ಕೆಜೆಪಿ ಪ್ರಚಾರಕ್ಕೆ ಚಾಲನೆ
ಕ.ಪ್ರ. ವಾರ್ತೆ ಪಾವಗಡ ಮಾ.27
ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ಪಕ್ಷದ ತಾಲೂಕು ಅಧ್ಯಕ್ಷ ರವಿಶಂಕರ್ ನಾಯಕ್, ಮುಖಂಡ ಕೆ.ಟಿ.ಶಿವಕುಮಾರ್, ಅಭ್ಯರ್ಥಿ ಪಾವಗಡ ಶ್ರೀರಾಮ್ ಹಾಗೂ ಕಾರ್ಯದರ್ಶಿ ರಂಗಸಮುದ್ರ ಜಯರಾಮ್ ನೇತೃತ್ವದಲ್ಲಿ ಪಟ್ಟಣದ ಕೆಜೆಪಿ ಕಚೇರಿಯ ಬಳಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅಭ್ಯರ್ಥಿ ಪಾವಗಡ ಶ್ರೀರಾಮ್ ಮಾತನಾಡಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಪಾವಗಡ ಕ್ಷೇತ್ರಕ್ಕೆ ವಿಧಾನ ಸಭಾ ಅಧಿಕೃತ ಅಭ್ಯರ್ಥಿಯೆಂದು ತಮ್ಮನ್ನು ಘೋಷಿಸಿದ್ದು ತಾಲೂಕಿನಾದ್ಯಂತ ಮತದಾರರ ಮನೆಗಳಿಗೆ ತೆರಳಲು ಕೆಜೆಪಿ ಸಿದ್ಧವಾಗಿದೆ ಎಂದರು.
ಸ್ಪಂದಿಸಿದ ಬಿಎಸ್‌ವೈ: ಅನೇಕ ಜನಪರ ಹೋರಾಟಗಳ ಮೂಲಕ ರಾಜ್ಯ, ಜಿಲ್ಲೆ ಸೇರಿದಂತೆ ಈಗಾಗಲೇ ತಾಲೂಕಿನ ಜನಮನದಲ್ಲಿ ನನ್ನನ್ನು ಗುರುತಿಸಿ ಕೊಂಡಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಎಸ್ಸಿ, ಎಸ್‌ಟಿ, ಒಕ್ಕಲಿಗ, ಲಿಂಗಾಯತ, ಕುರುಬ, ಗೊಲ್ಲ ಜನಾಂಗಗಳು, ರೈತರು, ವೃದ್ಧರು, ನಿರ್ಗತಿಕರು, ದಲಿತರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಏಳಿಗೆಗೆ ಯಡಿಯೂರಪ್ಪ ಸಿಎಂ ಅವಧಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಅದನ್ನೆಲ್ಲ ವಿವರಿಸುವುದಾಗಿ ತಿಳಿಸಿದರು.
ಅನೇಕ ವರ್ಷಗಳಿಂದ ಜನಪರ ಸಮಸ್ಯೆಗಳ ಕುರಿತು ಪಾದಯಾತ್ರೆ ಹೋರಾಟಗಳ ಮೂಲಕ ವಿಧಾನ ಸೌಧದಲ್ಲಿ ಧ್ವನಿ ಎತ್ತಿದ್ದು ನಮ್ಮ ಧ್ವನಿಗೆ ಯಾವುದೇ ಸರ್ಕಾರ ಸ್ವಂದಿಸಲಿಲ್ಲ. ಜನಪರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪಿತೂರಿ ಮಾಡುವ ಮೂಲಕ ಸಿಎಂ ಪದವಿಯಿಂದ ಕೆಳಗಿಳಿಸಿದರು. ನಮ್ಮ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವ ಯಡಿಯೂರಪ್ಪ ಈಗ ನಮ್ಮೊಂದಿಗೆ ಇದ್ದಾರೆ.ಅವರನ್ನು ಸಿಎಂ ಮಾಡುವ ಮೂಲಕ ದಲಿತ ಹಾಗೂ ಜನಪರ ಕಾರ್ಯಕ್ರಮಗಳು ಜಾರಿಗೆ ತರಲು ಅನುಕೂಲವಾಗುತ್ತೆದೆ ಎಂದರು. ಇದೇ ಸಂದರ್ಭದಲ್ಲಿ ಮುಖಂಡ ಗೋಪಾಲನಾಯಕ್, ಕೃಷ್ಣಾಪುರ ರಾಮಕೃಷ್ಣ, ಬಿ.ಜಿ.ಸಾಗರ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

