ಸಿದ್ದು ಸಿಎಂಗಿರಿಗೆ ವಿರೋಧ ಸಲ್ಲ
ತುಮಕೂರು: ಅಹಿಂದ ಚಳವಳಿ ಮುಖಂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವುದಕ್ಕೆ ಕೆಲವರು ದಲಿತ ಸಂಘಟನೆ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಾರ್ಹ ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಚೇಳೂರು ವೆಂಕಟೇಶ್ ಹಾಗೂ ಜಿಲ್ಲಾಧ್ಯಕ್ಷ ಎಂ.ವಿ. ಕೃಷ್ಣಪ್ಪ ತಿಳಿಸಿದ್ದಾರೆ. ಬೆಳಗಾವಿ ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಒಳಮೀಸಲಾತಿ ಹೋರಾಟಗಾರರಿಗೆ ಪೊಲೀಸರು ಹಿಗ್ಗಾಮುಗ್ಗಾ ಬಡಿದಾಗ ದಲಿತಪರ ದ್ವನಿ ಎತ್ತಿದ ಮೊದಲ ವ್ಯಕ್ತಿ ಸಿದ್ದರಾಮಯ್ಯ ಎಂಬುದನ್ನು ಯಾರೂ ಮರೆಯುವಂತಿಲ್ಲ. ಆದರೆ ನಮ್ಮ ಕರಳುಬಳ್ಳಿಗಳಾದ ದಲಿತ ಶಾಸಕರು ಧ್ವನಿ ಎತ್ತಲಿಲ್ಲ. ಪ್ರಗತಿಪರ ಸಿದ್ದರಾಮಯ್ಯನವರಿಗಿಂತ ದಲಿತರ ಪರ ವ್ಯಕ್ತಿ ಬೇಕೆ? ದಲಿತ ವಿರೋಧಿಗಳು ದಲಿತರೇ ಆಗಿದ್ದರೂ ವಿರೋಧಿಸಬೇಕು. ಆದ್ದರಿಂದ ದಲಿತ ಪರ ವ್ಯಕ್ತಿಗಳನ್ನು ಟೀಕಿಸುವುದು ಅನಾಗರಿಕತೆಯಾಗುತ್ತದೆ ಎಂದಿದ್ದಾರೆ.
'ನನ್ನದು ಪ್ರವಾಹಎದುರು 'ಹನಿ' ಹೋರಾಟ'
ತುಮಕೂರು: ಪ್ರವಾಹದ ಮುಂದೆ ಹನಿ ನೀರಾವರಿ ಹೋರಾಟ ಮಾಡಿದಂತಾಯಿತು ಎಂದು ತುಮಕೂರು ಗ್ರಾಮಾಂತರ ಪರಾಜಿತ ಅಭ್ಯರ್ಥಿ ಎಚ್. ನಿಂಗಪ್ಪ ತಮ್ಮ ಸೋಲಿನ ಕುರಿತು ವ್ಯಾಖ್ಯಾನಿಸಿದರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಬ್ಬರೂ ಹಣವನ್ನು ಪ್ರವಾಹದಂತೆ ಖರ್ಚು ಮಾಡಿದರು. ತಮ್ಮದು ಹನಿ ನೀರಾವರಿ ರೀತಿ ಖರ್ಚು. ಇತಿಮಿತಿಗೊಳಪಟ್ಟಿದ್ದು. ಹೀಗಾಗಿ ಒಳ್ಳೆಯತನ ಹಣ ಎಂಬ ಪ್ರವಾಹದ ಮುಂದೆ ಕೊಚ್ಚಿ ಹೋಯಿತು ಎಂದು ತಮ್ಮ ಸೋಲಿನ ಕುರಿತು ವಿಶ್ಲೇಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

