ತುಮಕೂರು

ಜೂ.2 ರಂದು 51 ಜೋಡಿಗೆ ಸಾಮೂಹಿಕ ವಿವಾಹ

Published On :

ಕೊರಟಗೆರೆ: ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 7 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜೂ.2 ರಂದು 51 ಜೋಡಿಗಳ ಸಾಮೂಹಿಕ ಆದರ್ಶ ವಿವಾಹ ಹಾಗೂ ಜನ ಜಾಗೃತಿ ಭಾವೈಕ್ಯ ಸಮಾವೇಶ ಏರ್ಪಡಿಸಿರುವುದಾಗಿ ಶ್ರೀ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.
ಅವರು ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶ್ರೀ ಮಠದ 7ನೇ ವಾರ್ಷಿಕೋತ್ಸವದ ಅಂಗವಾಗಿ ಅಂದು ಶ್ರೀ ಜಗದ್ಗುರು ರೇಣುಕಾ ಚಾರ್ಯ, ಶ್ರೀ ಬಸವೇಶ್ವರರ
ಜಯಂತ್ಯುತ್ಸವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ 51 ಜೋಡಿ ಸಾಮೂಹಿಕ ಆದರ್ಶ ವಿವಾಹ ಮತ್ತು ಜನಜಾಗೃತಿ ಭಾವೈಕ್ಯ ಸಮಾವೇಶ ನಡೆಯಲಿದೆ.
ಯಡಿಯೂರು ಶ್ರೀ ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯಸ್ವಾಮಿಗಳು, ಚಿಕ್ಕತೊಟ್ಲುಕೆರೆ ಸುಕ್ಷೇತ್ರದ ಶ್ರೀ ಅಟಿವಿ ಶಿವಲಿಂಗಸ್ವಾಮಿಗಳು, ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಶ್ರೀ ಹನುಮಂತನಾಥಸ್ವಾಮಿ, ತಪಸಿಹಳ್ಳಿಯ ಶ್ರೀ ದಿವ್ಯಜ್ಞಾನಾನಂದಗಿರಿಸ್ವಾಮಿ, ಮಳಲಿಮಠದ ಶ್ರೀ ನಾಗಭೂಷಣ ಶಿವಾಚಾರ್ಯಸ್ವಾಮಿಗಳು, ತಂಗನಹಳ್ಳಿ ಅನ್ನಪೂರ್ಣೇಶ್ವರಿ ಕ್ಷೇತ್ರದ ಬಸವಾನಂದಸ್ವಾಮಿಗಳು, ತಗ್ಗಿಹಳ್ಳಿ ಶ್ರೀ ರಮಾನಂದಚೈತನ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಶಾಸಕ ಪಿ.ಆರ್. ಸುಧಾಕರಲಾಲ್ ಅಧ್ಯಕ್ಷತೆ ವಹಿಸಲಿದ್ದು ಕಾನೂನು ಹಾಗೂ ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಸಮಾರಂಭ ಉದ್ಘಾಟಿಸುವರು, ಶ್ರೀ ಕ್ಷೇತ್ರದ ವೀರಭದ್ರಶಿವಾಚಾರ್ಯ  ಸ್ವಾಮೀಜಿಗಳು ಪ್ರಾಸ್ತಾವಿಕ ಭಾಷಣ ಮಾಡಲಿದ್ದು 51 ಜೋಡಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆ ಅವರು ನೀಡಿರುವ ಮಾಂಗಲ್ಯಗಳನ್ನು ಸಂಸದ ಜಿ.ಎಸ್. ಬಸವರಾಜು ವಿತರಣೆ ಮಾಡುವರು.
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನೂತನ ವಧೂವರರಿಗೆ ವಸ್ತ್ರ ವಿತರಣೆ ಮಾಡುವರು. ಆಂಧ್ರಪ್ರದೇಶ ಸರ್ಕಾರದ ವಿಧಾನಪರಿಷತ್ ಸದಸ್ಯ ಗುಂಡುಮಾಲೆ ತಿಪ್ಪೇಸ್ವಾಮಿ ಮೂಗುತಿ ವಿತರಿಸುವರು.
ಮಾಜಿ ಸಚಿವ ವಿ. ಸೋಮಣ್ಣ ಗುರುನಿವಾಸ ಉದ್ಘಾಟಿಸುವರು, ಸಿ.ಚನ್ನಿಗಪ್ಪ ವಿದ್ಯಾರ್ಥಿ ನಿಲಯ ಶಂಕುಸ್ಥಾಪನೆ ಮಾಡುವರು ಎಂದ ಶ್ರೀಗಳು ಈ ಸಮಾರಂಭದಲ್ಲಿ  ಉತ್ತಮ ಸಮಾಜಸೇವೆ ಮಾಡುತ್ತಿರುವ ಗಣ್ಯ ಕೆಪಿಎಸ್ಸಿ ಸದಸ್ಯ ದಯಾಶಂಕರ್, ಆಡಿಟರ್ ಸದಾಶಿವಯ್ಯ, ಕುರಂಕೋಟೆ ಸರ್ವಮಂಗಳಮ್ಮ ಅವರನ್ನು ಸನ್ಮಾನಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.