ತುಮಕೂರು

ಆಧುನಿಕ ಜೀವನ ಶೈಲಿಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ

Published On :

ಮಧುಗಿರಿ: ಇಂದಿನ ಆಧುನಿಕ ಜೀವ ಶೈಲಿಯಿಂದಾಗಿ ಮನುಷ್ಯನ  ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ರೋಟರಿ ಅಧ್ಯಕ್ಷ ಎಂ.ವೆಂಕಟರಾಮು ವಿಷಾದಿಸಿದರು.
ರೋಟರಿ ಮಧುಗಿರಿ ಹಾಗೂ ಶಂಕರ ಆಸ್ಪತ್ರೆ ಬೆಂಗಳೂರು,ಸ್ವಾತಂತ್ರ್ಯ ಹೋರಾಟಗಾರ ಪಿ.ಕೃಷ್ಣಸ್ವಾಮಿ ನಾಯಕ್ ಸೇವಾ ಸಂಸ್ಥೆ ಆಶ್ರಯದಲ್ಲಿ ತಾಲೂಕಿನ ಪುರವರ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ಮನುಷ್ಯನ ಬದುಕಿಗೆ ಕಣ್ಣು ಪ್ರಮುಖ ಇಂದ್ರಿಯ. ಕಣ್ಣಿನ ರಕ್ಷಣೆ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು. ಜೀವನ ಪದ್ಧತಿಯನ್ನು  ಆರೋಗ್ಯಕ್ಕೆ ತಕ್ಕಂತೆ ರೂಡಿಸಿಕೊಳ್ಳಬೇಕು. ಈ ಸುಂದರ ಪ್ರಪಂಚ ಕಂಡ ನಾವು ಏಲ್ಲೋ ಒಂದು ಕಡೆ ಒಮ್ಮೆಲೇ ಕಣ್ಣು ಕಳೆದುಕೊಂಡರೆ ಆ ನೋವು ಸಹಿಸಲಸಾಧ್ಯ. ಆದ ಕಾರಣ ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ಎಚ್ಚರ ವಹಿಸಿ ಇಂತಹ ಜನಪರ ಶಿಬಿರಗಳು ಯಾವ ಭಾಗದಲ್ಲೇ ನಡೆದರೂ ರೋಟರಿ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಶಿಬಿರದಲ್ಲಿ 160ಕ್ಕೂ ಅಧಿಕ ಮಂದಿ ನೇತ್ರ ಪರೀಕ್ಷೆಗೆ ಒಳಗಾಗಿ ಈ ಪೈಕಿ 52 ಜನರನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರು. ಶಿಬಿರದಲ್ಲಿ ರೋಟರಿ ಮಾಜಿ ಅಧ್ಯಕ್ಷೆ ಲತಾನಾರಾಯಣ್, ರಾಮಚಂದ್ರ ಇದ್ದರು.

ಮಧುಗಿರಿಯಲ್ಲಿ ಭಾರಿ ಮಳೆ
ಮಧುಗಿರಿ: ಮಧುಗಿರಿಯಲ್ಲಿ  ಶನಿವಾರ ರಾತ್ರಿ ಸುರಿದ ಧಾರಕಾರ  ಮಳೆಯಿಂದಾಗಿ ಏಲ್ಲೆಲ್ಲೂ ತಂಪೆರದಿದೆ. ಈ ಮಳೆ ಬಂದು ಜನತೆಗೆ  ಹರ್ಷ ತಂದಿದೆ. ಪಟ್ಟಣದ ಪುರಸಭೆ ವ್ಯಾಪ್ತಿಯ ಚರಂಡಿಗಳಲ್ಲಿ ಮಡು ಗಟ್ಟಿ ನಿಂತಿದ್ದ ಕೊಚ್ಚೆ ಕೊಚ್ಚಿ ಹೋಗಿ ವಾಸನೆ ಬೀರುತ್ತಿದ್ದ ಚರಂಡಿಗಳು ಸ್ವಲ್ಪ ಮಟ್ಟಿಗೆ  ಸ್ವಚ್ಛವಾಗಿ ಜನರು ನಿಟ್ಟುಸಿರುವ ಬಿಡುವಂತಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.