ಮತದಾರರ ಪಟ್ಟಿಯಿಂದ ಕೈಬಿಟ್ಟ ಅಭ್ಯರ್ಥಿ ಗೆಲವು: ಕ್ರಮಕ್ಕೆ ಆಗ್ರಹ
ಕ.ಪ್ರ.ವಾರ್ತೆ ಪಾವಗಡ ಮಾ.14 ಮತದಾರರ ಪಟ್ಟಿಯಿಂದ ಕೈಬಿಟ್ಟ ಅಭ್ಯರ್ಥಿಯೊಬ್ಬರು ಪುರಸಭೆ ಚುನಾವಣೆಯಲ್ಲಿ ಸ್ವರ್ಧಿಸಿ ಗೆದ್ದಿರುವುದನ್ನು ವಿರೋಧಿಸಿ ಚುನಾವಣೆ ಅಧಿಕಾರಿಗೆ ದೂರು ನೀಡಿದ ಪ್ರಸಂಗ ಪಟ್ಟಣದ 7ನೇ ವಾರ್ಡಿನಲ್ಲಿ ನಡೆದಿದೆ.
ಪುರಸಭೆ ಚುನಾವಣೆಗೆ ಪಟ್ಟಣದ 7ನೇ ವಾರ್ಡ್ ರೈನ್‌ಗೆಜ್ ಬಡಾವಣೆ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರವಾಗಿದ್ದ ಕಾರಣ ಈ ವಾರ್ಡ್‌ಗೆ ಮಹಾಲಕ್ಷ್ಮೀ ಎಂಬುವರು ಅಗತ್ಯ ದಾಖಲೆಗಳೊಂದಿಗೆ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ 160 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದರು. ಮಹಾಲಕ್ಷ್ಮೀ ಚುನಾವಣೆಗೆ ಮತ ಚಲಾಯಿಸಲು ಮತಘಟ್ಟೆಗೆ ಹೋದ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಕೈಬಿಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನು ಮನಗಂಡ ಇದೇ ವಾರ್ಡಿನಿಂದ ಸ್ವತಂತ್ರವಾಗಿ ಸ್ವರ್ಧಿಸಿ ಕೇಲವೆ ಮತಗಳ ಅಂತರದಲ್ಲಿ ಸೋತ ಅಭ್ಯರ್ಥಿಯೊಬ್ಬರು ಹಾಗೂ ಕಾಂಗ್ರೆಸ್ ಕೆಲ ಬೆಂಬಲಿಗರು ಗುರುವಾರ ಮತದಾನ ಪಟ್ಟಿಯನ್ನು ತರಿಸಿಕೊಂಡು ಪರಿಶೀಲಿಸಿದಾಗ 7ನೇ ವಾರ್ಡಿನ ಮತ ಪಟ್ಟಿಯಿಂದ ಆಕೆಯ ಹೆಸರು ಕೈಬಿಟ್ಟಿದ್ದು ಪಟ್ಟಣದ ಯಾವುದೇ ವಾರ್ಡಿನಲ್ಲಿ ಆಕೆಯ ಹೆಸರು ಮತದಾನ ಪಟ್ಟಿಯಲ್ಲಿ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಸಂಬಂಧ ಚುನಾವಣೆ ಅಧಿಕಾರಿ ಆರ್‌ಒ ಶ್ರೀಧರ್ ಹಾಗೂ ಎಆರ್‌ಒ ವಿರುದ್ಧ ತಹಸೀಲ್ದಾರ್ ಅವರಿಗೆ ದೂರು ನೀಡಿ ನ್ಯಾಯ ಕಲ್ಪಿಸಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

