ತುಮಕೂರು

ಸಾಮೂಹಿಕ ವಿವಾಹ ಆದರ್ಶ ಜೀವನಕ್ಕೆ ನಾಂದಿ

Published On :

ಶಿರಾ: ಸಾಮೂಹಿಕ ವಿವಾಹಗಳು ಕುಟುಂಬಗಳನ್ನು ಸಾಲಾದ ಶೂಲದಿಂದ ತಪ್ಪಿಸುವುದಲ್ಲದೆ, ಹೆತ್ತವರಿಗೆ ನೆಮ್ಮದಿ ನೀಡುತ್ತವೆ ಎಂದು ಪಟ್ಟನಾಯಕನಹಳ್ಳಿ ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮಿಗಳು ತಿಳಿಸಿದರು.
ಅವರು ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ಸಮಾಜ ಸೇವಕ ಎನ್.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಶ್ರೀ ಶಿವ ದೇವಾಲಯದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಸರಳ ಸಾಮೂಹಿಕ ವಿವಾಹಗಳು ಆದರ್ಶ ಜೀವನಕ್ಕೆ ನಾಂದಿಯಾಗುತ್ತದೆ. ನೂತನ ವಧು-ವರರು ಮಾದರಿ ಜೀವನ ನಡೆಸಿ ದುಶ್ಚಟಗಳಿಂದ ದೂರವಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಎಂದ ಶ್ರೀಗಳು ಶಿವ ದೇವಸ್ಥಾನ ನಿರ್ಮಾಣದಲ್ಲಿ ಸಂಪೂರ್ಣ ತೊಡಗಿಸಿಕೊಂಡು ಸಾಮೂಹಿಕ ವಿವಾಹಕ್ಕೂ ಶ್ರಮಿಸಿದ ಎನ್.ತಿಪ್ಪೇಸ್ವಾಮಿ ಅವರ ಸೇವೆ ಇನ್ನೂ ಮುಂದುವರಿಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ಸತ್ಯನಾರಾಯಣ, ದೇವಸ್ಥಾನಗಳು-ಮದುವೆ ಸಮಾರಂಭಗಳು ಎಲ್ಲರಲ್ಲಿ ಶಾಂತಿ ನೆಮ್ಮದಿ ನೀಡಿ ಭ್ರಾತೃತ್ವ ಭಾವನೆ ಬೆಳೆಸುವ ಸಾಧನಗಳಾಗಿದ್ದು, ಕ್ಯಾದಿಗುಂಟೆ ಗ್ರಾಮದಲ್ಲೇ ಇರುವ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಎನ್. ತಿಪ್ಪೇಸ್ವಾಮಿ ಅವರಿಂದ ಜೀರ್ಣೋದ್ಧಾರ ಪಡೆದು ಭಕ್ತಾದಿಗಳಿಗೆ ಸಮರ್ಪಣೆಯಾಗಲಿ ಎಂದರು.
ಸನ್ಮಾನ: ಸದರಿ ಬೃಹತ್ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧಕರಾದ ರಂಗಸ್ವಾಮಿ, ಎಂ.ಗುರುಸಿದ್ದನಾಯಕ, ಚಂದ್ರಶೇಖರ್, ಎಲ್.ರಾಧಾಕೃಷ್ಣ, ಜನ್ನಪ್ಪ, ಆರ್.ಎಸ್.ಕುಮಾರ್, ದೇವಸ್ಥಾನ ನಿವೇಶನ ದಾನಿಗಳಾದ ಕೆ.ಜೆ.ಮೂಡ್ಲಪ್ಪ, ಗೌಡಪ್ಪ, ನಾಗರಾಜು, ಜಯರಾಮಯ್ಯ ಇವರನ್ನು ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.
ಗುರುವಂದನೆ: ಶ್ರೀ ನಂಜಾವಧೂತ ಸ್ವಾಮಿ ಅವರಿಗೆ ಇದೇ ಸಂದರ್ಭದಲ್ಲಿ ಅಪಾರ ಭಕ್ತವೃಂದದ ಪರವಾಗಿ ಅದ್ಧೂರಿಯಾಗಿ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.
ಮಾಂಗಲ್ಯ ವಿತರಣೆ: ಸಾಮೂಹಿಕ ವಿವಾಹ ಸಮಾರಂಭದಲ್ಲಿ ನಗರಸಭೆ ಸದಸ್ಯ ಆರ್.ಉಗ್ರೇಶ್, ಬಿಬಿಎಂಪಿ ಸದಸ್ಯ ತಿಮ್ಮನಂಜಯ್ಯ ಅವರು ನೂತನ ವಧು-ವರರಿಗೆ ಮಾಂಗಲ್ಯ ವಿತರಣೆ ಮಾಡಿದರು.
ಈ ಬೃಹತ್ ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಸಮಾಜ ಸೇವಕ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ಆರ್.ಉಗ್ರೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.