ರಾಘವೇಂದ್ರ ಸ್ವಾಮಿಗಳ 418ನೇ ವರ್ಷದ ವರ್ಧಂತಿ ಮಹೋತ್ಸವ
ತಿಪಟೂರು: ನಗರದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿಗಳ 418ನೇ ವರ್ಷದ ವರ್ಧಂತಿ ಮಹೋತ್ಸವವು ಮಾ.19ರಿಂದ 22ರವರೆಗೆ ನಡೆಯಲಿದೆ. ಮಾ.19ರಂದು ಪಂಚಾಮೃತಾಭಿಷೇಕ, ಅಷ್ಟೋತ್ತರ ಸೇವೆ, ಕನಕಾಭಿಷೇಕ, ರಂಗಪೂಜೆ, ಮಹಾಮಂಗಳಾರತಿ ಕಾರ್ಯಕ್ರಮಗಳು.
ಮಾ.20ರಂದು ಲೋಕ ಕಲ್ಯಾಣಾರ್ಥವಾಗಿ ವಿಷ್ಣುಸಹಸ್ರನಾಮಯಾಗ, ಪಾದಪೂಜೆ, ಉತ್ತರಾಭಿಮುಖ ಮುಖ್ಯ ಪ್ರಾಣದೇವರ ರಥೋತ್ಸವ, ತೀರ್ಥಪ್ರಸಾದ ವಿನಿಯೋಗ ಇರುತ್ತದೆ. ರಾತ್ರಿ 7ಗಂಟೆಗೆ ಭಕ್ತಿಸುಧಾ ವರ್ಷಿಣಿ ಕಾರ್ಯಕ್ರಮ. ಮಾ.21ರಂದು ಶ್ರೀ ವಿಷ್ಣುಗಾಯತ್ರಿ ಹೋಮ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠಾಧೀಶರಿಗೆ ಪೂರ್ಣಕುಂಭ ಸ್ವಾಗತ ಹಾಗೂ ಶ್ರೀಗಳಿಂದ ಪ್ರವಚನ ಏರ್ಪಡಿಸಲಾಗಿದೆ. ಮಾ.22ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ಪಾದಂಗಳವರಿಂದ ನರಸಿಂಹ ದೇವರ ಪೂಜೆ, ಗುರುರಾಯರಿಗೆ ಮಹಾಮಂಗಳಾರತಿ, ಫಲ ಮಂತ್ರಾಕ್ಷತೆ ವಿನಿಯೋಗವಿರುತ್ತದೆ.
ಕ್ಲಾರೆನ್ಸ್ ಶಾಲೆಯಲ್ಲಿ ಪ್ರತಿಭಾನ್ವೇಷಣೆ
ತುಮಕೂರು: ತುಮಕೂರಿನ ಅಶೋಕನಗರದಲ್ಲಿರುವ ಕ್ಲಾರೆನ್ಸ್ ಶಾಲೆಯಲ್ಲಿ ಸುಪ್ತ ಪ್ರತಿಭಾನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾವಾರು ಹಾಗೂ ಜಿಲ್ಲಾವಾರು ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ಎಂ.ಕೆ. ಮುಸ್ತಾಪಾಖಾನ್ ವಹಿಸಿದ್ದರು. ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಐಟಿಎಸ್ಐ ಮುಖ್ಯಸ್ಥ ಪಿ.ವಿ. ನಾಗರಾಜು, ನಿರ್ದೇಶಕ ಎಸ್.ಎಸ್. ಭಾರತಾಂಬ, ಮುಖ್ಯ ಕಾರ್ಯಸಂಚಾಲಕರಾದ ಇ.ಕೊಟ್ರೇಶ್ ಹಿರೇಮಠ್ ಉಪಸ್ಥಿತರಿದ್ದರು. ಸರಳಕುಮಾರಿ ಪ್ರಾರ್ಥಿಸಿ, ಎಸ್ಎಸ್. ಭಾರತಾಂಬ ಸ್ವಾಗತಿಸಿದರು. ರೂಹಿ ಬಷೀರ್ ವಂದಿಸಿದರು. ಎಸ್. ರೇಷ್ಮ ವಂದಿಸಿದರು.
ಜನಸಂಪರ್ಕ ಸಭೆ
ತುಮಕೂರು: ಜಿಲ್ಲೆಯ ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲೂಕುಗಳಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಸ್.ಆರ್. ಶಿದ್ಲಿಂಗಣ್ಣವರ ನೇತೃತ್ವದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಮಾರ್ಚ್ 18 ರಂದು ಕೊರಟಗೆರೆ ತಾಲೂಕಿನ ತಾ.ಪಂ. ಸಮುದಾಯ ಭವನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಅದೇ ದಿನ ಮಧುಗಿರಿ ತಾಲೂಕಿನ ತಾ.ಪಂ. ಸಮುದಾಯ ಭವನ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮಾರ್ಚ್ 19 ರಂದು ಪಾವಗಡ ತಾಲೂಕಿನ ತಾ.ಪಂ. ಸಮುದಾಯ ಭವನದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1-30 ಗಂಟೆಯವರೆಗೆ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

