ತುಮಕೂರು

ಸಮಸ್ಯೆ ನಿವಾರಿಸಲು ಕಾಂಗ್ರೆಸ್ ಯತ್ನ

Published On :

ಗುಬ್ಬಿ:  ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸಲು ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಯತ್ನಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ತಿಳಿಸಿದರು.
ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಮತದಾರರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನನಗೆ ಉತ್ತಮ ಬೆಂಬಲ ನೀಡಿದ್ದಾರೆ. ಸೋಲು ಮತ್ತು ಗೆಲವು ರಾಜಕೀಯದಲ್ಲಿ ಸಾಮಾನ್ಯ. ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದರಿಂದ ಕ್ಷೇತ್ರದಲ್ಲಿದ್ದುಕೊಂಡು ಕ್ಷೇತ್ರದ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳುವುದರ ಜೊತೆಗೆ ಪಕ್ಷದ ಕಾರ್ಯಕರ್ತರ ಸಮಸ್ಯೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿ ಸಹಕರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಮಸ್ತ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಸಮಸ್ಯೆಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ಬಗೆ ಹರಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ನಾನು ಚುನಾವಣೆಯ ನಂತರ ಕ್ಷೇತ್ರ ಬಿಟ್ಟು ಹೋಗುತ್ತೇನೆ ಎಂಬ ವದಂತಿ ಸತ್ಯಕ್ಕೆ ದೂರವಾದದು ಎಂದರು.


ಗುಬ್ಬಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು
 ಟಿ   ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ -ಜೆಡಿಎಸ್- 58783.
 ಟಿ   ಜಿ.ಬೆಟ್ಟಸ್ವಾಮಿ -ಕೆಜೆಪಿ- 51539.
 ಟಿ   ಹೊನ್ನಗಿರಿಗೌಡ -ಕಾಂಗ್ರೆಸ್- 18548.
 ಟಿ   ಸಾಗರನಹಳ್ಳಿ ನಟರಾಜು -ಬಿಜೆಪಿ-  2396.
 ಟಿ   ಜಿ.ಕೆ.ಹುಚ್ಚೆಗೌಡ -ಬಿಎಸ್‌ಆರ್- 2233.
 ಟಿ   ಬೆಟ್ಟಸ್ವಾಮಿ -ಪಕ್ಷೇತರ ಅಭ್ಯರ್ಥಿ- 1798.
 ಟಿ   ಎಚ್.ಎಮ್. ಉಮೇಶ್- 767.
 ಟಿ   ಎ.ಆರ್. ಶ್ರೀನಿವಾಸಮೂರ್ತಿ -ಪಕ್ಷೇತರ ಅಭ್ಯರ್ಥಿ- 669.
  ಟಿ  ಶಿವಣ್ಣ ಮಾರನಹಳ್ಳಿ -ಬಿಎಸ್ಪಿ- 583.
  ಟಿ  ಲೋಕೇಶ್ ಪಿ.ಸಿ. -ಪಕ್ಷೇತರ- 569.
  ಟಿ  ಎಚ್.ಎಸ್.ಮಲ್ಲಿಕಾರ್ಜುನಯ್ಯ- ಪಕ್ಷೇತರ- 545.
  ಟಿ  ಗಿರಿಯಪ್ಪ ಎಚ್.ಎಚ್. -ಪಕ್ಷೇತರ- 483.
 13 ಸಿ.ಪಿ. ವಿಜಯಕುಮಾರ್- ಪಕ್ಷೇತರ- 426.
 14 ರಜನಿಕಾಮತ್ ಬಿ.ಆರ್. -ಪಕ್ಷೇತರ- 320.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.