ಭ್ರಷ್ಟಾಚಾರ ವಿರುದ್ಧ ಯುವಜನತೆ ದನಿಯೆತ್ತಲಿ: ಶಾಸಕ ಬಿ.ಸಿ.ನಾಗೇಶ್
ಕ.ಪ್ರ. ವಾರ್ತೆ ತಿಪಟೂರು ಮಾ.20
ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣಗಳು ಶಿಬಿರಗಳಿಂದ ದೊರೆಯಬೇಕಾಗಿದೆ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಕೋಟೆನಾಯಕನಹಳ್ಳಿ ಮತ್ತು ಹುಚ್ಚಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಸ್ಯೆಗಳ ಬಗ್ಗೆ ಯುವಕರು ಜಾಗೃತ ಮನಸ್ಥಿತಿ ಕಾಯ್ದುಕೊಂಡು ದೇಶ ಕಾಣುತ್ತಿರುವ ಕೋಟ್ಯಂತರ ಮೌಲ್ಯದ ಭ್ರಷ್ಟಾಚಾರಗಳಿಗೆ ಪ್ರತಿಭಟನಾತ್ಮಕವಾಗಿ ಪ್ರತಿಕ್ರಿಯಿಸಬೇಕಿದೆ ಎಂದರು. ಇಂದು ಪ್ರತಿ ಹೆಜ್ಜೆಗೂ ಕಾಲೇಜುಗಳು ವಿಶ್ವವಿದ್ಯಾನಿಲಯಗಳು ಸಿಗುತ್ತಿವೆ. ಆದರೂ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ. ಇದಕ್ಕೆ ಚರಿತ್ರೆಯ ಸಾಮಾಜಿಕ ಮೌಲ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳದೇ ಇರುವುದೇ ಆಗಿದೆ ಎಂದರು. ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಡಾ.ಎಂ.ಕೊಟ್ರೇಶ್ ಮಾತನಾಡಿ, ಸೇವಾ ಯೋಜನೆಗಳು ಕೇವಲ ಗ್ರಾಮಗಳನ್ನು ಸ್ವಚ್ಛಗೊಳಿಸುವುದಷ್ಟೇ ಅಲ್ಲದೆ, ಗ್ರಾಮೀಣ ಸಮುದಾಯಗಳ ನಡುವಿನ ಒಡನಾಟ ಮತ್ತು ಕಲಿಕೆಯ ಅನುಸಂಧಾನ ಆಗಬೇಕೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಜಯದೇವಪ್ಪ ಅವರು, ಯುವಕರಲ್ಲಿ ಧಾರ್ಮಿಕ ಮತ್ತು ನೈತಿಕಪ್ರಜ್ಞೆ ಸಮಾಜದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಬಳಕೆಯಾದಾಗ ಮಾತ್ರ ನಿಜವಾದ ಯುವಶಕ್ತಿ ಜಾಗೃತಗೊಳ್ಳಲು ಸಾಧ್ಯ ಎಂದರು.
ಡಾ. ಡಿ.ಆರ್. ಹೊನ್ನಾಂಜಿನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಗಳ ಅಧ್ಯಯನ ಮತ್ತು ಸ್ವಚ್ಛತೆಯನ್ನು ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಸಮಾಜದೆಡೆಗಿನ ಪ್ರಾಮಾಣಿಕ ತುಡಿತ ನಿಜವಾದ ಸ್ವಯಂ ಸೇವಕರನ್ನಾಗಿ ರೂಪಿಸಲಿದೆ ಎಂದರು. ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ.ಮಂಜುಳಾ, ರೇಲ್ವೆ ಇಲಾಖೆಯ ಎ.ಪರಪ್ಪ, ಉಪನ್ಯಾಸಕರಾದ ನಾಗರಾಜು, ಕೆ.ವಿ. ಜ್ಯೋತಿಕಿರಣ್, ಎಸ್.ಎನ್. ನರಸಿಂಹರಾಜು, ಡಾ. ಎಲ್.ಎಂ. ವೆಂಕಟೇಶ್,ನೀಲಕಂಠಸ್ವಾಮಿ, ಕಾಂತರಾಜು, ಸುರೇಶ್, ಶಿವಯ್ಯ, ವಿಜಯಲಕ್ಷ್ಮಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭೈರೇಶ್ ನಿರೂಪಿಸಿ, ನಾಗರಾಜು ಸ್ವಾಗತಿಸಿದರು. ಜ್ಯೋತಿಕಿರಣ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

