ತುಮಕೂರು

ರೋಗ ಬರುವುದಕ್ಕಿಂತ ಮುಂಚೆಯೇ ಜಾಗೃತಿ ವಹಿಸಿದಾಗ ಆರೋಗ್ಯ ಸಂವರ್ಧನೆ

Published On :

ಕ.ಪ್ರ.ವಾರ್ತೆ ತುಮಕೂರು ಮೇ 26
ರೋಗ ಬರುವುದಕ್ಕಿಂತ ಮುಂಚೆಯೇ ಜಾಗೃತಿ ವಹಿಸಿದಾಗ ಆರೋಗ್ಯ ಸಂವರ್ಧನೆ ಸಾಧ್ಯ ಎಂದು ವಾಸಂತಿ ಉಪ್ಪಾರ್ ತಿಳಿಸಿದರು.
ಅವರು ಬೆಳ್ಳಾವಿ ಹೋಬಳಿ ಅಗಳಗುಂಟೆ ಪಾಳ್ಯದಲ್ಲಿ ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಮತ್ತು ಸೋಶಿಯಲ್ ವರ್ಕ್ಸ್, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗ ತುಮಕೂರು ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಗ್ರಾಮಗಳಲ್ಲಿನ ಜನರು ರೋಗ ಬರುವುದಕ್ಕಿಂತ ಮುಂಚೆಯೇ ಜಾಗೃತಿ ವಹಿಸಿ ಆರೋಗ್ಯ ಸಂರಕ್ಷಿಸಿಕೊಳ್ಳಬೇಕು ಎಂದರು.
ಜಾಗತೀಕರಣದಿಂದ ಗ್ರಾಮಗಳು ಹಲವು ರೀತಿಯ ಸಮಸ್ಯೆಗಳಲ್ಲಿ ಬಳಲುತ್ತಿದೆ. ಇಂತಹವುಗಳನ್ನು ವ್ಯವಸ್ಥಿತವಾಗಿ ನಿಯಂತ್ರಿಸಬೇಕು. ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಗಮನ ವಹಿಸಿ ಉತ್ತಮ ಜೀವನ ಕೌಶಲ್ಯ ಅಳವಡಿಸಿಕೊಂಡು ಶಾಂತಿ ಜೀವನ ನಡೆಸಬೇಕೆಂದು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಮತ್ತೊಬ್ಬ ಮುಖ್ಯ ಅತಿಥಿ ರಮೇಶ್ ಮಾತನಾಡಿದರು. ಕಾರ್ಯಕ್ರದಮಲ್ಲಿ ವೈದ್ಯಾಧಿಕಾರಿ ಡಾ. ರಾಜಕುಮಾರ್, ಮಂಜುನಾಥಯ್ಯ, ಸುದರ್ಶನ್, ಬಿ.ಪಿ. ಶಿವಲಿಂಗಯ್ಯ, ಶಶಿಕಾಂತರಾವ್, ಶ್ವೇತಾ, ರೇಣುಕದೇವಿ, ನಯಾಜ್, ಶ್ರೀಧರ್, ಎಂ.ಎಲ್. ಶೃತಿ,  ತಿಪ್ಪೇಸ್ವಾಮಿ, ಮಮತ ಟಿ.ಎನ್, ಮಂಜುನಾಥ್, ವಾಸುದೇವಮೂರ್ತಿ ಮುಂತಾದವರು ಹಾಜರಿದ್ದರು. ಶಿಬಿರದಲ್ಲಿ 150 ರೋಗಿಗಳು ಭಾಗವಹಿಸಿದ್ದರು. ಸುವರ್ಣ ಪ್ರಾರ್ಥಿಸಿದರು.  ಮಮತ ಸ್ವಾಗತಿಸಿದರು. ತಿಪ್ಪೇಸ್ವಾಮಿ ವಂದಿಸಿದರು. ಶೃತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.