ತುಮಕೂರು

ಹುಳಿಯಾರಿನಲ್ಲಿ ಶೇ.75.36 ರಷ್ಟು ಮತದಾನ

Published On :

ಹುಳಿಯಾರು: ಚಿ.ನಾ.ಹಳ್ಳಿ ವಿಧಾನಸಭಾ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆದಿದ್ದು, ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಒಟ್ಟು ಶೇ.81.16ರಷ್ಟು ಹಾಗೂ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಬಿಂಬಿತವಾಗಿರುವ ಹುಳಿಯಾರಿನಲ್ಲಿ ಒಟ್ಟು ಶೇ.75.36 ರಷ್ಟು ಮತದಾನವಾಗಿದೆ.
 ಹುಳಿಯಾರು ಪಟ್ಟಣದಲ್ಲಿ ಒಟ್ಟು  13 ಮತಗಟ್ಟೆಗಳನ್ನು ಎಂಪಿಎಸ್ ಶಾಲೆಯಲ್ಲಿ 9 ಮತಕೇಂದ್ರಗಳನ್ನು, ಉರ್ದು ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು, ಸೋಮಜ್ಜನ ಪಾಳ್ಯ ಹಾಗೂ ಹುಳಿಯಾರು-ಕೆಂಕೆರೆ ಪ್ರೌಢಶಾಲೆಯಲ್ಲಿ ತಲಾ ಒಂದೊಂದು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
 ಬೆಳಗಿನ ತಂಪಿನ ವಾತಾವರಣದಲ್ಲಿ ಚುರುಕಾಗಿದ್ದ  ಮತದಾನ ಬಿಸಿಲೇರಿಕೆ ನಂತರ ಸ್ವಲ್ಪ ಕುಗ್ಗಿದರೂ ಸಹ ಮಧಾಹ್ನದ ನಂತರ ಬಂದ ತುಂತುರು ಸೊನೆ ಮಳೆಯ ತಂಪಿನಿಂದಾಗಿ ಮತ್ತೆ ಮತದಾರರು ಮತಗಟ್ಟೆಗಳಿಗೆ ಧಾವಿಸಲಾರಂಭಿಸುವ ಮೂಲಕ ಮತ್ತೆ ಚುರುಕುಗೊಂಡ ಮತದಾನ ನಡೆಯಿತು.


 ಹುಳಿಯಾರಿನ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ ವಿವರ


 ಮತಗಟ್ಟೆ 1    ಪುರುಷರು 185    ಮಳೆಯರು 176    ಒಟ್ಟು 361    ಶೇ.68.76
 ಮತಗಟ್ಟೆ 2    ಪುರುಷರು 241    ಮಳೆಯರು 198    ಒಟ್ಟು 439    ಶೇ. 68.27
 ಮತಗಟ್ಟೆ 3     ಪುರುಷರು 264    ಮಳೆಯರು 245     ಒಟ್ಟು 509    ಶೇ. 71.29
 ಮತಗಟ್ಟೆ 4     ಪುರುಷರು 172    ಮಳೆಯರು 190    ಒಟ್ಟು 362     ಶೇ.  75.89
 ಮತಗಟ್ಟೆ 5    ಪುರುಷರು 406    ಮಳೆಯರು 408     ಒಟ್ಟು 814       ಶೇ.71.65
 ಮತಗಟ್ಟೆ 6     ಪುರುಷರು  226    ಮಳೆಯರು 236     ಒಟ್ಟು 462      ಶೇ.69.79
 ಮತಗಟ್ಟೆ 7     ಪುರುಷರು 266    ಮಳೆಯರು 270    ಒಟ್ಟು 536    ಶೇ.82.21
 ಮತಗಟ್ಟೆ 8     ಪುರುಷರು 310    ಮಳೆಯರು 332    ಒಟ್ಟು 642    ಶೇ.73.62
 ಮತಗಟ್ಟೆ 9     ಪುರುಷರು 437    ಮಳೆಯರು 402     ಒಟ್ಟು 839      ಶೇ. 75.93
 ಮತಗಟ್ಟೆ 10     ಪುರುಷರು 271    ಮಳೆಯರು 286     ಒಟ್ಟು 557      ಶೇ.73.87
 ಮತಗಟ್ಟೆ 11     ಪುರುಷರು 233     ಮಳೆಯರು 269     ಒಟ್ಟು 502      ಶೇ. 78.68
 ಮತಗಟ್ಟೆ 12     ಪುರುಷರು 344    ಮಳೆಯರು 311     ಒಟ್ಟು 655      ಶೇ.88.16
 ಮತಗಟ್ಟೆ 13     ಪುರುಷರು 498    ಮಳೆಯರು 451     ಒಟ್ಟು 949      ಶೇ.81.67


ಹೋಬಳಿ ವ್ಯಾಪ್ತಿಯ ಹುಳಿಯಾರು, ಕೆಂಕೆರೆ, ಯಳನಡು, ಕೋರಗೆರೆ, ತಿರುಮಲಾಪುರ, ದೊಡ್ಡಬಿದರೆ, ಬರಕನಹಾಲ್, ದಸೂಡಿ, ಹೊಯ್ಸಲಕಟ್ಟೆ, ಗಾಣಧಾಳು ಗ್ರಾ.ಪಂ.ಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಲ್ಲಿ ಮತದಾರರು  ತಮ್ಮ ಹಕ್ಕು ಚಲಾಯಿಸಿದ್ದು ಕೆಂಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಶೇ.82.22ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.