ತುರುವೇಕೆರೆ ಶೇ. 80 ರಷ್ಟು ಮತದಾನ
ಕ.ಪ್ರ.ವಾರ್ತೆ ತುರುವೇಕೆರೆ ಮೇ 5
ವಿಧಾನಸಭಾ ಚುನಾವಣೆಗೆ ನಡೆದ ಚುನಾವಣೆಗೆ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ ನಡೆದಿದೆ. ಶೇಕಡಾ 80 ರಷ್ಟು ಮತದಾನವಾಗಿರುವ ಸಾಧ್ಯತೆ ಇದೆ.
ಕ್ಷೇತ್ರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಾಲೂಕಿನ ಬೆಂಡೇಕೆರೆಯಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಶಾಸಕ ಎಂ.ಟಿ.ಕೃಷ್ಣಪ್ಪ ಅಂಚಿಹಳ್ಳಿಯಲ್ಲಿ, ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಅಂಕಲಕೊಪ್ಪದಲ್ಲಿ, ರಾಜ್ಯ ಕೆಜೆಪಿ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್, ಬಿಎಸ್ಆರ್ ಅಭ್ಯರ್ಥಿ ಎಂ.ಆರ್.ರಾಜಶೇಖರ್ ತಮ್ಮ ಸ್ವಂತ ಗ್ರಾಮವಾದ ಮುನಿಯೂರಿನಲ್ಲಿ, ಕಾಂಗ್ರೆಸ್ ಮುಖಂಡ ಹಾಗೂ ಚಲನಚಿತ್ರ ನಿರ್ಮಾಪಕ ಕೆ.ಮಂಜು ಪಟ್ಟಣದ ತಾಲೂಕು ಪಂಚಾಯ್ತಿಯ ಮತಕಟ್ಟೆಯಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ಕೆ.ಸೋಮಣ್ಣ ಬ್ಯಾಲಹಳ್ಳಿಯಲ್ಲಿ, ಪಕ್ಷೇತರ ಅಭ್ಯರ್ಥಿ ಎಂ.ಸಿ. ಪ್ರಕಾಶ್ ಇಡಗೂರಿನಲ್ಲಿ, ಪಕ್ಷೇತರ ಅಭ್ಯರ್ಥಿ ಎಚ್.ಮಹೇಶ್ ಪಟ್ಟಣದಲ್ಲಿ ಮತ ಚಲಾಯಿಸಿದರು. ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಮಾಯಸಂದ್ರದ ಸೊರವನಹಳ್ಳಿ ಮತಕಟ್ಟೆಯಲ್ಲಿ ಮತ ಚಲಾಯಿಸಿದರು.
ಮಹಿಳೆಯರು ಹೆಚ್ಚು: ಕ್ಷೇತ್ರದಲ್ಲಿ ಕೆಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಬಹು ಮತಕಟ್ಟೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಮತ ಚಲಾಯಿಸಲು ಆಗಮಿಸಿದುದು ಕಂಡು ಬಂತು. ಗಾಂಧಿಗ್ರಾಮದಲ್ಲಿ ಸುಮಾರು 90 ರ ವಯೋವಾನದ ನಂಜಮ್ಮಳನ್ನು ಆಕೆಯ ಮಗ ರಾಮೇಗೌಡ ಮತಕಟ್ಟೆಗೆ ಕರೆದುಕೊಂಡು ಬಂದು ಮತಚಲಾಯಿಸಿದರು. ಬೆಂಡೇಕೆರೆಯಲ್ಲಿ ಮೊದಲನೇ ಮತದಾನ ಮಾಡುವ ಅವಕಾಶ ಪಡೆದ ನಮ್ರತಾ ಹಾಗೂ ನಂದಿನಿ ಎಂಬ ಸಹೋದರಿಯರು ಬಹಳ ಖುಷಿಯಿಂದ ಮತಕಟ್ಟೆಗೆ ಬಂದು ಮತ ಚಲಾಯಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ ತಮ್ಮ ಗೆಲವು ಖಚಿತ ಎಂದು ಅಭಿಪ್ರಾಯ ಪಟ್ಟರು. ಕೆಜಿ ಪಿ ಅಭ್ಯರ್ಥಿ ಮಸಾಲಾ ಜಯರಾಂ ಸಹ ತಮ್ಮ ಕಾರ್ಯಕರ್ತರ ಸಹಕಾರದಿಂದ ತಮ್ಮ ಗೆಲವು ಸಾಧ್ಯವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷೇತರ ಅಭ್ಯರ್ಥಿ ಹೆಚ್.ಮಹೇಶ್ ಸಹ ತಮ್ಮ ಗೆಲವು ನಿಶ್ಚಿತ ಎಂದರು.
ಕಂಡು ಬರಲಿಲ್ಲ: ಕ್ಷೇತ್ರದಲ್ಲಿ ಎಲ್ಲೂ ಶಾಮಿಯಾನವಾಗಲೀ, ಕುಡುಕರ ಹಾವಳಿಯಾಗಲೀ ಕಂಡುಬರಲಿಲ್ಲ. ಈ ಚುನಾವಣೆಯಲ್ಲಿ ಮದ್ಯದ ಸರಬಾರಾಜು ಸಾಧ್ಯವಾಗದ್ದರಿಂದ ಶಾತಿಯುತವಾದ ಮತ ಚಲಾವಣೆಗೆ ಅವಕಾಶವಾಯಿತು ಎಂಬುದು ನಿರ್ವಿವಾದ. ಅಬಕಾರಿ ನಿರೀಕ್ಷಕ ಕೆ.ಟಿ.ವಿಜಯಕುಮಾರ್ ಹಾಗೂ ಎಸೈ ಮಧುಸೂಧನ್ ಅವರ ಸಿಬ್ಬಂದಿಯ ಪ್ರಯತ್ನದಿಂದಾಗಿ ಮದ್ಯ ಸರಬರಾಜು ಸಾಧ್ಯವಾಗಿರಲಿಲ್ಲ. ಸಂಪಿಗೆಯಲ್ಲಿ ಮಹಿಳೆಯರು ಬಾರಿ ಸಂಖ್ಯೆಯಲ್ಲಿ ಮತಕಟ್ಟೆ ಬಳಿ ಇದ್ದು ಮತದಾನ ಮಾಡಲು ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

