ಹಳೇ ವಸ್ತು ನಾಶ ಪಡಿಸುವಾಗ ಜಿಲೆಟಿನ್ ಕಡ್ಡಿ ಸ್ಫೋಟ; ಆತಂಕ
ಕ.ಪ್ರ.ವಾರ್ತೆ ಮಧುಗಿರಿ ಮೇ 21
ಮಧುಗಿರಿಯ 5ನೇ ತ್ವರಿತ ವಿಲೇವಾರಿ ನ್ಯಾಯಲಯದ ಆವರಣದಲ್ಲಿ ಹಳೇ ವಸ್ತುಗಳನ್ನು ನಾಶ ಪಡಿಸುವಾಗ ಜಿಲೆಟಿನ್ ಕಡ್ಡಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಗಂಗನರಸಯ್ಯ ಎಂಬಾತನಿಗೆ ತೀವ್ರ ಗಾಯವಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ನ್ಯಾಯಾಧೀಶ ಪಿ.ನಾರಾಯಣ ಆಚಾರ್ಯ ಅವರ ಕಣ್ಣಿನ ಕೆಳ ಭಾಗಕ್ಕೆ ಗಾಜು ಸಿಡಿದು ಗಾಯವಾಗಿರುವ ಘಟನೆ ಮಂಗಳವಾರ ಸಂಜೆ 5.30ರ ಸುಮಾರಿನಲ್ಲಿ ನಡೆದಿದೆ.
ಕಚೇರಿ ಸಿಬ್ಬಂದಿ ಗಂಗನರಸಯ್ಯ ಎಂಬಾತ ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಪಾಸ್ಟಟ್ರ್ಯಾಕ್ ಕೋರ್ಟ್ ಆವರಣದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ನಿಷ್ಕ್ರಿಯಗೊಳಿಸಿದ ಜಿಲೆಟಿನ್ ಕಡ್ಡಿ, ದೊಣ್ಣೆ ಸೇರಿದಂತೆ ಹಳೇ ವಸ್ತುಗಳನ್ನು ಜಿಲ್ಲಾ ನ್ಯಾಯಾಧೀಶರ ಆದೇಶದ ಮೇರೆಗೆ ಪಾಸ್ಟ್ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶ ಪಿ.ನಾರಾಯಣ ಆಚಾರ್ಯ ಅವರ ಸಮ್ಮುಖದಲ್ಲಿ ಬೆಂಕಿ ಹಚ್ಚಿ ನಾಶ ಪಡಿಸುತ್ತಿದ್ದಾಗ ದಿಢೀರನೇ ಬಾರಿ ವಸ್ತುವೊಂದು ಸಿಡಿದು ಗಂಗನರಸಯ್ಯ ಅವರ ಮುಖ, ಎದೆ ಹಾಗೂ ದೇಹಕ್ಕೆ ಬಡಿಯಿತು. ತೀವ್ರ ಗಾಯವಾಗಿ ಅವರು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಜಿಲೆಟಿನ್ ಸಿಡಿತದಿಂದ ಆಗಿರಬಹುದು ಎಂದು ಮೂಲಗಳು ತಿಳಿಸಿವೆ. ಈ ವಸ್ತುಗಳನ್ನು ಸುಡುವಾಗ ವೀಕ್ಷಿಸುತ್ತಿದ್ದ ನ್ಯಾಯಾಧೀಶ ಪಿ.ನಾರಾಯಣ ಆಚಾರ್ಯ ಅವರ ಕಣ್ಣಿನ ಕೆಳ ಭಾಗಕ್ಕೆ ಗಾಜು ಸಿಡಿದು ಗಾಯವಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸಿಪಿಐ ಎ.ಎಸ್.ವಿಶ್ವಾಸ್, ಪಿಎಸೈ ನಿರ್ಮಲಾ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠರ ಭೇಟಿ, ಪರಿಶೀಲನೆ
ಮಂಗಳವಾರ ಸಂಜೆ ಇಲ್ಲಿ ಜಿಲೆಟಿನ್ ಕಡ್ಡಿ ಸಿಡಿದ ಘಟನೆ ಕುರಿತಂತೆ ಪರಿಶೀಲಿಸಲು ಜಿಲ್ಲಾ ಪೊಲೀಸ್ ವರಿಷ್ಠ ರಮಣಗುಪ್ತಾ ಸ್ಥಳಕ್ಕೆ ರಾತ್ರಿ ಭೇಟಿ ನೀಡಿದರು. ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು ಈ ಘಟನೆ ಕುರಿತು ಸಮಗ್ರವಾಗಿ ಪರಿಶೀಲಿಸಲಾಗುವುದು. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದರು. ಶ್ವಾನಪಡೆಯನ್ನು ಸ್ಥಳಕ್ಕೆ ಕರೆತಂದು ಪರೀಕ್ಷಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

