ಬಡ ಮಾಸ್ತರ ಕುಟುಂಬದ ಕೈ ಹಿಡಿದ ಹೃದಯವಂತ ಓದುಗರು
ತುರುವೇಕೆರೆ, ಮಾ,14. ಅನಾಥವಾಗಿದ್ದ ಬಡ ಮಾಸ್ತರ ಕುಟುಂಬಕ್ಕೆ ಪತ್ರಿಕೆಯ ಹೃದಯವಂತ ಓದುಗರು ಆಧಾರವಾಗಿ ನಿಂತಿದ್ದಾರೆ.
ಮಾಸ್ತರು ನಿಧನ ಹೊಂದಿದ ಮರು ದಿನವೇ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿಗೆ ರಾಜ್ಯಾದ್ಯಂತ ಈ ದಿನದವರೆಗೂ ಸ್ಪಂದನೆ ಬರುತ್ತಲೇ ಇದೆ. ಮಾ 2 ರಿಂದ ಮಾಸ್ತರ ಕುಟುಂಬಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಂತಿದ್ದಾರೆ. 12 ನೇ ತಾರೀಖಿನ ವರೆಗೂ ಮಾಸ್ತರರ ಮಗಳು ಮಂಜುಳಾರವರ ಬ್ಯಾಂಕ್ ಖಾತೆಗೆ ಸುಮಾರು 1 ಲಕ್ಷದ 28 ಸಾವಿರ ರು.ಗಳು ಹಾಗೂ ಮಾಸ್ತರರ ಮನೆಗೇ ತೆರಳಿ ಸುಮಾರು 52 ಸಾವಿರ ರು.ಗಳ ಧನ ಸಹಾಯ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಸುರೇಶ್ ಎಂಬುವವರು ಪ್ರತಿ ತಿಂಗಳು ಮೂರು ಸಾವಿರ ರು.ಗಳನ್ನು ಮಾಸ್ತರ ಮಗಳು ಮಂಜುಳಾ ಅವರ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಶಾಸಕ ಎಂ.ಟಿ.ಕೃಷ್ಣಪ್ಪ ತೀರಾ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ನೋಡಿ ಮಾಸ್ತರ ಕುಟುಂಬಕ್ಕೆ ಹೊಸ ಮನೆಯನ್ನು ಕಟ್ಟಿಸಿಕೊಡುವ ಮಾತುಗಳನ್ನಾಡಿದ್ದಾರೆ. ಬಾಣಸಂದ್ರ ಗ್ರಾಮದ ಹಲವಾರು ಮಂದಿ ತಮ್ಮಲ್ಲಿ ಬೆಳೆದ ಧವಸ ಧಾನ್ಯಗಳನ್ನು ನೀಡಿದ್ದಾರೆ. ಹೀಗೆ ಬೀದಿಗೆ ಬಿದ್ದಿದ್ದ ಮಾಸ್ತರ ಕುಟುಂಬಕ್ಕೆ ರಾಜ್ಯದ ಸಹೃದಯರು ಆಶ್ರಯ ನೀಡಿ ನೆಮ್ಮದಿಯಿಂದ ಒಂದೊತ್ತಿನ ತುತ್ತಾನ್ನಾದರೂ ತಿನ್ನುವಂತಹ ಸ್ಥಿತಿಗೆ ತಂದಿದ್ದಾರೆ. ತಹಸೀಲ್ದಾರ್ ಮಂಜೇಗೌಡರು ಮಾಸ್ತರ ಮನೆಗೆ ಖುದ್ದಾಗಿ ಭೇಟಿ ನೀಡಿ ಮೂವರು ಮಕ್ಕಳಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಅಗತ್ಯವಿರುವ ಮಾಸಾಶನವನ್ನು ಸ್ಥಳದಲ್ಲೇ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೇಗೋ ಸದ್ಯ ಅನಾಥವಾಗಿದ್ದ ಮಾಸ್ತರ ಕುಟುಂಬಕ್ಕೆ ಸಹಕಾರದ ಮಹಾಪೂರವೇ ಹರಿದು ಬಂದಿದ್ದು ನೆಮ್ಮದಿಯ ಬದುಕು ಕಂಡುಕೊಳ್ಳಲು ಅವಕಾಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

