ತುಮಕೂರು

ಶಾಸಕರ ದುರಂಹಕಾರಿ ವರ್ತನೆ ಖಂಡಿಸಿ ಕುಮಾರಸ್ವಾಮಿ ಬಳಿಗೆ ನಿಯೋಗ

Published On :

ತುರುವೇಕೆರೆ: ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪ ಮಾಧ್ಯಮದವರ ಬಗ್ಗೆ ಲಘುವಾಗಿ ಮಾತನಾಡಿ ಪತ್ರಿಕಾ ಸ್ವಾತಂತ್ರಕ್ಕೆ ಧಕ್ಕೆ ತರುವಂತಹ ಮಾತು ಆಡಿರುವ ಕ್ರಮವನ್ನು ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.   ಚುನಾವಣೆಯಲ್ಲಿ ಗೆದ್ದ ಸಂಭ್ರಮದಲ್ಲಿರುವ ಶಾಸಕರು ಬಾಯಿಗೆ ಬಂದಂತೆ ಮಾಧ್ಯಮದವರನ್ನು ಮಾತನಾಡುತ್ತಿರುವುದು ಖಂಡನಾರ್ಹ. ಪತ್ರಿಕಾ ಮಾಧ್ಯಮದವರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕೆಜೆಪಿಯ ನಡುವೆ ನೇರ ಹಣಾಹಣಿ ಇದ್ದು ಎಲ್ಲಾ ಮಾಧ್ಯಮದವರು ಯಥಾವತ್ತಾಗಿ ಬಿಂಬಿಸಿದ್ದಾರೆ. ಆದರೆ ಶಾಸಕರು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅಸಂವಿಧಾನಿಕ ಪದಗಳನ್ನು ಬಳಸಿ ಅವಮಾನ ಮಾಡಿರುವುದು ಖಂಡನೀಯ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುರುವೇಕೆರೆ ಪ್ರಸಾದ್ ಉವರು ಹೇಳಿದ್ದಾರೆ.
ಎಚ್‌ಡಿಕೆ ಬಳಿಗೆ ನಿಯೋಗ: ಜೆಡಿಎಸ್‌ನ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪ ಸಾರ್ವಜನಿಕ ಸಭೆಯಲ್ಲಿ ಮಾಧ್ಯಮದವರ ಬಗ್ಗೆ ಆಡಿರುವ ಮಾತುಗಳ ಪ್ರತಿ ಸಹಿತ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಬಳಿ ನಿಯೋಗ ತೆರಳಿ ದೂರು ಸಲ್ಲಿಸಲು ನಿರ್ಧರಿಸಲಾಗಿದೆ. ಹಾಗೆಯೇ ಜೆಡಿಎಸ್‌ನ ವರಿಷ್ಠರಾದ ಎಚ್.ಡಿ.ದೇವೇಗೌಡರಿಗೂ ಖುದ್ದಾಗಿ ತೆರಳಿ ದೂರು ನೀಡಬೇಕು ಎಂದು ನಿರ್ಧರಿಸಲಾಗಿದೆ.

ವಾಸವಿ ಜಯಂತಿ
ತುಮಕೂರು: ತುಮಕೂರಿನ ಎಸ್‌ಎಸ್ ಪುರಂನಲ್ಲಿರುವ ವಾಸವಿ ಸಂಘದ ಆಶ್ರಯದಲ್ಲಿ ವಾಸವಿ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎನ್.ಎಸ್. ಜಯಕುಮಾರ್ ಉದ್ಘಾಟಿಸಿದರು. ಡಾ. ಚೈತನ್ಯವರ್ಧನ್, ಅರುಣ್‌ಕುಮಾರ್, ಶ್ರೀನಿವಾಸ್, ಸತೀಶ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.