ತುಮಕೂರು

ಪ್ರೊ. ಮರಿದೇವರು ಒಮ್ಮತದ ಆಯ್ಕೆ: ಸೋ.ಮು. ಭಾಸ್ಕರಾಚಾರ್

Published On :

ಕ.ಪ್ರ.ವಾರ್ತೆ   ತುಮಕೂರು   ಮೇ 28
ತುಮಕೂರು ಜಿಲ್ಲಾ 9 ನೇ ಕಸಾಪ ಸಮ್ಮೇಳನ ಚಿಕ್ಕನಾಯಕನಹಳ್ಳಿಯಲ್ಲಿ ಮುಂದಿನ ಜೂನ್ 28 ರಿಂದ 30 ರವರೆಗೆ ಏರ್ಪಾಟಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ. ಮು. ಭಾಸ್ಕರಾಚಾರ್ ತಿಳಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಸಾಪ ಸಮ್ಮೇಳನಾಧ್ಯಕ್ಷತೆ ಆಯ್ಕೆ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಖ್ಯಾತ ಕವಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರೇ ತಮ್ಮನ್ನು ಈ ಬಾರಿಯ ಜಿಲ್ಲಾ ಸಮ್ಮೇಳನಾಧ್ಯಕ್ಷತೆಗೆ ಆಯ್ಕೆ ಮಾಡುವುದು ಬೇಡ ಎಂದಿದ್ದರು. ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಒಪ್ಪಿಗೆ ಮೇರೆಗೆ ಹಿರಿಯರಾದ, ಸಾಹಿತಿಗಳೂ ಆದ 85 ರ ವಯೋವಾನದ ಪ್ರೊ.  ಸಿ.ಎಚ್. ಮರಿದೇವರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರೊ. ಮರಿದೇವರು ಸಾಹಿತಿಗಳಷ್ಟೇ ಅಲ್ಲ. ಶಿಕ್ಷಣ ತಜ್ಞರು, ರಾಜ್ಯ ಪ್ರಶಸ್ತಿ ಪುರಸ್ಕೃತರು. ಹೀಗಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಸ್ವಾಗತ ಸಮಿತಿ ಸೇರಿದಂತೆ 20 ಸಮಿತಿಗಳ ರಚನೆ, ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಹಾಗೂ ಶಾಸಕರ ಅಧ್ಯಕ್ಷತೆ, 3 ತಿಂಗಳ ಸಿದ್ದತೆ ಹಾಗೂ ತಾಲೂಕು ಕಸಾಪ ವತಿಯಿಂದ ತಾಲೂಕು ಸಂಚಲನ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸಮ್ಮೇಳನ ನೋಂದಣಿ ಶುಲ್ಕ 100 ರು. ಗಳಾಗಿದ್ದು, ಎಲ್ಲ ತಾಲೂಕು ಅಧ್ಯಕ್ಷರ ಬಳಿ ನೋಂದಣಿ ರಸೀತಿಗಳನ್ನು ತಲುಪಿಸಲಾಗುವುದು. ಜೂ. 20 ರಂದು ನೋಂದಣಿಗೆ ಕಡ್ಡಾಯ ಅಂತಿಮ ದಿನಾಂಕ. ಅನ್ಯಕಾರ್ಯನಿಮಿತ್ತ ರಜೆಗೆ ಹಾಜರಾತಿ ದಾಖಲೆಯನ್ನು ಜೂ. 20 ರೊಳಗೆ ನೋಂದಾಯಿಸಿಕೊಂಡವರಿಗೆ ಸಮ್ಮೇಳನದ ಸಮಾರೋಪ ನಂತರಅಂದರೆ ಜೂ. 30 ರ ಸಂಜೆ ನೀಡಲಾಗುವುದು. ಅದಕ್ಕಿಂತ ಮುಂಚೆ ಯಾವುದೇ ಒತ್ತಡಕ್ಕೆ ಒಳಗಾಗಿ ನೀಡುವುದಿಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಗೋಷ್ಠಿಯ ವಿವರಗಳು
1.ತುಮಕೂರು ಜಿಲ್ಲೆಯ ದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯ, ಜಿಲ್ಲೆಯ ದಲಿತ-ಬಂಡಾಯ ಸಾಹಿತ್ಯ. 2. ತುಮಕೂರು ಜಿಲ್ಲೆ ಕೃಷಿ ಕ್ಷೇತ್ರದ ಸವಾಲು, ಸಾದ್ಯತೆ. ಜಲ ಸಂರಕ್ಷಣೆಯಲ್ಲಿ ಜನಸಮೂಹದ ಪಾತ್ರ. 3. ತೆಂಗು ಉಪ ಉತ್ಪನ್ನಗಳು-ಮಾರುಕಟ್ಟೆ. ಚಿ.ನಾ.ಹಳ್ಳಿ ತಾಲೂಕು ಪರಿಚಯ. 4.ಸಾಹಿತ್ಯ ಪಂಥಗಳಿಗೆ ಜಿಲ್ಲೆಯ ಕೊಡುಗೆ. ಜಿಲ್ಲೆಯ ಸಾಹಿತ್ಯ ಮತ್ತು ಸ್ತ್ರೀ ಸಂವೇದನೆ. ಮುಖ್ಯವೇದಿಕೆಯಲ್ಲಿ ಕವಿಗೋಷ್ಠಿಯ ಅಧ್ಯಕ್ಷರೊಂದಿಗೆ ಸಂವಾದ. ಈ ಮೇಲಿನ ವಿಷಯಗಳು 3 ದಿನಗಳ ವಿಶೇಷ. ಇದೇ ಸಂದರ್ಧದಲ್ಲಿ ಸಮಾನಂತರ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಜೂ. 28 ರಂದು 1. ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಭಾಷಾಂತರದ ಪಾತ್ರ. 2. ಕವಿ-ಕಾವ್ಯ ವಿಮರ್ಶೆ. 29 ರಂದು1. ಚಲನಚಿತ್ರ, ಚಿತ್ರಕಥಾ ಸಾಹಿತ್ಯ. 2. ರಂಗಭೂಮಿಯಲ್ಲಿ ಸಾಂಪ್ರದಾಯಿಕ ಹಾಗೂ ಹವ್ಯಾಸಿ ಪ್ರಯೋಗಗಳು. 4. ಸುಸ್ಥಿರ ಕೃಷಿ. ಜಿಲ್ಲಾ ಗುಡಿ ಕೈಗಾರಿಕೆಗಳು. 5. ಸಾಮಾಜಿಕ ಬದಲಾವಣೆಯಲ್ಲಿ ಮಾಧ್ಯಮಗಳು. ಅಂಕಣ ಬರಹ. ವಸ್ತು, ಶರೀರ. 30 ರಂದು ಜಿಲ್ಲಾ ಪರಿಸರ ಸಂರಕ್ಷಣೆ. 2. ನಗರೀಕರಣ ಮತ್ತು ಸಂಸ್ಕೃತಿ. ಮಧ್ಯಾಹ್ನ 30 ರಂದು ಉದಯೋನ್ಮುಖ ಕವಿಗೋಷ್ಠಿ.
ಸುದ್ದಿಗೋಷ್ಠಿಯಲ್ಲಿ ಚಿ.ನಾ.ಹಳ್ಳಿ ಕಸಾಪ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಕಸಾಪ ಕಾರ್ಯದರ್ಶಿ ಸಣ್ಣಹೊನ್ನಯ್ಯ ಕಂಟಲಗೆರೆ, ಖಜಾಂಚಿ ರಾಕ್‌ಲೈನ್ ರವಿಕುಮಾರ್ ಇತರರು ಉಪಸ್ಥಿತರಿದ್ದರು.


ವಿಶೇಷ ಗೋಷ್ಠಿ
1. ಬದಲಾವಣೆಯ ಕಾಲಘಟ್ಟದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ
2. ಯುವಪೀಳಿಗೆ ಮತ್ತು ಸಾಗುತ್ತಿರುವ ಹಾದಿ.
3. ಜಿಲ್ಲೆಯ ನೈರ್ಮಲೀಕರಣ - ಸಾಧಕ, ಭಾದಕ
4. ಮಂಕುತಿಮ್ಮನ ಕಗ್ಗ-ವಿಶ್ಲೇಷಣೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.