ದಾಖಲೆ ಪರಿಶೀಲಿಸಿ, ಶಾಲೆಗೆ ಸೇರಿಸಿ: ಬಿಇಓ
ತುಮಕೂರು: ಶಾಲಾ ದಾಖಲೆ ಪರಿಶೀಲಿಸಿ, ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಬಿ.ಎಸ್. ಕುಮುದಮ್ಮ ಪೋಷಕರಿಗೆ ಕರೆ ನೀಡಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿದ್ದು, 2013-14 ನೇ ಸಾಲಿನಲ್ಲಿ ಮಕ್ಕಳನ್ನು ಯಾವುದೇ ಶಾಲೆಗೆ ದಾಖಲಿಸುವ ಮುನ್ನ ಆ ಶಾಲೆಯಲ್ಲಿ ಅನಮತಿ ಪಡೆಯಲಾದ ತರಗತಿಗಳು, ಮಾಧ್ಯಮಗಳ ಬಗ್ಗೆ ಶಾಲಾ ಆಡಳಿತ ಮಂಡಳಿಯಿಂದ ದಾಖಲೆಗಳನ್ನು ಪರಿಶೀಲಿಸಿ, ನಂತರ ಶಾಲೆಗೆ ಸೇರಿಸುವಂತೆ ಕರೆ ನೀಡಿದ್ದಾರೆ. ಅನಧಿಕೃತ ಶಾಲೆ, ಅನಧಿಕೃತ ತರಗತಿಗಳಿಗೆ ದಾಖಲಿಸಿದಲ್ಲಿ ಅದಕ್ಕೆ ಬಿಇಓ ಕಚೇರಿ ಹೊಣೆಯಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಆಡಳಿತ ಮಂಡಳಿಯವರು ಶಾಲೆಯ ಮುಖ್ಯ ದ್ವಾರದಲ್ಲಿ ಶಾಲೆಗೆ ಅನುಮತಿಸಲಾದ ತರಗತಿ, ಪ್ರತಿ ತರಗತಿಯ ಮಾಧ್ಯಮ, ಪಡೆದ ಮಾನ್ಯತೆಗಳ ಪ್ರತಿ, ತರಗತಿಯ ಶುಲ್ಕದ ವಿವರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಪ್ರಕಟಿಸುವುದು. ಡೊನೇಷನ್ ವಸೂಲಿಗೆ ಅವಕಾಶವಿಲ್ಲ ಎಂದು ಎಲ್ಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿದೆ.
ಪಠ್ಯ ಪುಸ್ತಕ ವಿತರಣೆ
ತುಮಕೂರು: 2013-14 ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರಾಟ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲು ತುಮಕೂರು ಶೈಕ್ಷಣಿಕ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾರಾಟ ಮಳಿಗೆಯನ್ನು ಈಗಾಗಲೇ ತೆರೆಯಲಾಗಿದೆ ಎಂದು ಡಿಡಿಪಿಓ ತಿಳಿಸಿದ್ದಾರೆ. ಈಗಾಗಲೇ ಪಠ್ಯ ಪುಸ್ತಕಗಳು ಸರಬರಾಜಾಗಿದ್ದು, ಪ್ರಸ್ತುತ ಸರಬರಾಜಾಗಿರುವ ಪಠ್ಯ ಪುಸ್ತಕಗಳನ್ನು ಖಾಸಗಿ ಅನುದಾನ ರಹಿತ ಶಾಲೆಗಳಿಗೆ ವಿತರಿಲಾಗುತ್ತಿದೆ. ಆದ್ದರಿಂದ ಈಗಾಗಲೇ ಖಾಸಗಿ ಅನುದಾನರಹಿತ ಶಾಲೆಗಳವರು ಬೇಡಿಕೆ ಸಲ್ಲಿಸಿರುವಂತೆ , ಪ್ರಸ್ತುತ ಪಠ್ಯ ಪುಸ್ತಕಗಳ ಮೊತ್ತಕ್ಕೆ ಬ್ಯಾಂಕ್ ಹುಂಡಿಯನ್ನು ಪಡೆದು ಮಾರಾಟ ಮಳಿಗೆಯಲ್ಲಿ ಪಠ್ಯಪುಸ್ತಕಗಳನ್ನು ಖರೀದಿಸಲು ತಿಳಿಸಿದೆ. ಮಾಹಿತಿಗೆ ಸಂಬಂಧಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದಾಗಿದೆ.
ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ತುಮಕೂರು: ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಗ್ರಾಮಗಳಲ್ಲಿ ಗೌರವ ಧನ ಆಧಾರಿತ 5 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯ ತಾತ್ಕಾಲಿಕ ಹುದ್ದೆಗಳು ಖಾಲಿ ಇದೆ. ರಾಯಾಪುರ, ಕೆರೆಬಂಡಿಪಾಳ್ಯ, ಹೊನಸಿಗೆರೆ, ಚಿಕ್ಕಾಪುರ, ಅಗಳಗುಂಟೆ ಗ್ರಾಮಗಳಲ್ಲಿ ಹುದ್ದೆಗಳು ಖಾಲಿ ಇದ್ದು, ತಾತ್ಕಾಲಿಕ ಹುದ್ದೆಗೆ ಅರ್ಜಿಯನ್ನು ಜೂನ್ 10 ರವರೆಗೆ ಶಿಶು ಅಭಿವೃದ್ದಿ ಯೋಜನಾ ಕಚೇರಿ, ಬಿ.ಎಚ್.ರಸ್ತೆ, ಇಂಡಸ್ಚ್ರಿಯಲ್ ಏರಿಯಾ, ತುಮಕೂರು ಗ್ರಾಮಾಂತರ, ಇಲ್ಲಿ ಸಲ್ಲಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

