ತುಮಕೂರು

ಮತದಾರರಲ್ಲದವರು ಕ್ಷೇತ್ರ ಬಿಡಿ: ಡಿಸಿ

Published On :

ಕ.ಪ್ರ.ವಾರ್ತೆ  ತುಮಕೂರು  ಮೇ 2
ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರ ಮೇ 3 ರ ಸಾಯಂಕಾಲ 5 ಗಂಟೆಗೆ ಮುಕ್ತಾಯವಾಗಲಿದ್ದು, ಅಂದು 5 ಗಂಟೆ ನಂತರ  ಆಯಾ ಕ್ಷೇತ್ರದ ಮತದಾರರಲ್ಲದವರು, ಪ್ರಚಾರಕ್ಕೆ ಹೊರಗಿನಿಂದ ಬಂದ ಪಕ್ಷದ ಕಾರ್ಯಕರ್ತರು, ರಾಜಕೀಯ, ಮೆರವಣಿಗೆ, ಪ್ರಚಾರ ಕಾರ್ಯಗಳಿಗೆ ಆಗಮಿಸಿದಂತಹ ಕಾರ್ಯಕರ್ತರು ವಿಧಾನಸಭಾ ಕ್ಷೇತ್ರದಲ್ಲಿ ಇರಕೂಡದೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಕಟ್ಟಪಣೆ ಹೊರಡಿಸಿದ್ದಾರೆ.
ಮೇಲ್ಕಾಣಿಸಿದವರು ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಹೋಗಿರುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಈ ಕೆಳಕಂಡಂತೆ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.
ಕಲ್ಯಾಣ ಮಂಟಪ, ಕಮ್ಯೂನಿಟಿ  ಹಾಲ್, ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ವಿಧಾನಸಭಾ ಕ್ಷೇತ್ರದವರಲ್ಲದವರು ಇರುವರೆ ಎಂಬುದನ್ನು ಪರಿಶೀಲಿಸುವುದು, ವಸತಿ ಗೃಹ, ಅತಿಥಿ ಗೃಹ ವಾಸ್ತವ್ಯದ ಮೇಲೆ ನಿಗಾ ಇಡುವುದು, ಆಯಾ ಕ್ಷೇತ್ರಗಳ ಸರಹದ್ದುಗಳಲ್ಲಿ ನಿಯೋಜಿಸಿದ ಚೆಕ್‌ಪೋಸ್ಟ್‌ಗಳಲ್ಲಿ ಹೊರಗಿನಿಂದ ಬರುವ ವಾಹನಗಳ ಸಂಚಾರದ ಮೇಲೆ ನಿಗಾವಹಿಸುವುದು, ವ್ಯಕ್ತಿಗಳ, ಗುಂಪಿನ ಗುರುತಿನ ಬಗ್ಗೆ ಪರಿಶೀಲಿಸಿ ಅವರು ಆ ಕ್ಷೇತ್ರದ ಮತದಾರರೇ ಅಥವಾ ಅಲ್ಲವೆ ಎಂಬುದನ್ನು ಪರಿಶೀಲನೆಗೆ ಒಳಪಡಿಸುವುದು.
ಉಳಿಯಕೂಡದು: ಮೇ 3 ರ ಸಾಯಂಕಾಲ 5 ಗಂಟೆಯ ನಂತರ ಆಯಾ ಕ್ಷೇತ್ರದ ಮತದಾರರಲ್ಲದವರು ಆ ಕ್ಷೇತ್ರದಲ್ಲಿ ಉಳಿಯಕೂಡದು.
ಭಾರತ ಚುನಾವಣಾ ಆಯೋಗದ ಈ ನಿರ್ದೇಶನವನ್ನು ಎಲ್ಲಾ ರಾಜಕೀಯ ಪಕ್ಷದವರೂ ಮತ್ತು ಸಾರ್ವಜನಿಕರು ಪಾಲಿಸಿ ಚುನಾವಣೆಯನ್ನು ಮುಕ್ತ  ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.