ತುಮಕೂರು

ಸಿಡಿಲಿಗೆ ಕೊಬ್ಬರಿ ಗೋದಾಮು ಸಹಿತ ಜಾನುವಾರುಗಳ ದಹನ

Published On :

ಕ.ಪ್ರ. ವಾರ್ತೆ ತುರುವೇಕೆರೆ ಮೇ 19
ಮಳೆಯೊಂದಿಗೆ ಬಂದ ಬಂದ ಭಾರಿ ಸಿಡಿಲಿಗೆ ಕೊಬ್ಬರಿ ಗೋಡೌನ್ ಹಾಗೂ ನಾಲ್ಕೈದು ಜಾನುವಾರುಗಳು ಸಜೀವವಾಗಿ ದಹನಗೊಂಡ ಪ್ರಕರಣ ಸಮೀಪದ ಆಲದಹಳ್ಳಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ತಾಲೂಕಿನಲ್ಲಿ ಮಳೆ ಪ್ರಾರಂಭಗೊಂಡು ರೈತರು ಸಂತಸಪಡುತ್ತಿರುವ ಸಂದರ್ಭದಲ್ಲೇ ಆಲದಹಳ್ಳಿಯ ರೈತ ಪುಟ್ಟೇಗೌಡ ಎಂಬುವವರ ತೋಟದ ಮನೆಗೆ ಸಿಡಿಲು ಬಡಿದಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕೊಬ್ಬರಿ ಸಂಗ್ರಹಣೆ ಮಾಡಲಾಗಿದ್ದ ಗೋಡೌನ್‌ಗೆ ಸಿಡಿಲು ಬಡಿದ ಪರಿಣಾಮ ಗೋಡೌನ್ ಹತ್ತಿ ಉರಿದಿದೆ. ಪಕ್ಕದ ಶೆಡ್‌ನಲ್ಲಿದ್ದ 2 ಸೀಮೆಹಸುಗಳು, 2 ನಾಟಿ ಹಸುಗಳು 1 ಸೀಮೆ ಹಸುವಿನ ಕರು ಸಹ ಸ್ಥಳದಲ್ಲೇ ದಹನಗೊಂಡವು. ಸುಮಾರು 4 ಲಕ್ಷ ರು.ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಜೆ.ಪಿ. ಮಂಜೇಗೌಡ, ಸಿಪಿಐ ಆಂಜನಕುಮಾರ್, ಎಸ್ಸೈಅಜರುದ್ದೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಣ್ಣಿನ ದಿಣ್ಣೆ ಕುಸಿದು ಯುವಕ ಸಾವು
ಶಿರಾ: ತಾಲೂಕಿನ ತಡಕಲೂರು ಹಳ್ಳದಲ್ಲಿ ಮರಳು ತುಂಬುವ ಸಂದರ್ಭದಲ್ಲಿ ಮಣ್ಣಿನ ದಿಣ್ಣೆ ಕುಸಿದು ಯುವಕನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೃತಪಟ್ಟ ಯುವಕ ತಡಕಲೂರು ಗ್ರಾಮದ ಗುಜ್ಜಾರಪ್ಪನವರ ಮಗ ಬಸವರಾಜು (20) ಎಂದು ಗುರುತಿಸಿದ್ದು ಭಾನುವಾರ ಮುಂಜಾನೆ ಮಂಜುನಾಥ್ ಅವರಿಗೆ ಸೇರಿದ ಟ್ರ್ಯಾಕ್ಟರ್‌ಗೆ ಮರಳು ತುಂಬಲು ಕರೆದುಕೊಂಡು ಹೋಗಿದ್ದರು ಎಂದು  ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಡಿಲು ಬಡಿದು ಮಹಿಳೆ ಸಾವು
ಶಿರಾ: ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಮಹಿಳೆಯೊಬ್ಬರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.  ಮೃತಪಟ್ಟ ಮಹಿಳೆ ಮೀನಾಕ್ಷಿ (26) ಎಂದು ತಿಳಿದು ಬಂದಿದ್ದು ಕಳೆದ ರಾತ್ರಿ ಮನೆಗೆ ತೆರಳುತ್ತಿದ್ದಾಗ ಮಳೆ ಬಂದ ಕಾರಣ ಆಶ್ರಯ ಪಡೆಯಲು ಮರದ ಕೆಳಗೆ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.