ಕಂದಾಯ ವಸೂಲಾತಿಗೆ ಡಿಮ್ಯಾಂಡ್ ರಿಜಿಸ್ಟರ್ ಇಟ್ಟಿಲ್ವೇನ್ರಿ?
ಕುಣಿಗಲ್: ಪುರಸಭೆ ಕಂದಾಯ ವಸೂಲಾತಿಗೆ ಡಿಮ್ಯಾಂಡ್ ರಿಜಿಸ್ಟರ್ ಇಟ್ಟಿಲ್ವೇನ್ರಿ, ಇನ್ನಾವ ರೀತಿ ಪುರಸಭೆಯ ಬರುವ ಆದಾಯ ನಿರ್ವಹಣೆ ಮಾಡುತ್ತೀರಿ, ಇದೇನ್ರಿ ನಿಮ್ಮ ಕಾರ್ಯವೈಖರಿ ಎಂದು ಶಾಸಕ ಡಿ.ನಾಗರಾಜಯ್ಯ, ಕಂದಾಯ ನಿರೀಕ್ಷಕ ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಗುರುವಾರ, ಪುರಸಭೆ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶಾಸಕ ಡಿ.ನಾಗರಾಜಯ್ಯ, ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದ ನಂತರ, ಕಂದಾಯ ವಿಭಾಗದ ಪರಿಶೀಲನೆಗೆ ಮುಂದಾದರು. ಕಂದಾಯ ನಿರೀಕ್ಷಕ (ಆರ್ಐ)ರಮೇಶ್ ಕುರಿತು, ವಾರ್ಷಿಕ ತೆರಿಗೆ ವಸೂಲಾತಿ ಎಷ್ಟು, ಎಷ್ಟು ವಸೂಲು ಮಾಡುತ್ತಿದ್ದೀರಾ ಎಂದಾಗ, ಒಟ್ಟಾರೆ 6405 ಖಾತೆದಾರರಿದ್ದು, ವಾರ್ಷಿಕ 38 ಲಕ್ಷರು. ತೆರಿಗೆ ಗುರಿಇದೆ, ಎಂಟುವರೆ ಲಕ್ಷ ಬಾಕಿ ಇದೆ ಎಂದರು.
ಕಂದಾಯ ನಿರೀಕ್ಷಕರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಡಿಮ್ಯಾಂಡ್ ರಿಜಿಸ್ಟರ್ ಇಟ್ಟಿದ್ದೀರಾ, ಕಳೆದ ವರ್ಷದ ಬಾಕಿ ಎಷ್ಟು, ಅದರ ಹಿಂದಿನ ವರ್ಷದ ಬಾಕಿ ಎಷ್ಟು, ಎಸ್ಎಎಸ್ ಬಂದಾಗಿನಿಂದಲೂ ಕಳೆದ ಎಂಟತ್ತು ವರ್ಷಗಳ ಅವಧಿಯಲ್ಲಿ ಬಹುತೇಕ ಖಾತೆದಾರರು, ತೆರಿಗೆ ಪಾವತಿಸಿಲ್ಲ. ಹೀಗಿರುವಾಗ, ಬಾಕಿ ಮೊತ್ತ ಕಡಿಮೆ ತೋರಿಸುತ್ತಿರುವುದು ನೋಡಿದರೆ ನಿಮ್ಮ ಕಾರ್ಯ ವೈಖರಿ ಏನೆಂದು ತಿಳಿಯುತ್ತದೆ. ಡಿಮ್ಯಾಂಡ್ ರಿಜಿಸ್ಟರ್ ಹಾಜರುಪಡಿಸುವಂತೆ ಸೂಚಿಸಿದಾಗ, ಆರ್ಐ ರಮೇಶ್ ತಡಬಡಾಯಿಸಿದರು.
ಬಾಕಿ ಇರುವ ತೆರಿಗೆಯ ಬಗ್ಗೆ ವಿವರ ನೀಡುವಂತೆ ಸೂಚಿಸಿದರು. ಸಂಬಂಧಪಟ್ಟ ಸಿಬ್ಬಂದಿ ಸಮರ್ಪಕವಾಗಿ ದಾಖಲೆ ಹಾಜರುಪಡಿಸಲು ವಿಫಲವಾದಾಗ, ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕರು, ಪುರಸಭೆಯ ತೆರಿಗೆ ದಾಖಲೆಗಳು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು, ಪುರಸಭೆಯ ಸಮಗ್ರ ಅಭಿವೃದ್ಧಿ ನಿಟ್ಟಿನಿಂದ ಒಳ್ಳೆಯ ಬೆಳವಣಿಗೆಯಲ್ಲಿ, ಇನ್ನೊಂದು ವಾರದೊಳಗೆ ಬಾಕಿ ಇರುವ ಕಂದಾಯತರಿಗೆ, ನೀರಿನ ತೆರಿಗೆಯ ಬಗ್ಗೆ ಸಮಗ್ರ ಮಾಹಿತಿ ಹಾಗೂ ವಸೂಲಾತಿ ವಿವರಗಳನ್ನು ಹಾಜರು ಪಡಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ವಿಭಾಗದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದ ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

