ಮುನ್ನಡೆಸಿದವರನ್ನೇ ಕೈ ಬಿಟ್ಟರು
ಕ.ಪ್ರ.ವಾರ್ತೆ ತುಮಕೂರು ಮೇ 8
ಕೆಪಿಸಿಸಿ ಚುಕ್ಕಾಣಿ ಹಿಡಿದು ಪಕ್ಷವನ್ನು ಮುನ್ನಡೆಸಿದ್ದ ಡಾ. ಜಿ. ಪರಮೇಶ್ವರ್ ಅವರೇ ಸೋತಿದ್ದಲ್ಲದೆ ತಮ್ಮ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ನ 3 ಮಂದಿ ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿದೆ.
ಕೊರಟಗೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಪರಮೇಶ್ವರ್ ಅವರು ಜೆಡಿಎಸ್ ಅಭ್ಯರ್ಥಿ ಸುಧಾಕರ್ಲಾಲ್ ವಿರುದ್ಧ 18 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.
ಆರಂಭದಿಂದಲೂ ಪರಮೇಶ್ವರ್ ಅವರು ತೀವ್ರ ಹಿನ್ನೆಡೆಯನ್ನೇ ಅನುಭವಿಸಿದ್ದರು. ಒಂದೇ ಒಂದು ರೌಂಡ್ನಲ್ಲೂ ಅವರು ಮುನ್ನಡೆ ಸಾಧಿಸುವಲ್ಲಿ ವಿಫಲರಾದರು. ಇನ್ನು ಪರಮೇಶ್ವರ್ ಕಥೆ ಇದಾದರೂ ತಮ್ಮ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ನ 3 ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಳ್ಳುವುದರ ಮೂಲಕ ಕಳಪೆ ಸಾಧನೆ ಮಾಡಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಲಚವಾಡಿ ನಾಗರಾಜ್ ಅವರು ಕೇವಲ 8599 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಇದರಲ್ಲಿ 8570 ಇವಿಎಂ ಮತ ಬಿದ್ದರೆ ಅಂಚೆ ಮೂಲಕ 29 ಮತ ಬಿದ್ದಿದೆ. ಕಳೆದ ಬಾರಿ ಕಾಂಗ್ರೆಸ್ ಈಗಿನದಕ್ಕಿಂತ ಉತ್ತಮ ಸಾಧನೆ ಮಾಡಿತ್ತು.
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಸಿದ್ದ ಗೀತಾ ರಾಜಣ್ಣ ಅವರು ಸಹ ಠೇವಣಿ ಕಳೆದುಕೊಂಡಿದ್ದಾರೆ. ಗೀತಾ ರಾಜಣ್ಣ ಅವರು ಪಡೆದಿರುವುದು ಕೇವಲ 7513 ಮತಗಳನ್ನು. ಇದರಲ್ಲಿ 7482 ಮತಗಳು ಇವಿಎಂ ಮತ ಯಂತ್ರದಿಂದ ಬಂದರೆ 31 ಅಂಚೆ ಮತಗಳು.
ಹಾಗೆಯೇ ಚಿಕ್ಕನಾಯಕನಹಳ್ಳಿಯಲ್ಲೂ ಸಹ ಕಾಂಗ್ರೆಸ್ ನ ಅಭ್ಯರ್ಥಿ ಸತೀಶ್ ಸಾಸಲು ಠೇವಣಿ ಕಳೆದುಕೊಂಡಿದ್ದಾರೆ. ಅವರು ಪಡೆದಿರುವುದು ಕೇವಲ 10344 ಮತಗಳನ್ನು ಮಾತ್ರ. ಇದರಲ್ಲಿ 10338 ಮತಗಳು ಇವಿಎಂ ನಿಂದ ಬಂದರೆ 6 ಅಂಚೆ ಮತಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

