ತುಮಕೂರು

ಒತ್ತುವರಿ ತೆರವು ಅಧಿಕಾರಿಗಳಿಗೆ ಬಿಟ್ಟಿದ್ದು: ಸೊಗಡು

Published On :

ತುಮಕೂರು: ಸರ್ಕಾರಿ ಜಾಗ ಒತ್ತುವರಿ ಹಾಗೂ ರಾಯಗಾಲುವೆ ಒತ್ತುವರಿ ತೆರವಿಗೆ ಬದ್ಧವಾಗಿರುವುದಾಗಿಯೂ, ಒತ್ತುವರಿ ತೆರವು ಅಧಿಕಾರಿಗಳಿಗೆ ಬಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸ್ಪಷ್ಟಪಡಿಸಿದರು.
ತಾವು ಯಾವುದೇ ಆರೋಪಿ ಪರವೂ ಇಲ್ಲ. ಒತ್ತುವರಿದಾರರ ಪರವೂ ಇಲ್ಲ  ಎಂದು ಸ್ಪಷ್ಟಪಡಿಸಿದ ಶಿವಣ್ಣ, ಸುಪ್ರೀಂಕೋರ್ಟ್ ಆದೇಶದಂತೆ ಯಾವುದೇ ಸರ್ಕಾರಿ ಜಾಗದ ಒತ್ತುವರಿಯನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಬಹುದಾಗಿದೆ. ಆದರೆ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದಕ್ಕೆ ತಾವು ಹೊಣೆಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರದಲ್ಲಿರುವ ರಾಯಗಾಲುವೆ, ಕೆರೆ ಒತ್ತುವರಿ ತೆರವಿಗೆ ತಾವು ಅಡ್ಡಗಾಲಾಗಿಲ್ಲ. ಬಡ್ಡಿಹಳ್ಳಿಯಲ್ಲಿರುವ ಎಸ್ಆರ್ಎಸ್  ಕಾಲೇಜು ಕೂಡ ಸರ್ಕಾರಿ ಜಾಗ. ಒತ್ತುವರಿ ಮಾಡಿಕೊಂಡು ಕಾಲೇಜು  ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸುವ ಜವಾಬ್ದಾರಿ ಅಧಿಕಾರಿಗಳಿಗೆ ಬಿಟ್ಟಿದ್ದು ಎಂದರು.
ಜಿಎಸ್ಬಿ ವಿರುದ್ಧ ಕಿಡಿ: ಸಂಸದ ಜಿ.ಎಸ್. ಬಸವರಾಜ್ ಅವರ ಸಮಯಸಾಧಕತನ, ಬಿಜೆಪಿಯಲ್ಲಿದ್ದುಕೊಂಡೇ ಕೆಜೆಪಿ ಪರ ಪ್ರಚಾರ ಮಾಡುವುದು, ಮಗನಿಗೆ ಕೆಜೆಪಿ ಟಿಕೆಟ್ ಕೊಡಿಸಿರುವುದು ಎಲ್ಲವೂ ಅವರ ಪಕ್ಷದ್ರೋಹ ಚಟುವಟಿಕೆಯನ್ನು ತೋರುತ್ತದೆ. ಅವರಿಗೆ ಕೇಂದ್ರ ಹೈಕಮಾಂಡ್ ಕಾರಣ ಕೇಳಿ ನೊಟೀಸ್ ನೀಡಿದೆ. ಜಿಎಸ್ಬಿ ಗೆ ಛಲ, ಬದ್ಧತೆ ಇದ್ದರೆ ಮೊದಲು ಬಿಜೆಪಿಗೆ ಹಾಗೂ ಲೋಕಸಭಾ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಸವಾಲು ಹಾಕಿದರು. ಪಕ್ಷದ್ರೋಹಿಗಳನ್ನು ಜನ ಜರಡಿ ಹಿಡಿಯುತ್ತಾರೆ ಎಂದು  ನುಡಿದರು.
ಶಾಂತಿ ತಮ್ಮ ಸಾಧನೆ: ಕಳೆದ 20 ವರ್ಷಗಳಲ್ಲಿ ಶಾಸಕನಾಗಿದ್ದೆ. ಈ ಅವಧಿಯಲ್ಲಿ ಶಾಂತಿ, ಅಭಿವೃದ್ಧಿ ಮಾಡಿಸಿದ್ದು ತಮ್ಮ ಸಾಧನೆ. ಶಾಂತಿಭಂಗಕ್ಕೆ ಅವಕಾಶ ಕಲ್ಪಿಸಿದೇ ಇದ್ದದ್ದು, ಕರ್ಪ್ಯೂ, 144 ಸೆಕ್ಷನ್, ಗೋಲಿಬಾರ್ ಅವಕಾಶ ಕಲ್ಪಿಸದೇ ಇದ್ದದ್ದು ತಮ್ಮ ಅವಧಿಯ ಸಾಧನೆ ಎಂದು ಸಚಿವರು ಹೆಮ್ಮೆಯಿಂದ ಹೇಳಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.