ತುಮಕೂರು

ಕನಿಷ್ಠ 135 ಸ್ಥಾನ ಜೆಡಿಎಸ್ಗೆ ಖಚಿತ

Published On :

ತುರುವೇಕೆರೆ:  ರಾಜ್ಯದಲ್ಲಿ ಬರಗಾಲ ಬಂದು ಸೊರಗಿ ಹೋಗಿರುವ ಸೂಕ್ತ ಬೆಂಬಲ ಬೆಲೆ ಇಲ್ಲದೆ ಕರಗಿ ಹೋಗಿರುವ, ಮಳೆ ಬೆಳೆ ಇಲ್ಲದೆ ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತರಾಗಿರುವ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುವವನಿದ್ದರೆ ಅದು ಈ ಕುಮಾರಸ್ವಾಮಿ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
 ಪಟ್ಟಣದ ಗುರುಭವನದ ಆವರಣದಲ್ಲಿ ಜೆಡಿಎಸ್ ಪರ ಮತಯಾಚನೆ ಮಾಡಲು ಆಗಮಿಸಿದ್ದ ಕುಮಾರಸ್ವಾಮಿಯವರು ರಾಜ್ಯದಲ್ಲಿ ಕನಿಷ್ಠ 135 ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ. ರಾಜ್ಯದಲ್ಲಿ ಸ್ವಾಭಿಮಾನದಿಂದ ರೈತರ ಪರ ಸರ್ಕಾರವನ್ನು ನಡೆಸಲಿದೆ ಎಂದು ಹೇಳಿದರು. ಉತ್ತರ ಕರ್ನಾಟಕದಲ್ಲೇ ಕನಿಷ್ಠ 35  ಸ್ಥಾನಗಳನ್ನು ಜೆಡಿಎಸ್ ಪಡೆಯಲಿದೆ ಎಂದರು.
ರೈತರಿಗಾಗಿ ವಿಶೇಷವಾಗಿ ನೀರಾವರಿ ಯೋಜನೆಗಾಗೇ ಮಹತ್ವವಾದ ಪ್ರಣಾಳಿಕೆಯನ್ನು ಜೆಡಿಎಸ್ ಹೊಂದಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮರುಘಳಿಗೆಯಲ್ಲೇ ರೈತರ ಸಾಲವನ್ನು ಮನ್ನಾ ಮಾಡುವ ಕೆಲಸವಾಗುತ್ತದೆ ಎಂದರು.
ಕೃಷ್ಣಪ್ಪ ಅಲ್ಲ ನಾನೇ ಅಭ್ಯರ್ಥಿ: ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿರುವುದು ಎಂ.ಟಿ.ಕೃಷ್ಣಪ್ಪ ಅಲ್ಲ. ಕುಮಾರಸ್ವಾಮಿ ಮತ್ತು ದೇವೇಗೌಡ ಎಂಬುದನ್ನು ಕ್ಷೇತ್ರದ ಜನರು ಮನಗಾಣಬೇಕು. ಈ ಕ್ಷೇತ್ರ ಎಂದೂ ಜೆ ಡಿಎಸ್ನ ಭಧ್ರಕೋಟೆ. ಕೋಟೆಯನ್ನು ಭೇದಿಸಲು ರಾಜ್ಯವನ್ನು ಲೂಟಿ ಮಾಡಿ ಕೆಜೆಪಿಯನ್ನು ಸ್ಥಾಪನೆ ಮಾಡಿರುವ ಬಿ.ಎಸ್. ಯಡಿಯೂರಪ್ಪನವರ ಹಣ ಕ್ಷೇತ್ರಕ್ಕೆ ಬರುತ್ತಿದೆ. ಹಣಕ್ಕೆ ಮರುಳಾಗಬೇಡಿ. ರಾಜ್ಯದಲ್ಲಿ ಯಾರದೇ ಮುಲಾಜಿಗೆ ಒಳಪಡದೇ ರೈತರ ಸರ್ಕಾರ ರಚನೆ ಮಾಡಬೇಕೆಂಬ ಕನಸಿರುವುದರಿಂದ ಈ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪನವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಕುಮಾರಸ್ವಾಮಿ ವಿನಂತಿಸಿಕೊಂಡರು.   ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಉತ್ತಮ ಸೇವೆ ಮಾಡಿದ್ದೇನೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಲು ತಮ್ಮನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಕ್ಷೇತ್ರದ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿದರು.
ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ತಾಲೂಕು ಅಧ್ಯಕ್ಷ ಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎ.ಬಿ.ಜಗದೀಶ್, ಶ್ರೀನಿವಾಸ್, ಲತಾ ವಿಶ್ವನಾಥ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಸದಸ್ಯರಾದ ಕೋಳಾಲ ಗಂಗಾಧರ್,  ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಸದಸ್ಯರಾದ ಶಂಕರೇಗೌಡ, ಕುಶಾಲ್ ಕುಮಾರ್, ಮಂಗೀಕುಪ್ಪೆ ಬಸವರಾಜು, ವಕೀಲ ಧನಪಾಲ್, ಕಡೇಹಳ್ಳಿ ಸಿದ್ದೇಗೌಡ, ಲಿಂಗೇಗೌಡ, ಬೀಚನಹಳ್ಳಿ ರಾಮಣ್ಣ, ರಾಮಡಿಹಳ್ಳಿ ದೇವರಾಜು ಮೊದಲಾದವರು ಭಾಗವಹಿಸಿದ್ದರು.
 ಸಭೆ ಆರಂಭಕ್ಕೆ ಮುನ್ನ ಸನ್ಯಾಸಿಯೋರ್ವರು ಜೆಡಿಎಸ್ ಧ್ವಜವನ್ನು ಹಿಡಿದು ವೇದಿಕೆಯ ಮೇಲೆ ಕಾಣಿಸಿಕೊಂಡರು. ಶಾಸಕರಾದಿಯಾಗಿ ಪಕ್ಷದ ಅನೇಕ ಮುಖಂಡರು ತಲೆಗೆ ಹಸಿರು ಪೇಟ ಸುತ್ತಿಕೊಂಡಿದ್ದು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.


ರೈತರಿಗಾಗಿ ವಿಶೇಷವಾಗಿ ನೀರಾವರಿ ಯೋಜನೆಗಾಗೇ ಮಹತ್ವವಾದ ಪ್ರಣಾಳಿಕೆಯನ್ನು ಜೆಡಿಎಸ್ ಹೊಂದಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮರುಗಳಿಗೆಯಲ್ಲೇ ರೈತರ ಸಾಲವನ್ನು ಮನ್ನಾ ಮಾಡುವ ಕೆಲಸವಾಗುತ್ತದೆ
ಟಿ  ಎಚ್.ಡಿ. ಕುಮಾರಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.