ತುಮಕೂರು

ಗೂಳೂರಲ್ಲಿ ನೇತ್ರ ಉಚಿತ ಶಿಬಿರ

Published On :

ಕ.ಪ್ರ. ವಾರ್ತೆ ತುಮಕೂರು ಮೇ 22
ಸಮೀಪದ ಗೂಳೂರಿನ ವಿವೇಕಾನಂದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧಾನ್ ಫೌಂಡೇಷನ್ ಸಂಸ್ಥೆಯಿಂದ ರಚನೆಯಾದ ಅರುಣೋದಯ ಮಹಿಳಾ ಕಳಂಜಿಯಂ ಪರಸ್ಪರ ಒಕ್ಕೂಟದ ವತಿಯಿಂದ ನೇತ್ರ ಉಚಿತ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ತಾಪಂ ಮಾಜಿ ಅಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ಶಿವಕುಮಾರ್ ಮಾತನಾಡಿ, ಈ ಕಾರ್ಯಕ್ರಮಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಧಾನ್ ಫೌಂಡೇಶನ್ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಧಾನ್ ಫೌಂಡೇಶನ್‌ನ ಪ್ರಾದೇಶಿಕ ಸಂಯೋಜಕ ಎಚ್.ಸಿ. ಗೌಡ ಅವರು, ಕಣ್ಣು ಮಾನವನ ಅತಿ ಶ್ರೇಷ್ಟ ಅಂಗವಾಗಿದ್ದು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಶಂಕರ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿ ಮಂಜುಳಾ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಶುಗರ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರು.
300 ಜನರ ನೋಂದಣೀಕರಣ ನಡೆದ ಈ ಶಿಬಿರದಿಂದ 100 ಜನ ವಿವಿಧ ರೀತಿಯ ಕಣ್ಣಿನ ಕಾಯಿಲೆಗಳುಳ್ಳ ಅರ್ಹರಿಗೆ ಆಪರೇಷನ್ ಮಾಡಲು ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪುಟ್ಟರಾಜು ಸ್ವಾಗತಿಸಿ ಶಶಿಧರ್ ನಿರೂಪಿಸಿ ಲಕ್ಷ್ಮೀ ನಾರಾಯಣ್ ವಂದಿಸಿದರು.

ಕಾರು ಡಿಕ್ಕಿ: ಮಹಿಳೆ ಸಾವು
ಶಿರಾ: ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿರಾ ಹೊರ ವಲಯದ ಕಾಮತ್ ಹೊಟೇಲ್ ಸಮೀಪದ ರಸ್ತೆಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಎಮ್ಮೆರಹಳ್ಳಿ ತಾಂಡದ ಲಕ್ಷ್ಮೀಬಾಯಿ (31) ಎಂದು ತಿಳಿದು ಬಂದಿದ್ದು ಇವರು ನೀರು ತರಲೆಂದು ರಸ್ತೆ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.