ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ: ರು. 48 ಲಕ್ಷ ನಷ್ಟ

Updated on: 

ಕ.ಪ್ರ.ವಾರ್ತೆ ್ಣ ಗುಬ್ಬಿ ್ಣ ಮಾ.30
ಸರಕು ಸಾಗಣೆ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದೆ. ಸುಮಾರು 48 ಲಕ್ಷ ರು.ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಶಿವಸಂದ್ರ ಗೇಟ್‌ಬಳಿ ಶನಿವಾರ ನಡೆದಿದೆ. ನೆಲಮಂಗಲದಿಂದ ಬೆಂಕಿಪೊಟ್ಟಣ, ಸಿಗರೇಟು, ಕುರ್ಕುರೆ ಸೇರಿದಂತೆ  ಲಕ್ಷಾಂತರ ರು.ಗಳ ಮೌಲ್ಯದ ಇನ್ನಿತರೆ ಸಾಮಗ್ರಿಗಳನ್ನು ತುಂಬಿಕೊಂಡು ತಿಪಟೂರು ಹಾಗೂ ಅರಸೀಕೆರೆ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಮಾರ್ಗಮಧ್ಯೆ ಬೆಂಕಿ ಹೊತ್ತಿಕೊಂಡಿದೆ. ಶಿವಸಂದ್ರ ಗೇಟ್ ಬಳಿ ಸಾರ್ವಜನಿಕರು ಲಾರಿಯಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಈ ವಿಷಯ ತಿಳಿಸಿದ್ದಾರೆ. ತಕ್ಷಣ ಲಾರಿ ಚಾಲಕ ಮತ್ತು ಕ್ಲೀನರ್ ಇವರು ಕೆಳಗೆ ಇಳಿದು ನೋಡುವಷ್ಟರಲ್ಲಿ ಲಾರಿಯಲ್ಲಿದ್ದ ಲಕ್ಷಾಂತರ ರು.ಬೆಲೆ ಬಾಳುವ ಸಾಮಗ್ರಿಗಳು ಹೊತ್ತಿ ಉರಿದಿದ್ದವು. ಸ್ಥಳದ್ದಲ್ಲಿದ್ದ ಸಾರ್ವಜನಿಕರು ದೂರವಾಣಿ ಮುಖೇನ ತುಮಕೂರು ಅಗ್ನಿಶಾಮಕ ಠಾಣೆಗೆ ಈ ವಿಷಯ ತಿಳಿಸಿದರು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗವಿಸಿದರಾದರೂ ಅಷ್ಟರಲ್ಲಿ ಲಕ್ಷಾಂತರ ರು.ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದುವು.
ಸುದ್ದಿ ತಿಳಿದ ಗುಬ್ಬಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com