ತುಮಕೂರು

ಇತಿಹಾಸ ಪ್ರಸಿದ್ಧ ವೈಭವದ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ

Published On :

ಕ.ಪ್ರ ವಾರ್ತೆ ಗುಬ್ಬಿ ಮಾ.22
ಇತಿಹಾಸ ಪ್ರಸಿದ್ಧ ಶ್ರೀ ಚನ್ನಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ  ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ರಥ ಎಳೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಈ ರಥೋತ್ಸದಲ್ಲಿ ವಿವಿಧ ಮಠಾಧಿಪತಿಗಳಾದ ದೊಡ್ಡಗುಣಿ ಹೀರೇ ಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಬ್ಬಿ ತೊರೆ ಮಠದ ಶ್ರೀರಾಜಶೇಖರಸ್ವಾಮೀಜಿ, ತೆವಡೆಹಳ್ಳಿ ಗೋಸಲ ಶ್ರೀಚನ್ನಬಸವೇಶ್ವರ ಗದ್ದುಗೆ ಮಠದ ಗೋಸಲ ಶ್ರೀಚನ್ನಬಸವೇಶ್ವರ ಸ್ವಾಮೀಜಿ, ಚಿಕ್ಕತೋಟ್ಲುಕೆರೆ ಮಠದ ಶ್ರೀ ಅಟವಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಜಂಗಮ ಮಠದ ಶ್ರೀಗೌರಿಶಂಕರ ಸ್ವಾಮೀಜಿ ಸೇರಿದಂತೆ ದೇವಾಲಯದ ಆಡಳಿತಾಧಿಕಾರಿ ಎಸ್. ಎನ್.ನಕುಲ್,  ತಹಸಿಲ್ದಾರ್ ಸಿದ್ದಪ್ಪ ಸೇರಿದಂತೆ ದೇವಾಲಯದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಪಟ್ಟಣ ಸೇರಿದಂತೆ ನಾಡಿನ ವಿವಿಧ ಭಾಗಗಳಂದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು. ರಥೋತ್ಸದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು ಪಾನಕ, ಫಲಹಾರ ವಿತರಿಸುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳು ತಮ್ಮ ಇಷ್ಟಾರ್ಥಪೂಜೆ ಸಲ್ಲಿಸಿದರು.

ಗ್ರಾ.ಪಂ. ಕಾರ್ಯದರ್ಶಿಯಿಂದ ಧಮಕಿ: ಆರೋಪ
ಕ.ಪ್ರ ವಾರ್ತೆ ತಿಪಟೂರು ಮಾ.22

ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೊಬ್ಬರಿದೊಡ್ಡಯ್ಯನಪಾಳ್ಯ ಲಂಬಾಣಿ ತಾಂಡ್ಯದಲ್ಲಿ ಕಳೆದ 10ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಟ ನಡೆದಿದ್ದು, ಸುಟ್ಟು ಹೋಗಿರುವ ಮೋಟಾರ್ ಅನ್ನು ರಿಪೇರಿ ಮಾಡಿಸಿಕೊಡಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಒತ್ತಾಯಿಸಿದರೆ ಆತ ಗ್ರಾಮಸ್ಥರಿಗೆ ಧಮಕಿ ಹಾಕುತ್ತಾನೆ ಎಂದು  ತಾಲೂಕು ಶ್ರೀ ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಬಿ.ಟಿ. ಕುಮಾರ್ ಲಿಖಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರಾಮದಲ್ಲಿ 120ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಹೆಚ್ಚು ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಕಿಲೋ ಮೀಟರ್ ದೂರದ ತೋಟಗಳಿಂದ ಮನೆ ಮಂದಿಯೆಲ್ಲಾ ನೀರು ಹೊತ್ತು ತರುತ್ತಾರೆ. ಕೂಡಲೆ ಈ ಕಡು ಬೇಸಿಗೆಯ ದಿನಗಳಲ್ಲಿ ಉಂಟಾಗಿರುವ ನೀರಿನ ಹಾಹಾಕಾರವನ್ನು ನೀಗಿಸಿ ಕೊಡಬೇಕಲ್ಲದೆ ಧಮಕಿ ಹಾಕಿರುವ ಮತ್ತು ಜನರಿಗೆ ತುರ್ತಾಗಿ ನೀರು ಒದಗಿಸುವ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿರುವ ಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಕೊಡದಿದ್ದರೆ ಉಪವಿಭಾಗಾಧಿಕಾರಿ ಅಥವಾ ತಾ.ಪಂ. ಕಾರ್ಯಾಲಯದ ಆವರಣದಲ್ಲಿ ಧರಣಿ ನಡೆಯಸಲಾಗುವುದೆಂದು ಸೇವಾಲಾಲ್ ಲಂಬಾಣಿ ಸಂಘ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.