ಅಕ್ಕಮಹಾದೇವಿ ಮಹಿಳಾ ಚಿಂತನೆ ವಿಚಾರಗೋಷ್ಠಿ
ಕ.ಪ್ರ. ವಾರ್ತೆ ತುಮಕೂರು ಮಾ.18
ಪುರುಷ ಪ್ರಧಾನ ವ್ಯವಸ್ಥೆಯು ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ತನ್ನ ವಚನಗಳ ಮೂಲಕ ಛಾಟಿ ಏಟು ಕೊಟ್ಟ ಸಮಾಜ ವಿಜ್ಞಾನಿ ಅಕ್ಕಮಹಾದೇವಿ ಎಂದು ಲೇಖಕಿ ಶೈಲಾ ನಾಗರಾಜ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಮಹಿಳಾ ಜಾಗೃತಿ ಸಂಘ ಜಿಲ್ಲಾ ಮಹಿಳಾ ಸಂಘಟನೆ ಆಶ್ರಯದಲ್ಲಿ ಏರ್ಪಡಿಸಿದ್ದ ಅಕ್ಕಮಹಾದೇವಿಯ ಮಹಿಳಾ ಚಿಂತನೆಗಳು ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಅಕ್ಕಮಹಾದೇವಿ ಕನ್ನಡ ಸಾಹಿತ್ಯದ ಮೊದಲ ಕವಯತ್ರಿ. ಹಾಗೆ ನೇರ ನಿಷ್ಠುರ ಸಮಾಜ ಚಿಕಿತ್ಸಕಿ ಹೌದು. ಸ್ತ್ರೀ ಪುರುಷರ ಅಸಮಾನತೆಯ ಬಗೆಗಿನ ಅವಳ ಜಾಗೃತಿ ಅಸಮಾನ್ಯವಾದುದು ಎಂದು ಬಣ್ಣಿಸಿದರು. 21ನೇ ಶತಮಾನದಲ್ಲೂ ಹೆಣ್ಣಿನ ಮೇಲಿನ ವಿವಿಧ ಶೋಷಣೆಗಳು ಮೇರೆ ಮೀರುತ್ತಿರುವುದು ವಿಷಾದನೀಯ ಎಂದ ಅವರು ಅಕ್ಕಮಹಾದೇವಿಯ ಬದುಕು, ಚಿಂತನೆ ಇಂದು ಆದರ್ಶವಾಗಬೇಕಾಗಿದೆ ಎಂದರು.
ಜಾಗೃತಿ ಮಹಿಳಾ ಸಂಘದ ಕಾರ್ಯದರ್ಶಿ ಜಯರತ್ನ ಹಾಗೂ ನೀಲಾಂಬಿಕೆ ಅವರು ಮಹಿಳಾ ಚಿಂತನೆಗಳ ಬಗ್ಗೆ ಮಾತನಾಡಿದರು. ಜಾಗೃತಿ ಮಹಿಳಾ ಸಂಘದ ಉಪಾಧ್ಯಕ್ಷೆ ಶಾಂತಾ ಶಂಕರ್ ಅಕ್ಕಮಹಾದೇವಿ ವಚನಗಳನ್ನು ಹಾಡಿದರು. ಸಂಘದ ಅಧ್ಯಕ್ಷೆ ರತ್ನಾಸ್ವಾಮಿ ಸ್ವಾಗತಿಸಿದರು. ಸಂಚಾಲಕಿ ಸೌಭಾಗ್ಯ ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಅರುಣಾನಂದ ನಿರೂಪಿಸಿದರು. ಜಾಗೃತಿ ಮಹಿಳಾ ಸಂಘದ ಸದಸ್ಯರು ಸಾಮೂಹಿಕ ವಚನ ಗಾಯನ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

