ಎಂಟಿಬಿ ನಾಗರಾಜ್ಗೆ ಸಚಿವ ಸ್ಥಾನ: ಆಗ್ರಹ
ಕ.ಪ್ರ.ವಾರ್ತೆ ಸೂಲಿಬೆಲೆ ಮೇ 10
ನೂತನ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ಜಿಲ್ಲಾವಾರು ಪ್ರಾಧಾನ್ಯತೆ ಆಧಾರದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಸೂಲಿಬೆಲೆ ಕಾಂಗ್ರೆಸ್ ಮುಖಂಡರು ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.
ಸೂಲಿಬೆಲೆಯಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಶಿವಣ್ಣ, ಜನರ ಕಷ್ಟು, ಸುಖಗಳಿಗೆ ಸ್ಪಂದಿಸುವಂತ ಮನೋಭಾವವಿರುವ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಯುವ ಮುಖಂಡ ಸುಗಟೂರು ರಮೇಶ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾವಾರು ಪ್ರಾಧಾನ್ಯತೆ ಆಧಾರದ ಮೇಲೆ ಎರಡು ಬಾರಿ ಶಾಸಕರಾಗಿರುವ ಎಂಟಿಬಿ ನಾಗರಾಜ್ ಸಚಿವ ಸ್ಥಾನಕ್ಕೆ ಅರ್ಹರಾಗಿದ್ದು, ಜಿಲ್ಲಾವಾರು ಆಧಾರದ ಮೇಲೆ ಅವರನ್ನು ಪರಿಗಣಿಸಬೇಕು. ಹೊಸಕೋಟೆ ಬಿಜೆಪಿ ಭದ್ರಕೋಟಿಯನ್ನು ಭೇದಿಸಿ ಕಾಂಗ್ರೆಸ್ ಕೋಟಿಯನ್ನಾಗಿಸಿದ ಇವರ ಸಂಘಟನೆಯನ್ನು ಪಕ್ಷದ ವರಿಷ್ಠರು ಅರಿತು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಪಂ ಸದಸ್ಯ ಎಸ್.ಕೆ ರಾಘವೇಂದ್ರ, ಎಸ್ಟಿ ಘಟಕ ಅಧ್ಯಕ್ಷ ವೆಂಕಟೇಶ್ ದಲಿತ ಮುಖಂಡ ಮುನಿನಾರಾಯಣಪ್ಪ, ತರಕಾರಿ ಮುನಿಕದಿರಪ್ಪ ಮಾತನಾಡಿ, ದಲಿತ ಸಮುದಾಯವಲ್ಲದೇ ಎಲ್ಲ ವರ್ಗದವರಿಗೆ ಹೊಂದುವಂತ ಜ್ಯಾತ್ಯತೀತ ಮನೋಭಾವದ ಎಂಟಿಬಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಚನ್ನಪ್ಪ, ಮರುವೆ ಕೃಷ್ಣಪ್ಪ, ಜೆಸಿಬಿ ಲಕ್ಷ್ಮಣ್, ಬುಲೆಟ್ ಮುನಿರಾಜ್, ಗ್ರಾಪಂ ಸದಸ್ಯ ಮುನಿರಾಜ್, ರವಿ, ಪುಟ್ಟಸ್ವಾಮಪ್ಪ, ದುರ್ಗೇಶ್, ಚಾಂದ್ ಪಾಷ, ಶಫೀವುಲ್ಲಾ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

