ಅಧ್ಯಾತ್ಮದಿಂದ ಜೀವನದಲ್ಲಿ ಶಾಂತಿ ಸಾಧ್ಯ: ಅಭಿಮತ
ಹುಳಿಯಾರು: ಕ್ಷಣಿಕ ಸುಖಕ್ಕಾಗಿ ಭೌತಿಕ ವ್ಯಾಮೋಹಕ್ಕೆ ಒಳಗಾಗುತ್ತಾ ಜೀವನದಲ್ಲಿನ ಶಾಂತಿ,ನೆಮ್ಮದಿ ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ಮಾನವ ಬದುಕಿಗೆ ಅಧ್ಯಾತ್ಮದ ಅವಶ್ಯಕತೆಯಿದೆ ಎಂದು ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನಯ್ಯ ಹೇಳಿದರು.
ಹುಳಿಯಾರಿನ ಸನ್ಮಾರ್ಗ ಥಿಯೋಸಾಫಿಕಲ್ ಸೊಸೈಟಿಯಲ್ಲಿ ನಡೆದ 138ನೇ ವರ್ಷದ ಅಂತಾರಾಷ್ಟ್ರೀಯ ಸ್ಥಾಪನಾ ದಿನಾಚರಣೆಯ ಸಾರ್ವಜನಿಕ ಸಮಾವೇಶದಲ್ಲಿ ಸೇವೆಯು ನಿಜವಾದ ಅಧ್ಯಾತ್ಮ ಜೀವನದ ಸ್ಫೂರ್ತಿ ಎಂಬ ವಿಷಯ ಕುರಿತಂತೆ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸತ್ಯ, ಶುದ್ಧ, ಸಾತ್ವಿಕ ಬದುಕು ರೂಪಿಸಲು ಗುರುಗಳ ಮಾರ್ಗದರ್ಶನ ಅವಶ್ಯಕವಿದ್ದು, ಗುರುವಿನ ಆದೇಶ, ಮಾರ್ಗದರ್ಶನ ಪಾಲಿಸುತ್ತಾ ಪರಮಾತ್ಮನ ಕಾಣುವ ಕಾರ್ಯವಾಗಬೇಕಿದೆ ಎಂದರು.
ಪ್ರಕೃತಿಯ ನಿಯೋಜನೆಯಂತೆ ಮಾನವ ನಡೆಯುತ್ತಾ ಸಾಗಿದರೆ ಆತ್ಮ, ಪರಮಾತ್ಮನಲ್ಲಿ ಲೀನವಾಗುತ್ತದೆ. ಆದರೆ ಪ್ರಕೃತಿಗೆ ವಿರುದ್ಧವಾಗಿ ಸಾಗಿದಾಗ ಅಪಾಯ ಕಟ್ಟಿಟ್ಟಬುತ್ತಿ. ಪರಮಾತ್ಮ ಎಲ್ಲಿದ್ದಾನೆಂದು ಹುಡುಕುವುದು ಬೇಡ. ಪ್ರತಿಯೊಬ್ಬರಲ್ಲಿಯೂ ಆ ಶಕ್ತಿಯಿದ್ದು, ಉತ್ತಮ ಕಾರ್ಯಗಳನ್ನು ಮಾಡುತ್ತಾ, ನಿತ್ಯ ತಾವು ಮಾಡುವ ತಪ್ಪುಗಳನ್ನು ಲೆಕ್ಕ ಹಾಕಿ ಅವುಗಳನ್ನು ತಿದ್ದಿಕೊಂಡು ನಡೆಯಬೇಕಿದೆ ಎಂದು ಕಿವಿಮಾತು ಹೇಳಿದರು. ಸೊಸೈಟಿಯ ಅಧ್ಯಕ್ಷ ಎಚ್.ಬಿ. ಗೋಪಾಲಕೃಷ್ಣ ಮಾತನಾಡಿ, ಮನುಕುಲದ ಸೇವೆಯ ಸಂಕಲ್ಪ ಹೊತ್ತು ಸಾಗುತ್ತಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತುಂಗಕ್ಕೇರಲಿ ಎಂದು ಆಶಿಸಿದರು. ಸೇವಾ ವಿಭಾಗದ ಅಧ್ಯಕ್ಷ ಎಂ.ಆರ್. ಗೋಪಾಲ್, ರಾಮಯ್ಯ, ವಕೀಲ ಸತೀಶ್, ಗಂಗರಾಜು, ಈಶ್ವರಪ್ಪ ಇದ್ದರು. ಕಾರ್ಯದರ್ಶಿ ಮಹೇಶ್ವರಚಾರ್ ಸ್ವಾಗತಿಸಿದರು ಶಿಕ್ಷಕ ಜಗದೀಶ್ ನಿರೂಪಿಸಿದರು. ಬಸ ವರಾಜು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

