇಮಾವತಿ ನೀರಿನ ಹರಿವಿನಿಂದ ಸಿಗುತ್ತಿದೆ ಎಂದು ಸಮೀಕ್ಷೆ ತಿಳಿಸುತ್ತದೆ ಎಂದರು.
ಅರಿವು ಮೂಡಿಸಿ: ವಿಚಾರಣಾ ಸಂರ್ಕೀಣಗಳನ್ನು ನೆಡೆಸುವ ಮೂಲಕ ಪ್ರಗತಿಪರ ರೈತರನ್ನು ಕರೆಸಿ ಮಾರ್ಗದರ್ಶನ ನೀಡಿ ನೀರಿನ ಉಪಯೋಗ ಮತ್ತು ಕೃಷಿ ಪದ್ಧತಿ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಬಾಳಪ್ಪ ಬಸಪ್ಪ ಬೆಳಕೋಡ, ಎ.ಪಿ.ಎಂ.ಸಿ. ಅಧ್ಯಕ್ಷ ಎಂ.ಆರ್. ಶಶಿಧರ ಗೌಡ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ದೊಡ್ಡೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎನ್.ಸಿ. ಮಂಜುನಾಥ್, ಸಹಾಯಕ ಕೃಷಿ ನಿರ್ದೆಶಕ ಡಾ.ಸಿ.ವೀರಣ್ಣ, ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.