ತುಮಕೂರು ಜಿಲ್ಲೆಯಲ್ಲಿ ಶೇ. 70.25 ಮತದಾನ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಶೇ. 70.25 ರಷ್ಟು ಮತದಾನವಾಗಿದೆ. ತುಮಕೂರು ನಗರದಲ್ಲಿ 60.57, ಚಿಕ್ಕನಾಯಕನಹಳ್ಳಿಯಲ್ಲಿ 70.52, ತಿಪಟೂರು 78.59, ತುರುವೇಕೆರೆ 63, ಕುಣಿಗಲ್ 80.2, ಶಿರಾ 78.64, ತುಮಕೂರು ಗ್ರಾಮಾಂತರ 70, ಕೊರಟಗೆರೆ 65.60, ಗುಬ್ಬಿ 71, ಪಾವಗಡ 61.20, ಮಧುಗಿರಿಯಲ್ಲಿ 60.52 ರಷ್ಟು ಮತದಾನವಾಗಿದೆ.
ಮತದಾನ ಮಾಡಿ ಆತ್ಮಹತ್ಯೆ
ಶಿರಾ: ಮತದಾನ ಮಾಡಿ ಬಂದು ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗೌಡಗೆರೆ ಹೋಬಳಿಯ ಬಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಣ್ಣ(40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಈತ ಬೆಳಗ್ಗೆ ಮತದಾನ ಮಾಡಿ ಬಂದ ನಂತರ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈತ ಮದ್ಯಪಾನ ಮಾಡಿದ್ದ ಎನ್ನಲಾಗಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ಸಾಹ, ನಿರುತ್ಸಾಹ ನಡುವೆ ಗುಬ್ಬಿ ಮತದಾನ
ಗುಬ್ಬಿ: ಗುಬ್ಬಿ ವಿಧಾನಸಭಾ ಕ್ಷೇತ್ರದ ಮತದಾನ ಯಾವುದೇ ಅಹಿತಕರ ಘಟನೆಗಳು ನಡೆಯದೆ, ಬಹುತೇಕ ಶಾಂತಯುತವಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿ ಕೆಲವು ಮತಗಟ್ಟೆಯಲ್ಲಿ ಚುರುಕು ಮತದಾನವಾದರೆ ಕೆಲವು ಕಡೆ ನೀರಸ ಪ್ರತಿಕ್ರಿಯೆ ಕಂಡುಬಂದಿತು. ತಾಲೂಕಿನ ಕಡಬ ಗ್ರಾಮದ 174 ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಸುಮಾರು 20 ನಿಮಿಷ ಮತದಾನ ಸ್ಥಗಿತಕೊಂಡಿತು. ಬೆಟ್ಟದಹಳ್ಳಿ ಮತ್ತು ತಾಳೇಕೊಪ್ಪ ಮತಗಟ್ಟೆಗಳಲ್ಲಿ ಮತಯಂತ್ರ ದೋಷದಿಂದಾಗಿ ಸುಮಾರು 15 ನಿಮಿಷಗಳ ಮತದಾನ ಸ್ಥಗಿತವಾಯಿತು.
ತಡೆದ ಮಳೆ: ಬೆಳಗ್ಗೆ 8ರಿಂದ 11 ಗಂಟೆವರೆಗೆ ಶೇ.30ರಷ್ಟು ಮತದಾನ ದಾಖಲಾಯಿತು. ಮದ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಚುರುಕುಗೊಂಡಿತು. ಮಧ್ಯಾಹ್ನದ ನಂತರ ಮಳೆ ಬಿದ್ದಿದ್ದರಿಂದ ಮತದಾರರು ಮನೆಗಳಿಂದ ಮತಗಟ್ಟೆಗೆ ಬರುವುದು ಕೆಲಕಾಲ ಸಾಧ್ಯವಾಗಲಿಲ್ಲ. ಕೆಲವು ಮತಗಟ್ಟೆಗಳಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಪೊಲೀಸರು ಗಲಭೆಯನ್ನು ತಿಳಿಗೊಳಿಸಿದರು.
ಸಂಜೆ ವೇಳೆಗೆ ಬಿರುಸಿನ ಮತದಾನ
ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೆ ಬಹುತೇಕ ಶಾಂತಿಯುತ ಮತದಾನವಾಯಿತು. ಭಾನುವಾರ ಬೆಳಿಗ್ಗೆ ಪ್ರಾರಂಭದಲ್ಲಿ ಮಂದಗತಿಯಲ್ಲಿ ಮತದಾನ ಸಾಗಿದರೂ ಕೂಡ ಮಧ್ಯಾಹ್ನದ ವೇಳೆಗೆ ಬಿರುಸಿನಿಂದ ಕೂಡಿತ್ತು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಗಳಲ್ಲಿ ಸಂಜೆ ವೇಳೆಗೆ ಬಿರುಸಿನ ಮತದಾನ ನಡೆದು ಯುವಕರು, ಮಹಿಳೆಯರು ಹಾಗೂ ವಯೋವೃದ್ಧರು ಸಾಲು ಸಾಲಾಗಿ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸುವ ದೃಶ್ಯ ಕಂಡು ಬಂತು. ಚುನಾವಣಾ ಆಯೋಗದ ಕಟ್ಟು ನಿಟ್ಟಿನ ನೀತಿ ಸಂಹಿತೆ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿ ಬಲಗೊಳಿಸಲಾಗಿತ್ತು. ಒಟ್ಟಿನಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಸುಮಾರು ಶೇ.70 ಮತದಾನವಾಗಿರುವುದಾಗಿ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

