ತುಮಕೂರು

ಸಾರ್ವಜನಿಕರ ಸಮ್ಮುಖದಲ್ಲಿ ಭೂಸೇನಾ ನಿಗಮದ ಅಭಿಯಂತರರಿಗೆ ಶಾಸಕರ ತರಾಟೆ

Published On :

ಕ.ಪ್ರ. ವಾರ್ತೆ ಕುಣಿಗಲ್ ಮೇ 19
ಮುಖ್ಯರಸ್ತೆಯಿಂದ ಚರಂಡಿಯನ್ನು ಮೂರು ಅಡಿ ಮೇಲೆ ನಿರ್ಮಿಸಿದ್ದೀರಿ, ನಿಮ್ಮ ಲೆಕ್ಕಾಚಾರದಲ್ಲಿ ಕೊಳಚೆ ನೀರು ರೋಡಿನಿಂದ ಮೇಲೆ ಹರಿದು, ತನ್ನಿಂದತಾನೆ, ಚರಂಡಿಗೆ ಬಂದು ಬೀಳುತ್ತದೇಯೆನ್ರಿ ಎಂದು ಶಾಸಕ ಡಿ.ನಾಗರಾಜಯ್ಯ, ಸಾರ್ವಜನಿಕರ ಸಮ್ಮುಖದಲ್ಲಿ, ಭೂಸೇನಾ ನಿಗಮದ ಅಭಿಯಂತರನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆ ಶಾಸಕರ ನಿಧಿಯಡಿಯಲ್ಲಿ 1.16 ಕೋಟಿ ರು. ವೆಚ್ಚದಲ್ಲಿ ಪಟ್ಟಣದಲ್ಲಿ ಹಾದುಹೋಗಿದ್ದ  ಹಳೇ ರಾಹೆ 48ರ ಬದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಭೂಸೇನಾ ನಿಗಮದವರು ಕೈಗೊಂಡಿದ್ದು, ಕಾಮಗಾರಿ ಕಳಪೆಯಿಂದ ಕೂಡಿರುವ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕಾಮಗಾರಿ ಕುಂಟುತ್ತಾ ಸಾಗಿತ್ತು. ಹಿಂದಿನ ಶಾಸಕರು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಭೂಸೇನಾ ನಿಗಮದವರು ಕಾಮಗಾರಿಯನ್ನು ಕೆಲ ಖಾಸಗಿ ಗುತ್ತಿಗೆದಾರರಿಗೆ ನೀಡಿ ಅತುರಾತುರವಾಗಿ ಪೂರ್ಣಗೊಳಿಸಲೆತ್ನಿಸಿ, ಸಾರ್ವಜನಿಕರ ಪ್ರತಿಭಟನೆಯಿಂದ ನೆನೆಗುದಿಗೆ ಬಿದ್ದಿತ್ತು.
ಪರಿಶೀಲನೆ: ನೂತನ ಶಾಸಕ ಡಿ.ನಾಗರಾಜಯ್ಯನವರಿಗೆ ಸದರಿ ಕಾಮಗಾರಿ ಬಗ್ಗೆ ಸಾರ್ವಜನಿಕರು ಗಮನ ಸಳೆದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ, ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಶಾಸಕರು, ಚರಂಡಿ ಮೇಲೆ ಹಾಕಲಾಗಿರುವ ಸಿಮೆಂಟ್ ಹೊದಿಕೆ ಕಳಪೆ ಕಾಮಗಾರಿ ಪ್ರಯುಕ್ತ ಒಡೆದುಹೋಗಿ, ಕಳಪೆ ಕಾಮಗಾರಿಗೆ ಜೀವಂತ ಸಾಕ್ಷಿಯಾಗಿತ್ತು. ಮುಖ್ಯರಸ್ತೆಯ ಒಂದು ಬದಿಯಲ್ಲಿ ರಸ್ತೆಯಿಂದ ಮೂರು ಅಡಿಗೂ ಎತ್ತರದಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದು, ರಸ್ತೆಯಲ್ಲಿ ಕೊಳಚೆ ನೀರು ಚರಂಡಿಗೆ ಹೇಗೆ ಹರಿದು ಬರುತ್ತದೆ, ನೀರು ಮೇಲಿನಿಂದ ಕೆಳಗೆ ಹರಿಯತ್ತೊ ಅಥವಾ ನಿಮ್ಮ ಲೆಕ್ಕದಲ್ಲಿ ಕೆಳಗಿನಿಂದ ಮೇಲು ಹರಿಯುತ್ತದೆಯೇ ಎಂದು ಭೂಸೇನಾ ನಿಗಮದ ಜೆಇ ರಾಜಶೇಖರ್‌ಗೆ ಕಳಪೆ ಕಾಮಗಾರಿ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಕಾಮಗಾರಿ ಪೂರ್ಣ ಕಳಪೆಯಿಂದ ಕೂಡಿದ್ದು,  ವೈಜ್ಞಾನಿಕವಾಗಿ ಪುನಃ ನಿರ್ಮಿಸುವಂತೆ ಸೂಚಿಸಿ, ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರವಹಿಸಿ. ನಿಮ್ಮ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳಬೇಕಾದ್ದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎಲ್.ಹರೀಶ್, ಮುಖಂಡರಾದ ಚಿಕ್ಕಣ್ಣ, ನಾಗರಾಜ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.