ತುಮಕೂರು

ಪಾವಗಡ: ಶೇ.73.76 ಮತದಾನ

Published On :

ಪಾವಗಡ: ಚುನಾವಣೆಲ್ಲಿ ಶಾಂತ ರೀತಿಯಲ್ಲಿ ಶೇ.73.76 ಮತದಾನವಾಗಿದೆ. ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಪ್ರಾರಂಭವಾಗಿ ಆರಂಭದಲ್ಲಿ ಮಂದಗತಿಯಲ್ಲಿ ಮತದಾನ ನಡೆದು 11ಗಂಟೆ ಆಗುತ್ತಿದ್ದಂತೆ ಮತದಾನದ ಬಿಸಿ ತಾಲೂಕಿನಾದ್ಯಂತ ಬಿರಿಸಿನಿಂದ ಸಾಗಿತು.  ಸಂಜೆ 4.30ಕ್ಕೆ ಮಿಂಚು, ಗುಡುಗು ಮಳೆ ಗಾಳಿ ಏಕ ಕಾಲದಲ್ಲಿ ಆರಂಭವಾದ ಪ್ರಯುಕ್ತ ಪಾವಗಡ ಪಟ್ಟಣ ಸೇರಿದಂತೆ ಕಸಬಾ ವ್ಯಾಪ್ತಿಯ ಸುತ್ತಮುತ್ತ ಹಳ್ಳಿಗಳು ಹಾಗೂ ನಿಡಗಲ್ ವ್ಯಾಪ್ತಿಯ ಗುಜ್ಜನಡು, ದವಟಬೆಟ್ಟ, ಬ್ಯಾಡನೂರು, ಕನ್ನಮೇಡಿ ಅರಸೀಕೆರೆ ಸಿ.ಕೆ.ಪುರ ದೇವಲಕೆರೆ, ಮುಗಾದಳಬೆಟ್ಟ ಮುಂತಾದ ಗ್ರಾಮಗಳಲ್ಲಿ ಕೊನೆ ಗಳಿಗೆಯಲ್ಲಿ ಮತದಾನ ವಿಫಲವಾಯಿತು. ತಾಲೂಕಿನಲ್ಲಿ ಪುರುಷರು 95,157,ಹಾಗೂ ಮಹಿಳೆಯರು 90,964 ಮತದಾರರಿದ್ದಾರೆ.  ಒಟ್ಟು 1,86,121ಮತದಾರರಿದ್ದು,ಈ ಪೈಕಿ 74,706 ಪುರುಷರು, ಹಾಗೂ  69,971 ಮಹಿಳೆಯರು  ಸೇರಿದಂತೆ ಒಟ್ಟು 1,44,672 ಮಂದಿ ಮತದಾನ ಮಾಡಿದ್ದಾರೆ. ತಾಲೂಕಿನ ಎಲ್ಲಾ ಕಡೆ ಬೀಗಿ ಪೊಲೀಸ್ ಬಂದೋಬಸ್ತು ಇದ್ದ ಕಾರಣ ಅಹಿತರ ಘಟನೆಗಳಿಗೆ ಅವಕಾಶವಿಲ್ಲದೆ ಶಾಂತಿ ರೀತಿಯ ಮತದಾನ ನಡೆಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.