ತುಮಕೂರು

ಆತ್ಮಬಲವರ್ಧನೆಗೆ ಮಾರ್ಗಸೂಚಿ ಮುಖ್ಯ: ಶಿವಲಿಂಗಯ್ಯ

Published On :

ಕ.ಪ್ರ.ವಾರ್ತೆ ತಿಪಟೂರು ಮೇ 21
ಆತ್ಮ ಕಾರ್ಯಕ್ರಮಗಳ ಬಲವರ್ಧನೆಗೆ ವಿಸ್ತರಣಾ ಪದ್ಧತಿಯಲ್ಲಿ ಮಾರ್ಪಡಿಸುವ ಸುಧಾರಣಾ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ದಕ್ಷಿಣದ ಮುಖ್ಯಸ್ಥರಾದ ಡಾ. ವೈ.ಎನ್. ಶಿವಲಿಂಗಯ್ಯನವರು ತಿಳಿಸಿದರು.
 ತಾಲೂಕಿನ ಬಿದರಮ್ಮನಗುಡ್ಡ ಕಾವಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಕೃಷಿ ನಿರ್ವಹಣೆ ವಿಸ್ತರಣಾ ತರಬೇತಿ ಸಂಸ್ಥೆ, ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ವತಿಯಿಂದ ಆತ್ಮ ಯೋಜನೆ ಕುರಿತ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಆತ್ಮ ಯೋಜನೆಯ ಉದ್ದೇಶಗಳು, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮಮಟ್ಟದ ಕಾರ್ಯನೀತಿಗಳು, ರೈತರ ಯಶೋಗಾಥೆಗಳನ್ನು ದಾಖಲಿಸುವ ಬಗ್ಗೆ ವಿವರಣೆ ನೀಡಿದರು.
ಮತ್ತೋರ್ವ ಅಧಿಕಾರಿ ಡಾ.ಜಿ. ವೆಂಕಟೇಶ್ ಪ್ರಸಾದ್ ಆತ್ಮ ಕ್ಯಾಪಿಟೋರಿಯಾ ಚಟುವಟಿಕೆಗಳು ಮತ್ತು ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಪರಿಚಯಿಸಿದರು.
 ಕೃಷಿ ವಿಜ್ಞಾನ ಕೇಂದ್ರ ವಿ.ಸಿ. ಫಾರಂ, ಮಂಡ್ಯದ ಕೃಷಿ ವಿಸ್ತರಣೆ ವಿಷಯ ತಜ್ಞೆ ಡಾ. ಸಿ.ಎಂ. ಸವಿತಾ ರೈತ ಕ್ಷೇತ್ರ ಪಾಠಶಾಲೆಯ ಕುರಿತು ಪ್ರಾಯೋಗಿಕವಾಗಿ ಚರ್ಚಿಸಿದರು.
ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಂಯೋಜಕ ಡಾ.ಜಿ.ಎಂ.ಸುಜಿತ್ ಆಹಾರ ಬೆಳೆಗಳಲ್ಲಿ ಸುಧಾರಿತ  ಬೇಸಾಯ ಕ್ರಮಗಳು ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು ಹಾಗೂ ರೈತ ಮಟ್ಟದಲ್ಲಿ ಅಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕೆಂದು ಸೂಚಿಸಿದರು.
ಕೇಂದ್ರದ ಕೃಷಿ ವಿಸ್ತರಣೆ ವಿಷಯ ತಜ್ಞ ಎಂ.ಎಚ್. ಶಂಕರ ಉತ್ಪನ್ನ ಆಸಕ್ತರ ಗುಂಪುಗಳ ರಚನೆಯ ಬಗ್ಗೆ ವಿವರಿಸಿದರು.
ಸಾಧಕ- ಬಾಧಕ: ಯಶಸ್ವಿ ಗುಂಪುಗಳಲ್ಲಿ ಒಂದಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲನಹಳ್ಳಿ ಗ್ರಾಮದ ಹಾರಕ ಬೆಳೆಗಾರರ ಸಂಘದ ಸದಸ್ಯರಾದ ರಘು ತಮ್ಮ ಸಂಘದ ಧ್ಯೆಯೋದ್ದೇಶಗಳು, ರಚನೆ, ಸಾಧಕ-ಬಾಧಕಗಳನ್ನು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಹತ್ತು ತಾಲೂಕಿನ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರು, ಸಹಾಯಕ ಅಧಿಕಾರಿಗಳು ಸೇರಿ ಸುಮಾರು 40ಕ್ಕೂ ಹೆಚ್ಚು ಜನ ಸೇರಿದಂತೆ ಕೇಂದ್ರದ ವಿಜ್ಞಾನಿಗಳಾದ ನಾಗಪ್ಪ ದೇಸಾಯಿ ಹಾಗೂ ಕೃಷಿ ವಿವಿಯ ನಿವೃತ್ತ ಪ್ರಾಧ್ಯಾಪಕ ಜಿ.ಎನ್. ಶಿವರಾಮರೆಡ್ಡಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.