ತುಮಕೂರು

ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ

Published On :

ಕ.ಪ್ರ. ವಾರ್ತೆ೤ ಅರಸೀಕೆರೆ೤ ಮೇ 4
ಭಾನುವಾರ ಮತದಾನ ಸುಗಮವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಬಿ.ಶಿವರಾಜ್ ತಿಳಿಸಿದ್ದಾರೆ. ಕ್ಷೇತ್ರದಾದ್ಯಂತ 268 ಮತಗಟ್ಟೆಗಳನ್ನು  ತೆರೆಯಲಾಗಿದ್ದು, ಈ ಪೈಕಿ 110 ಸಾಮಾನ್ಯ, 158 ಸೂಕ್ಷ್ಮ, ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಎ,ಬಿ,ಸಿ ದರ್ಜೆಯಲ್ಲಿ ಗುರುತಿಸಲಾಗಿದ್ದು ಎ. ದರ್ಜೆಯ ಮತಗಟ್ಟೆಗೆ ಭದ್ರತೆ ದೃಷ್ಟಿಯಿಂದ ಕೇಂದ್ರಿಯ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.
ಬಿ. ದರ್ಜೆಯ ಮತಗಟ್ಟೆಗೆ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಇನ್ನುಳಿದಂತೆ ಸಿ. ದರ್ಜೆ ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರಿಕರಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ 1194 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದು ಪಿ.ಆರ್.ಓ, ಎ.ಪಿ.ಆರ್.ಓ, ಮೊದಲ ಪೋಲಿಂಗ್ ಅಧಿಕಾರಿ ಹಾಗೂ ಎರಡನೇ ಪೋಲಿಂಗ್ ಅಧಿಕಾರಿ ಸೇರಿ ನಾಲ್ಕು ಮಂದಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಮತಯಂತ್ರಗಳು ಮತ್ತು ಚುನಾವಣಾ  ಸಿಬ್ಬಂದಿಯನ್ನು ಮತದಾನ ಕೇಂದ್ರಗಳಿಗೆ ಕೊಂಡೊಯ್ಯಲು 35 ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳನ್ನು ಪಡೆಯಲಾಗಿದೆ. ಜೊತೆಯಲ್ಲಿ 13 ಜೀಪ್, 2 ಮ್ಯಾಕ್ಸಿ ಕ್ಯಾಬ್ ಸೇವೆಗೆ ಲಭ್ಯವಿರುವುದಾಗಿ ತಿಳಿಸಿದರು.
ಬಿಗಿ ಭದ್ರತೆ ದೃಷ್ಟಿಯಿಂದ ಕೇಂದ್ರಿಯ ಮೀಸಲು ಪಡೆಯ ಜೊತೆಗೆ ಪೊಲೀಸ್ ಇಲಾಖೆ ನೆರವನ್ನು ಪಡೆಯಲಾಗಿದೆ. ಒಬ್ಬ ಡಿವೈಎಸ್‌ಪಿ ಇಬ್ಬರು ವೃತ್ತ ನಿರೀಕ್ಷಕರು, 8 ಎಸ್‌ಐ 12 ಎಎಸ್‌ಐ ಸೇರಿದಂತೆ ಗೃಹ ರಕ್ಷಕ ದಳ, ಪೊಲೀಸ್‌ಕಾನ್‌ಸ್ಟೇಬಲ್ ಒಳಗೊಂಡಂತೆ 350 ಮಂದಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.