ತುಮಕೂರು

ನ್ಯಾಯಬೆಲೆ ಅಂಗಡಿ ನ್ಯಾಯ ರೀತಿ ನಡೆಯಲಿ

Published On :

ಪಾವಗಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತರೆ ಬಡ ಕುಟುಂಬಗಳು ಪಡಿತರ ಚೀಟಿಗಳಿಂದ ವಂಚಿತರಾಗಿದ್ದು ಅರ್ಹರಿಗೆ ಸಮರ್ಪಕ ಹಂಚಿಕೆ ಮಾಡುವಲ್ಲಿ ನ್ಯಾಯಬೆಲೆ ಅಂಗಡಿ ಉಸ್ತುವಾರಿ ಅಧಿಕಾರಿಗಳು ಆಸಕ್ತಿ ವಹಿಸುವಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ಕರೆ ನೀಡಿದರು.
ತಾ.ಆಡಳಿತ ವತಿಯಿಂದ ತಿರುಮಣಿ ಗ್ರಾಮದ ಸರ್ಕಾರಿ ಶಾಲೆ ಅವರಣದಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ.ಜಾತಿ, ಪ.ಪಂಗಡ ಸೇರಿದಂತೆ ಇತರೆ ವರ್ಗದ ಕಡು ಬಡ ಕುಟುಂಬಗಳು ಪಡಿತರ ಚೀಟಿಗಳಿಂದ ವಂಚಿತರಾಗಿದ್ದು, ಅರ್ಹರಿಗೆ ಸಮರ್ಪಕ ಪಡಿತರ ಚೀಟಿ ಕಲ್ಪಿಸಲು ನ್ಯಾಯ ಬೆಲೆ ಅಂಗಡಿಯ ಉಸ್ತುವಾರಿ ಅಧಿಕಾರಿಗಳು ಆಸಕ್ತಿವಹಿಸುವಂತೆ ಅವರು ಸಲಹೆ ನೀಡಿದರು.
ವಿವಿಧ ಯೋಜನೆಗಳ ಅಡಿ ಮನೆ ಹಂಚಿಕೆಯಲ್ಲಿ ಗ್ರಾಪಂ ಮಟ್ಟದ ಅಧಿಕಾರಿಗಳು  ರಾಜಕೀಯ ಮಾಡದೇ ಗ್ರಾಮ ಸಭೆಗಳನ್ನು ಏರ್ಪಡಿಸಿ ಅರ್ಹರಿಗೆ ಮನೆ ಸೌಲಭ್ಯ ಕಲ್ಪಿಸಬೇಕು. ಮನೆ ಹಂಚಿಕೆಯಲ್ಲಿ ರಾಜಕೀಯ ಮಾಡದೇ ಪಕ್ಷಾತೀತವಾಗಿ ಅರ್ಹರಿಗೆ ಮನೆ ಸಿಗುವ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗಬೇಕು ಎಂದ ಅವರು ಈಗಾಗಲೇ ಚಾಲ್ತಿಯಲ್ಲಿರುವ ಮನೆಗಳಿಗೆ ತಾಂತ್ರಿಕ ದೋಷದಿಂದ ಮನೆ ಬಿಲ್ ತಡೆಹಿಡಿದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.